ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಕಂಬೈನ್ಡ್ ಜಿಯೋ ಸೈಂಟಿಸ್ಟ್ ಪರೀಕ್ಷೆ 2027 ಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಮೂಲಕ ಯುಪಿಎಸ್‌ಸಿ ಒಟ್ಟು 127 ಹುದ್ದೆಗಳನ್ನು ಬರ್ತಿ ಮಾಡಿಕೊಳ್ಳಲಿದೆ. ಗಣಿ ಸಚಿವಾಲಯದ ಭೂವೈಜ್ಞಾನಿಕ ಸಮೀಕ್ಷೆ (GSI) ಜಲಶಕ್ತಿ ಸಚಿವಾಲಯದ ಅಡಿಯಲ್ಲಿ ಕೇಂದ್ರೀಯ ಅಂತರ್ಜಲ ಮಂಡಳಿಯಲ್ಲಿ ಬರುವ ಗ್ರೂಪ್ ಎ ಮತ್ತು ಬಿ ವರ್ಗದ ಹುದ್ದೆಗಳಿಗಾಗಿ ಈ ನೇಮಕಾತಿ ನಡೆಯಲಿದೆ. ಈ ನೇಮಕಾತಿಗಾಗಿ ಅರ್ಜಿ ಸಲ್ಲಿಕೆ ಈಗಾಗಲೇ ಪ್ರಾರಂಭವಾಗಿದೆ. ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 22 ರೊಳಗೆ ಅರ್ಜಿ ಸಲ್ಲಿಸಬೇಕು.
ಶೈಕ್ಷಣಿಕ ಅರ್ಹತೆ
ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಕಂಬೈನ್ಡ್ ಜಿಯೋ ಸೈಂಟಿಸ್ಟ್ ಹುದ್ದೆಗೆ ಅನುಗುಣವಾಗಿ ಸಂಬಂಧಿತ ವಿಭಾಗಗಳಲ್ಲಿ (ಭೂವಿಜ್ಞಾನ, ರಸಾಯನಶಾಸ್ತ್ರ, ಅನ್ವಯಿಕ ಭೂವಿಜ್ಞಾನ, ಸಾಗರ ಭೂವಿಜ್ಞಾನ, ಭೂ ವಿಜ್ಞಾನ ಮತ್ತು ಸಂಪನ್ಮೂಲ ನಿರ್ವಹಣೆ, ಸಾಗರಶಾಸ್ತ್ರ, ಜಲಭೌತಶಾಸ್ತ್ರ, ಭೂಭೌತಶಾಸ್ತ್ರ) ಸ್ನಾತಕೋತ್ತರ ಪದವಿ ಅಥವಾ ಇಂಟಿಗ್ರೇಟೆಡ್ ಎಂ.ಎಸ್ಸಿ. ಪೂರ್ಣಗೊಳಿಸಿರಬೇಕು.
ವಯೋಮಿತಿ
ಜನವರಿ 1, 2027 ರಂತರ ಅಭ್ಯರ್ಥಿಯ ವಯಸ್ಸು 21 ರಿಂದ 32 ವರ್ಷಗಳ ನಡುವೆ ಇರಬೇಕು. ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯಿರುತ್ತದೆ.
ಆಯ್ಕೆ ಹೇಗೆ?
ಈ ಹುದ್ದೆಗಳಿಗೆ ಆಯ್ಕೆಯು ಮೂರು ಹಂತಗಳಲ್ಲಿ ನಡೆಯಲಿದೆ. ಹಂಟ – 1 ಪೂರ್ವಭಾವಿ ಪರೀಕ್ಷೆ (ಪ್ರಿಲಿಮ್ಸ್) – 400 ಅಂಕಗಳ ವಸ್ತುನಿಷ್ಠ ಪ್ರಕಾರ. ಈ ಪರೀಕ್ಷೆಯಲ್ಲಿ ತಪ್ಪು ಉತ್ತರಕ್ಕೆ 1/3 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. ಹಂತ – 2 ಮುಖ್ಯ ಪರೀಕ್ಷೆ (ಮೇನ್ಸ್) 600 ಅಂಕಗಳ ಪರೀಕ್ಷೆ. ಹಂತ – 3 ಸಂದರ್ಶನ / ವ್ಯಕ್ತಿತ್ವ ಪರೀಕ್ಷೆ 200 ಅಂಕಗಳು.
ಅರ್ಜಿ ಶುಲ್ಕ
ಈ ನೇಮಕಾತಿಯಲ್ಲಿ ಪಾಲ್ಗೊಳ್ಳಲು 200 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಆದರೆ ಎಸ್‌ಸಿ, ಎಸ್‌ಟಿ, ದಿವ್ಯಾಂಗರು ಮತ್ತು ಮಹಿಳೆಯರಿಗೆ ಯಾವುದೇ ಶುಲ್ಕವಿರುವುದಿಲ್ಲ.
ಪರೀಕ್ಷೆ ನಡೆಯುವ ಸ್ಥಳಗಳು
ಪ್ರಿಲಿಮ್ಸ್ ಪರೀಕ್ಷೆಯು ಹೈದರಾಬಾದ್, ದೆಹಲಿ, ಬೆಂಗಳೂರು, ಕೋಲ್ಕತ್ತಾ, ತಿರುವನಂತಪುರಂ, ಚೆನ್ನೈ, ಲಕ್ನೋ, ಪ್ರಯಾಗರಾಜ್, ಜೈಪುರ, ಭೋಪಾಲ್ ನಲ್ಲಿ ನಡೆಯಲಿದೆ.
ಮೇನ್ಸ್ ಪರೀಕ್ಷೆಯು ಹೈದರಾಬಾದ್, ದೆಹಲಿ, ಮುಂಬೈ, ಕೋಲ್ಕತ್ತಾ, ಬೆಂಗಳೂರು, ಲಕ್ನೋ, ಭೋಪಾಲ್, ದಿಸ್ಪುರ್, ಶಿಮ್ಲಾ ದಲ್ಲಿ ನಡೆಯಲಿದೆ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆಗೆ ಕೊನೆಯ ದಿನ : ಸೆಪ್ಟೆಂಬರ್ 22
ಪ್ರಿಲಿಮ್ಸ್ 2027 : ಜನವರಿ 10
ಮೇನ್ಸ್ 2027 : ಜೂನ್ 19 ಮತ್ತು 20
ಅರ್ಜಿ ಸಲ್ಲಿಕೆ ಹೇಗೆ?
ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಮತ್ತು ಇತರ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ upsc.gov.in ಗೆ ಭೇಟಿ ನೀಡಿ.