65 ವರ್ಷದ ವೈದ್ಯರಿಗೆ ದಿನಕ್ಕೆ 2 ವಯಾಗ್ರ ಮಾತ್ರೆ ತಿನ್ನಿಸಿ ಬ್ಲ್ಯಾಕ್‌ಮೇಲ್ ಮಾಡಿ 2 ಕೋಟಿ ಪೀಕಿದ ನರ್ಸ್‌

ಖಾಸಗಿ ಆಸ್ಪತ್ರೆಯ ಮಾಲೀಕರು ಆಗಿರುವ ವೈದ್ಯರ ಖಾಸಗಿ ಪೋಟೋಗಳನ್ನು ಚಿತ್ರಿಸಿಕೊಂಡು, ಕಳ್ಳಾಟವಾಡಿದ ನರ್ಸ್‌ ಅನ್ನು ಕಮಲಾ ಎಂದು ಗುರುತಿಸಲಾಗಿದೆ. ನರ್ಸ್‌ ಕಮಲಾ ಹೆಚ್ಚಾಗಿ ಆಸ್ಪತ್ರೆಯಲ್ಲಿ ರಾತ್ರಿ ಪಾಳಯದಲ್ಲಿಯೇ ಕೆಲಸ ಮಾಡ್ತಾ ಇದ್ದಳು.

ರಾಜಸ್ಥಾನ : ಇದು ಸಿನಿಮಾ ಸ್ಟೋರಿಯನ್ನೇ ಮೀರಿಸುವಂತಿದೆ. ತಾನು ಕೆಲಸ ಮಾಡುತ್ತಿದ್ದ ಖಾಸಗಿ ಆಸ್ಪತ್ರೆಯ 65 ವರ್ಷದ ಹಿರಿಯ ವೈದ್ಯರನ್ನೇ ಟಾರ್ಗೇಟ್‌ ಮಾಡಿದ ನರ್ಸ್‌ ದಿನಕ್ಕೆ 2 ವಯಾಗ್ರ ಮಾತ್ರೆಯನ್ನು ನೀಡಿ, ವೈದ್ಯರ ಖಾಸಗಿ ಪೋಟೋಗಳನ್ನು ಇಟ್ಟುಕೊಂಡು ಬರೋಬ್ಬರಿ 2 ಕೋಟಿಗೂ ಅಧಿಕ ಬ್ಲ್ಯಾಕ್‌ ಮೇಲ್‌ ಮಾಡಿದ್ದಾಳೆ. ವೈದ್ಯರು ನೀಡಿದ ದೂರಿನ ಆಧಾರದ ಮೇಲೆ ನರ್ಸ್‌ ಸದ್ಯ ಜೈಲು ಸೇರಿದ್ದಾಳೆ.

ಚಹಾ ತರುವ ನೆಪದಲ್ಲಿ ಕಳ್ಳಾಟ !

ಖಾಸಗಿ ಆಸ್ಪತ್ರೆಯ ಮಾಲೀಕರು ಆಗಿರುವ ವೈದ್ಯರ ಖಾಸಗಿ ಪೋಟೋಗಳನ್ನು ಚಿತ್ರಿಸಿಕೊಂಡು, ಕಳ್ಳಾಟವಾಡಿದ ನರ್ಸ್‌ ಅನ್ನು ಕಮಲಾ ಎಂದು ಗುರುತಿಸಲಾಗಿದೆ. ನರ್ಸ್‌ ಕಮಲಾ ಹಾಗೂ ವೈದ್ಯರ ಜೊತೆಗೆ  ಹೆಚ್ಚಾಗಿ ಆಸ್ಪತ್ರೆಯಲ್ಲಿ ರಾತ್ರಿ ಪಾಳಯದಲ್ಲಿಯೇ ಕೆಲಸ ಮಾಡ್ತಾ ಇದ್ದಳು. ಟೀ ಕೊಡುವ ನೆಪದಲ್ಲಿ ಆಗಾಗ ವೈದ್ಯರ ಕ್ಯಾಬಿನ್‌ಗೆ ಎಂಟ್ರಿ ಕೊಡುತ್ತಿದ್ದಳು. ಈ ವೇಳೆಯಲ್ಲಿ ವೈದ್ಯರಿಗೆ ಅರಿವೆ ಇಲ್ಲದಂತೆ ಅವರ ಖಾಸಗಿ ಚಿತ್ರಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡಿದ್ದಳು. ಇದಾಗ ಬಳಿಕ ತನ್ನ ಅಸಲಿ ಆಟ ಶುರುವಿಟ್ಟುಕೊಂಡಿದ್ದಾರೆ.

