ದೇಶದ ಸೇನಾ ತುಕುಡಿಗಳಿಗೆ ಯುದ್ಧ ಮತ್ತು ಶಾಂತಿ ಎರಡೂ ಸಂದರ್ಭದಲ್ಲಿ ಶಸ್ತ್ರಾಸ್ತ್ರ, ಸಾಮಗ್ರಿ, ಮದ್ದುಗುಂಡುಗಳು, ಬಟ್ಟೆ, ವಾಹನ ಮುಂತಾದ ವಸ್ತುಗಳನ್ನು ಸರಬರಾಜು ಮಾಡುವ ಕೆಲಸವನ್ನು ಸೇನಾ ಶಸ್ತ್ರ ದಳ ಅಥವಾ ಆರ್ಮಿ ಆರ್ಡಿನನ್ಸ್ ಕಾರ್ಪ್ಸ್ ನಿರ್ವಹಿಸುತ್ತದೆ. ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಎಒಸಿ ಗ್ರೂಪ್ ಸಿ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಅಧಿಕೃತ ಪ್ರಕಟಣೆಯ ಪ್ರಕಾರ ಒಟ್ಟೂ 2615 ಗ್ರೂಪ್ ಸಿ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು ಹೀಗಿವೆ...
ಪ್ರಮುಖ ವಿವರಗಳು
ಖಾಲಿ ಹುದ್ದೆಗಳು : 2,615 ಹುದ್ದೆಗಳು
ಅರ್ಜಿ ಸಲ್ಲಿಸುವ ದಿನಾಂಕ : ಅರ್ಜಿ ಸಲ್ಲಿಕೆಯು ಆಗಸ್ಟ್ 24, 2026 ರಿಂದ ಪ್ರಾರಂಭವಾಗಿ ಸೆಪ್ಟೆಂಬರ್ 22, 2026 ರವರೆಗೆ ನಡೆಯಲಿದೆ.
ಅರ್ಜಿ ಸಲ್ಲಿಸುವ ವಿಧಾನ : ಆನ್‌ಲೈನ್ ಮೂಲಕ
ಶೈಕ್ಷಣಿಕ ಅರ್ಹತೆ : ಹುದ್ದೆಗಳಿಗೆ ಅನುಗುಣವಾಗಿ ಪದವಿ/ಡಿಪ್ಲೊಮಾ/ಐಟಿಐ
ವಯೋಮಿತಿ : 18 ರಿಂದ 25 ವರ್ಷಗಳು (ಮೀಸಲು ವರ್ಗದವರು ಅಧಿಸೂಚನೆ ಪರಿಶೀಲಿಸಿ)
ವೇತನ : ₹ 18,000 ದಿಂದ ₹ 92,300 ವರೆಗೆ
ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ
ದೈಹಿಕ ಪರೀಕ್ಷೆ
ಟೈಪಿಂಗ್ ಪರೀಕ್ಷೆ (JOA ಗಳಿಗೆ ಮಾತ್ರ)
ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ
ಅರ್ಜಿ ಸಲ್ಲಿಕೆ ಹೇಗೆ?
ಆರ್ಮಿ ಆರ್ಡಿನನ್ಸ್ ಕಾರ್ಪ್ಸ್ ಗ್ರೂಪ್ ಸಿ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.