News Next Kannada

entertainment

ಮೈ ಜುಮ್ ಅನ್ನಿಸೋ ಕಥೆಗಳು: ವೀಕೆಂಡ್‌ಗೆ ಬೆಸ್ಟ್ ಈ 5 ಮಲಯಾಳಂ ಕ್ರೈಮ್ ಸಿನಿಮಾಗಳು!

ಭಾರತೀಯ ಚಿತ್ರರಂಗದಲ್ಲಿ ಮಲಯಾಳಂ ಸಿನಿಮಾಗಳಿಗೆ ವಿಶಿಷ್ಟ ಸ್ಥಾನವಿದೆ. ಅದರಲ್ಲೂ ಕ್ರೈಮ್ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ವಿಭಾಗದಲ್ಲಿ ಮಲಯಾಳಂ ನಿರ್ದೇಶಕರು ನೀಡುವ ಅನುಭವ ಅಸಾಧಾರಣ.

By Meghana Pranuth | ಮೇಘನಾ ಪ್ರಣೂತ್‌
MalayalamMovies

ಮಲಯಾಳಂ ಚಿತ್ರರಂಗವು ಸಣ್ಣದೊಂದು ಎಳೆಯನ್ನಿಟ್ಟುಕೊಂಡು ಅದ್ಭುತ ಹಾಗೂ ಸೀಟ್-ಎಡ್ಜ್ ಥ್ರಿಲ್ಲರ್ ಸಿನಿಮಾಗಳನ್ನು ಕಟ್ಟಿಕೊಡುವುದರಲ್ಲಿ ನಿಪುಣವಾಗಿದೆ. ನೀವು ಕೊನೆಯವರೆಗೂ ಕೌತುಕ ಕಾಯ್ದುಕೊಳ್ಳುವ, ಡಬಲ್ ಥ್ರಿಲ್ ನೀಡುವ ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾಗಳ ಹುಡುಕಾಟದಲ್ಲಿದ್ದರೆ, ಖಂಡಿತವಾಗಿ ನಿಮ್ಮ ವಾಚ್‌ಲಿಸ್ಟ್‌ಗೆ ಸೇರಿಸಿಕೊಳ್ಳಬೇಕಾದ ಟಾಪ್ 5 ಮಲಯಾಳಂ ಸಿನಿಮಾಗಳ ಪಟ್ಟಿ ಇಲ್ಲಿದೆ.

1. ಅಂಜಾಮ್ ಪಾದಿರಾ (Anjaam Pathiraa)

Anjaam Pathiraa

ಸರಣಿ ಕೊಲೆಗಳ ಬೆನ್ನತ್ತುವ ಕ್ರಿಮಿನಲ್ ಸೈಕಾಲಜಿಸ್ಟ್ ಸುತ್ತ ಸಾಗುವ ಕಥೆ. ಜಬರ್‌ದಸ್ತ್ ಸಸ್ಪೆನ್ಸ್ ಮತ್ತು ಮಿಸ್ಟರಿ ಹೊಂದಿರುವ ಈ ಸಿನಿಮಾ ಕ್ರೈಮ್ ಥ್ರಿಲ್ಲರ್ ಪ್ರಿಯರಿಗೆ ಅತ್ಯುತ್ತಮ ಆಯ್ಕೆ. ಈ ಸಿನಿಮಾ ಸನ್ ನೆಕ್ಸ್ಟ್‌ನಲ್ಲಿ (Sun NXT) ಲಭ್ಯ.

2.ಕೊರೊನಾ ಪೇಪರ್ಸ್ (Corona Papers)

Corona Papers

ಕಳೆದುಹೋದ ಸರ್ವಿಸ್ ರಿವಾಲ್ವರ್ ಹಾಗೂ ಕನ್ನಗಳ್ಳತನದ ಸರಣಿ ಘಟನೆಗಳ ಸುತ್ತ ಹೆಣೆದಿರುವ ರೋಮಾಂಚನಕಾರಿ ಕಥೆ. ಒಮ್ಮೆ ವೀಕ್ಷಿಸಲು ಕುಳಿತರೆ ಕೊನೆಯವರೆಗೂ ಕುರ್ಚಿಗೆ ಅಂಟಿಕೂರುವಂತೆ ಮಾಡುತ್ತದೆ. ಈ ಸಿನಿಮಾ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ (Disney+ Hotstar) ನೋಡಬಹುದು

3. ಗೋಲಂ (Golam)

GOLAM

ಕಚೇರಿಯೊಂದರಲ್ಲಿ ನಡೆಯುವ ರಹಸ್ಯಮಯ ಕೊಲೆಯ ಸುತ್ತ ಸಿನಿಮಾದ ಕಥೆ ಸಾಗುತ್ತದೆ. ಕೊಲೆ ಮಾಡಿದ್ದು ಯಾರು ಮತ್ತು ಹೇಗೆ ಎಂಬ ಪ್ರಶ್ನೆಗಳು ವೀಕ್ಷಕರಲ್ಲಿ ಕೊನೆಯ ಕ್ಷಣದವರೆಗೂ ಸಸ್ಪೆನ್ಸ್ ಕಾಯ್ದುಕೊಳ್ಳುತ್ತವೆ. ಈ ಸಿನಿಮಾ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿರುತ್ತದೆ.

4. ಆಪರೇಷನ್ ಜಾವಾ (Operation Java)

Operation Java

ಸೈಬರ್ ಕ್ರೈಮ್ ಪ್ರಕರಣಗಳನ್ನು ಭೇದಿಸುವ ಇಬ್ಬರು ಎಂಜಿನಿಯರಿಂಗ್ ಪದವೀಧರರ ನೈಜ ಘಟನೆ ಆಧಾರಿತ ಕಥೆ. ಪ್ರತಿಯೊಂದು ಸನ್ನಿವೇಶವೂ ವೀಕ್ಷಕರ ನಿರೀಕ್ಷೆಗೂ ಮೀರಿದ ಥ್ರಿಲ್ ನೀಡುತ್ತದೆ. ಈ ಸಿನಿಮಾ ಜೀ5 ZEE5ನಲ್ಲಿ ವೀಕ್ಷಿಸಬಹುದು.

5. ಪುಲಿಮಡ (Pulimada)

Pulimada

ಜೋಜು ಜಾರ್ಜ್ ಮತ್ತು ಐಶ್ವರ್ಯಾ ರಾಜೇಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾ, ಹಳ್ಳಿಯೊಂದರಲ್ಲಿ ಹುಲಿ ಬಂದಾಗ ಉಂಟಾಗುವ ಆತಂಕ ಹಾಗೂ ಪೋಲಿಸ್ ಅಧಿಕಾರಿಯೊಬ್ಬನ ಮಾನಸಿಕ ಸಂಘರ್ಷದ ಸುತ್ತ ಸಾಗುತ್ತದೆ. ನೆಟ್‌ಫ್ಲಿಕ್ಸ್‌ನಲ್ಲಿ (Netflix) ಲಭ್ಯವಿರುತ್ತದೆ.

ಈ ವಾರಾಂತ್ಯದಲ್ಲಿ (Weekend) ಡಬಲ್ ಥ್ರಿಲ್ ಅನುಭವ ಪಡೆಯಲು ಈ 5 ಅತ್ಯುತ್ತಮ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳನ್ನು ತಪ್ಪದೇ ವೀಕ್ಷಿಸಿ!