ವೈದ್ಯರ ಪೋಟೋ ತೋರಿಸಿ ಹಣಕ್ಕೆ ಡಿಮ್ಯಾಂಡ್‌ ಇಟ್ಟಿದ್ದಾಳೆ. ತನಗೆ ಹಣ ನೀಡದೇ ಇದ್ರೆ ಅತ್ಯಾಚಾರ ಪ್ರಕರಣ ದಾಖಲಿಸುವ ಬೆದರಿಕೆಯನ್ನೂ ಒಡ್ಡಿದ್ದಾಳೆ. ಮಾತ್ರವಲ್ಲ ಖಾಸಗಿ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಮಾಡುವುದಾಗಿಯೂ ಬೆದರಿಸಿದ್ದಾಲೆ. ಇದರಿಂದ ಹೆದರಿದ ವೈದ್ಯರು 2 ಕೋಟಿಗೂ ಅಧಿಕ ಹಣ ನೀಡಿದ್ದಾರೆ.

ಡಿಜಿಟಲ್‌ ಅರೆಸ್ಟ್‌ ಮಾದರಿಯಲ್ಲಿ ವೈದ್ಯರ ಮೇಲೆ ಕಣ್ಗಾವಲು

ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆ ಮಾಸಿಕವಾಗಿ ಸುಮಾರು 12 ಸಾವಿರ ರೂಪಾಯಿ ವೇತನ ಪಡೆಯುತ್ತಿದ್ದಳು. ಆಸ್ಪತ್ರೆಯ ಮಾಲೀಕರಾದ ವೈದ್ಯರನ್ನೇ ತನ್ನ ಕಂಟ್ರೋಲ್‌ನಲ್ಲಿ ಇಟ್ಟುಕೊಂಡಿದ್ದಳು. ವೈದ್ಯರು ತನ್ನೊಂದು ಸಂಪರ್ಕದಲ್ಲಿ ಇರುವ ಸಲುವಾಗಿಯೇ ವೈದ್ಯರಿಗೆ ಪ್ರತ್ಯೇಕವಾದ ಮೊಬೈಲ್‌, ಸಿಮ್‌ ಕಾರ್ಡ್‌ ಖರೀದಿಸಿಕೊಟ್ಟಿದ್ದಳು. ಆಸ್ಪತ್ರೆಯ ಸಿಸಿ ಕ್ಯಾಮೆರಾ ಪಾಸ್‌ವರ್ಡ್‌ ಕೂಡ ಪಡೆದುಕೊಂಡು ವೈದ್ಯರ ಪ್ರತಿಯೊಂದು ನಡೆಯ ಮೇಲೆ ನಿಗಾ ಇಡುತ್ತಿದ್ದಳು.

ಕೆಲಸದ ನಿಮಿತ್ತ ವೈದ್ಯರು ಅಹಮದಾಬಾದ್‌ಗೆ ಹೋಗಿದ್ದ ವೇಳೆಯಲ್ಲಿ ಸಾವಿರಕ್ಕೂ ಅಧಿಕ ಕರೆಗಳನ್ನು ಮಾಡಿ ಕಿರುಕುಳ ನೀಡಿದ್ದಳು. ವೈದ್ಯರು ಪೋನ್‌ ಕರೆ ರಿಸೀವ್‌ ಮಾಡದೇ ಇದ್ದಾಗ ಆಸ್ಪತ್ರೆಯ ಇತರ ಸಿಬ್ಬಂದಿಗಳಿಗೆ ಪೋಟೋ ತೋರಿಸಿಯೂ ಬ್ಲ್ಯಾಕ್‌ಮೇಲ್‌ ಮಾಡಿದ್ದಳು. ಅಷ್ಟೇ ಅಲ್ಲದೇ ಖಾಲಿ ಚೆಕ್‌, ಸ್ಟ್ಯಾಂಪ್‌ ಪೇಪರ್‌ ಮೇಲೆ ಬಲವಂತವಾಗಿ ಸಹಿ ಹಾಕಿಸಿಕೊಂಡು ಬ್ಯಾಂಕ್‌ ಲಾಕರ್‌ನಲ್ಲಿ ಇಟ್ಟುಕೊಂಡಿದ್ದಳು ಎಂದು ವೈದ್ಯರು ಆರೋಪಿಸಿದ್ದಾರೆ.

