ಫೆಬ್ರವರಿ 19ರಿಂದ ಪವಿತ್ರ ರಂಜಾನ್ ಉಪವಾಸ ಆರಂಭ: ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

Ramadan 2026 Date and Time Table: ಮುಸ್ಲಿಂ ಬಾಂಧವರ ಅತ್ಯಂತ ಪವಿತ್ರ ಮಾಸವಾದ ‘ರಂಜಾನ್’ (Ramadan 2026) ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಚಂದ್ರದರ್ಶನದ ಆಧಾರದ ಮೇಲೆ ಭಾರತದಲ್ಲಿ ಫೆಬ್ರವರಿ 19, 2026 ರಿಂದ ಮೊದಲ ರೋಜಾ (ಉಪವಾಸ) ಆರಂಭವಾಗಲಿದೆ.

ಚಂದ್ರದರ್ಶನ ಮತ್ತು ಆರಂಭದ ದಿನಾಂಕ

ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ, ರಂಜಾನ್ ಮಾಸವು ಚಂದ್ರನ ದರ್ಶನದೊಂದಿಗೆ ಆರಂಭವಾಗುತ್ತದೆ. ಫೆಬ್ರವರಿ 18ರ ಸಂಜೆ 6:15 ರಿಂದ 6:45 ರ ಅವಧಿಯಲ್ಲಿ ಆಕಾಶದಲ್ಲಿ ಚಂದ್ರದರ್ಶನವಾಗುವ ಸಾಧ್ಯತೆಯಿದ್ದು, ಅಂದು ಚಂದ್ರ ಕಂಡರೆ ಫೆಬ್ರವರಿ 19ರ ಗುರುವಾರದಿಂದ ಅಧಿಕೃತವಾಗಿ ಉಪವಾಸ ವ್ರತಗಳು ಶುರುವಾಗಲಿವೆ. ಒಂದು ವೇಳೆ ಅಂದು ಚಂದ್ರ ಕಾಣದಿದ್ದರೆ ಫೆಬ್ರವರಿ 20ರಿಂದ ರಂಜಾನ್ ಆರಂಭವಾಗಲಿದೆ.

ರಂಜಾನ್ 2026: ಪ್ರಮುಖ ವೇಳಾಪಟ್ಟಿ (ಅಂದಾಜು ಸಮಯ)

ರಂಜಾನ್ ಮಾಸದಲ್ಲಿ ಸೂರ್ಯೋದಯಕ್ಕೆ ಮುನ್ನ ಸೇವಿಸುವ ಆಹಾರವನ್ನು ‘ಸೆಹ್ರಿ’ ಹಾಗೂ ಸೂರ್ಯಾಸ್ತದ ನಂತರ ಉಪವಾಸ ಬಿಡುವುದನ್ನು ‘ಇಫ್ತಿಯಾರ್’ ಎಂದು ಕರೆಯಲಾಗುತ್ತದೆ.

ದಿನಾಂಕ (2026)ಸೆಹ್ರಿ ಸಮಯ (ಮುಕ್ತಾಯ)ಇಫ್ತಿಯಾರ್ ಸಮಯ (ಆರಂಭ)
ಫೆಬ್ರವರಿ 19 (ಮೊದಲ ರೋಜಾ)05:36 AM06:15 PM
ಫೆಬ್ರವರಿ 2505:31 AM06:19 PM
ಮಾರ್ಚ್ 0105:27 AM06:22 PM
ಮಾರ್ಚ್ 1005:18 AM06:28 PM
ಮಾರ್ಚ್ 20 (ಕೊನೆಯ ರೋಜಾ)05:06 AM06:33 PM

(ಗಮನಿಸಿ: ಸ್ಥಳೀಯ ಸೂರ್ಯೋದಯ ಮತ್ತು ಸೂರ್ಯಾಸ್ತದ ಆಧಾರದ ಮೇಲೆ ಸಮಯವು ನಗರದಿಂದ ನಗರಕ್ಕೆ ಕೆಲವು ನಿಮಿಷಗಳ ವ್ಯತ್ಯಾಸವಿರುತ್ತದೆ.)

ರಂಜಾನ್ ಮಾಸದ ವೈಶಿಷ್ಟ್ಯ

ಸೆಹ್ರಿ ಮತ್ತು ಇಫ್ತಿಯಾರ್ ಸಂಪ್ರದಾಯ

ಬೆಳಗಿನ ಜಾವದ ಸೆಹ್ರಿ ಆಹಾರವು ಇಡೀ ದಿನಕ್ಕೆ ಚೈತನ್ಯ ನೀಡುವಂತಿರಲಿ ಎಂದು ಹಣ್ಣುಗಳು, ಧಾನ್ಯಗಳು ಮತ್ತು ಹೆಚ್ಚಿನ ನೀರನ್ನು ಸೇವಿಸಲಾಗುತ್ತದೆ. ಸಂಜೆ ಸೂರ್ಯಾಸ್ತದ ನಂತರ ಇಫ್ತಿಯಾರ್ ವೇಳೆ ಸಾಂಪ್ರದಾಯಿಕವಾಗಿ ಖರ್ಜೂರ (Dates) ಮತ್ತು ನೀರನ್ನು ಸೇವಿಸುವ ಮೂಲಕ ಉಪವಾಸವನ್ನು ಅಂತ್ಯಗೊಳಿಸಲಾಗುತ್ತದೆ.

Exit mobile version