Kannada News Next

entertainment

ನಾಳೆ ಬೆಂಗಳೂರಿನಲ್ಲಿ ‘DKD ಸೂಪರ್ ಮಾಮ್’ ಆಡಿಷನ್; ಸ್ಥಳ, ಸಮಯದ ಮಾಹಿತಿ ಇಲ್ಲಿದೆ

ಜನಪ್ರಿಯ ರಿಯಾಲಿಟಿ ಶೋ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಇದೀಗ ತಾಯಂದಿರಿಗಾಗಿ ವಿಶೇಷವಾಗಿ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್’ ಸರಣಿಯನ್ನು ಆರಂಭಿಸುತ್ತಿದೆ.

By Meghana Pranuth | ಮೇಘನಾ ಪ್ರಣೂತ್‌

ಬೆಂಗಳೂರು:

 

ವೇದಿಕೆಯ ಮೇಲೆ ತಮ್ಮ ಪ್ರತಿಭೆ ಪ್ರದರ್ಶಿಸಲು ಬಯಸುವ ಅಮ್ಮಂದಿರಿಗಾಗಿ ಜೀ ಕನ್ನಡ ವಾಹಿನಿಯು ಮತ್ತೊಂದು ಸುವರ್ಣಾವಕಾಶ ತಂದಿದೆ. ಜನಪ್ರಿಯ ರಿಯಾಲಿಟಿ ಶೋ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಇದೀಗ ತಾಯಂದಿರಿಗಾಗಿ ವಿಶೇಷವಾಗಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್ ಸರಣಿಯನ್ನು ಆರಂಭಿಸುತ್ತಿದ್ದು, ಇದರ ಮೊದಲ ಹಂತದ ಮೆಗಾ ಆಡಿಷನ್ ಆಗಸ್ಟ್ 2 ರಂದು (ಭಾನುವಾರ) ಬೆಂಗಳೂರಿನಲ್ಲಿ ನಡೆಯಲಿದೆ.

ಸಾಮಾನ್ಯವಾಗಿ ರಿಯಾಲಿಟಿ ಶೋಗಳಲ್ಲಿ ಯುವಜನತೆಗೆ ಹೆಚ್ಚು ಅವಕಾಶ ಸಿಗುತ್ತದೆ. ಆದರೆ ಈ ಶೋ ಮೂಲಕ ಗೃಹಿಣಿಯರು ಹಾಗೂ ಉದ್ಯೋಗಸ್ಥ ಮಹಿಳೆಯರು ಸೇರಿದಂತೆ ಪ್ರತಿಯೊಬ್ಬ ಅರ್ಹ ತಾಯಂದಿರು ತಮ್ಮ ಕೌಶಲವನ್ನು ಜಗತ್ತಿಗೆ ಪ್ರದರ್ಶಿಸಲು ವೇದಿಕೆ ಸಿಕ್ಕಂತಾಗಿದೆ.

ಆಡಿಷನ್ ನಡೆಯುವ ಸ್ಥಳ ಮತ್ತು ಸಮಯ:

  • ದಿನಾಂಕ: ಆಗಸ್ಟ್ 2, 2026 (ಭಾನುವಾರ)

  • ಸಮಯ: ಬೆಳಿಗ್ಗೆ 9:00 ಗಂಟೆಯಿಂದ ಆರಂಭ

  • ಸ್ಥಳ: ಮಧು ಆರ್ಟ್ಸ್ ಸ್ಟುಡಿಯೋ (ಅಬ್ಬಯ್ಯ ನಾಯ್ಡು ಸ್ಟುಡಿಯೋ), ಹನುಮಗಿರಿ ಲೇಔಟ್, ಚಿಕ್ಕಲಸಂದ್ರ, ಉತ್ತರಹಳ್ಳಿ ಹೋಬಳಿ, ಬೆಂಗಳೂರು.

ಭಾಗವಹಿಸುವ ಸ್ಪರ್ಧಿಗಳಿಗೆ ಮುಖ್ಯ ಸೂಚನೆಗಳು:

ಆಡಿಷನ್‌ನಲ್ಲಿ ಪಾಲ್ಗೊಳ್ಳುವ ಸ್ಪರ್ಧಿಗಳು ತಮ್ಮ ಇತ್ತೀಚಿನ ಪಾಸ್ಪೋರ್ಟ್ ಸೈಜ್ ಫೋಟೋ ಹಾಗೂ ವಿಳಾಸದ ಪುರಾವೆಯ (Address Proof) ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ತರಬೇಕು.

ಈ ಆಯ್ಕೆ ಪ್ರಕ್ರಿಯೆಯು ಸಂಪೂರ್ಣವಾಗಿ ಉಚಿತವಾಗಿದ್ದು, ಆಡಿಷನ್‌ಗಾಗಿ ಜೀ ಕನ್ನಡ ವಾಹಿನಿಯು ಯಾವುದೇ ರೀತಿಯ ಶುಲ್ಕವನ್ನು ನಿಗದಿಪಡಿಸಿಲ್ಲ.

ಬೆಂಗಳೂರು ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಲ್ಲಿ ನಡೆಯುವ ಆಡಿಷನ್ ವಿವರಗಳನ್ನು ಜೀ ಕನ್ನಡದ ಅಧಿಕೃತ ಸೋಶಿಯಲ್ ಮೀಡಿಯಾ ಪುಟಗಳಲ್ಲಿ ವೀಕ್ಷಿಸಬಹುದು.