 

ಜೈಲು ಸೇರಿದ ಖತರ್ನಾಕ್‌ ನರ್ಸ್‌

ನರ್ಸ್‌ ಆಗಿ ಕೆಲಸ ಮಾಡುತ್ತಿದ್ದ ಕಮಲಾ ವೈದ್ಯರಿಂದ 2 ಕೋಟಿಗೂ ಅಧಿಕ ಹಣ ವಸೂಲಿ ಮಾಡಿದ್ದರೂ ಕೂಡ ಆಕೆಯ ಹಣದ ದಾಹ ತೀರಿರಲಿಲ್ಲ. ವೈದ್ಯರಿಗೆ ಇನ್ನಷ್ಟು ಮಾನಸಿಕ ಕಿರುಕುಳ, ಹಣದ ಬೇಡಿಕೆ ಹೆಚ್ಚುತ್ತಾ ಹೋದಂತೆ, ಬೇಸತ್ತ ವೈದ್ಯರು ಆಸ್ಪತ್ರೆಯ ಖಾತೆ ಹಾಗೂ ತನ್ನ ಖಾತೆಯಿಂದ ಸುಮಾರು 2 ಕೋಟಿ ರೂಪಾಯಿ ಹಣ ನೀಡಿದ್ದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಬಾರ್ಮೇರ್‌ ಹೆಚ್ಚುವರಿ ಎಸ್‌ಪಿ ನಿತೇಶ್‌ ಆರ್ಯ ನೇತೃತ್ವದ ತಂಡ ಕಾರ್ಯಾಚರಣೆಯನ್ನು ನಡೆಸಿ ನರ್ಸ್‌ ಅನ್ನು ಬಂಧಿಸಿದ್ದಾರೆ. ಆಕೆಯ ಬಳಿಯಲ್ಲಿದ್ದ 17 ಸಾವಿರ ರೂಪಾಯಿ ನಗದು ವಶ ಪಡಿಸಿಕೊಂಡಿದ್ದಾರೆ. ಆದರೆ ವೈದ್ಯರು ಮಾಡಿರುವ ಆರೋಪವನ್ನು ನರ್ಸ್‌ ಕಮಲ ತಳ್ಳಿ ಹಾಕಿದ್ದಾಳೆ, ವೈದ್ಯರು ತಮ್ಮ ತಪ್ಪು ಮುಚ್ಚಿಕೊಳ್ಳುವ ಸಲುವಾಗಿ ನನ್ನ ಮೇಲೆ ಸುಳ್ಳು ಕೇಸು ದಾಖಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವೈದ್ಯರು ನೀಡಿರುವ ದೂರಿನ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದಾರೆ. ನಿಜಕ್ಕೂ ಆಕೆ ವೈದ್ಯರಿಗೆ ಹಣ ಪಡೆದು ಕಿರುಕುಳ ನೀಡಿದ್ದಾಳಾ ? ಅನ್ನೋ ಬಗ್ಗೆ ತನಿಖೆ ನಡೆಯುತ್ತಿದೆ. ಅಲ್ಲದೇ ಕಮಲಾ ಹೇಳಿಕೆಯನ್ನೂ ಪರಿಶೀಲಿಸುತ್ತಿದ್ದಾರೆ. ಒಟ್ಟಿನಲ್ಲಿ ಪೊಲೀಸರ ತನಿಖೆಯ ನಂತರಷ್ಟೇ ಸತ್ಯಾಸತ್ಯತೆ ಹೊರಬರೋದಕ್ಕೆ ಸಾಧ್ಯ.

ದಿನಕ್ಕೆ ಎರಡು ವಯಾಗ್ರ ಮಾತ್ರೆ : ಅನೈತಿಕ ಸಂಬಂಧ

ನರ್ಸ್‌ ಕಮಲಾಗೆ ವೈದ್ಯರ ಜೊತೆಗೆ ಸಂಬಂಧ ಇತ್ತು ಅನ್ನೋದು ಮಾಹಿತಿಯೂ ಬಯಲಾಗಿದೆ. ನರ್ಸ್‌ ಕಮಲಾ ವೈದ್ಯರಿಗೆ ದಿನಕ್ಕೆ 2 ವಯಾಗ್ರ ಮಾತ್ರೆಗಳನ್ನು ನೀಡಿ, ತನ್ನ ದಾಳಕ್ಕೆ ವೈದ್ಯರನ್ನು ಬಳಸಿಕೊಂಡಿದ್ದರು. ನರ್ಸ್‌ ಒತ್ತಾಯ ಮಾಡಿದಂತೆ ವೈದ್ಯರು ದಿನಕ್ಕೆ 2 ವಯಾತ್ರ ಮಾತ್ರೆಯನ್ನೂ ಸೇವಿಸಿದ್ದರು. ಆದರೆ ನಂತರದಲ್ಲಿ ಆಕೆಯ ಒತ್ತಡ ಹೆಚ್ಚಾದಂತೆ ವೈದ್ಯರು 2 ವಯಾಗ್ರ ಮಾತ್ರೆ ಸೇವನೆ ನಿಲ್ಲಿಸಿದ್ದರು ಎನ್ನಲಾಗುತ್ತಿದೆ.

rajasthan nurse blackmails 65 year old doctor extorts 2 crore barmer

Exit mobile version