ಪದವೀಧರರಿಗೆ ಸುವರ್ಣಾವಕಾಶ; ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 350 ಹುದ್ದೆಗಳಿಗೆ ನೇಮಕಾತಿ

Central Bank of India Recruitment 2026: ದೇಶದ ಪ್ರತಿಷ್ಠಿತ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (CBI), 2026ನೇ ಸಾಲಿನ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು 350 ಸ್ಪೆಷಲಿಸ್ಟ್ ಆಫೀಸರ್ (SO) ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ.

ಹುದ್ದೆಗಳ ವಿವರ ಮತ್ತು ಸಂಖ್ಯೆ:

ಈ ನೇಮಕಾತಿ ಅಡಿಯಲ್ಲಿ ಎರಡು ಪ್ರಮುಖ ವಿಭಾಗಗಳಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ:

  1. ಮಾರ್ಕೆಟಿಂಗ್ ಆಫೀಸರ್ (ಸ್ಕೇಲ್-I): 300 ಹುದ್ದೆಗಳು.
  2. ಫಾರಿನ್ ಎಕ್ಸ್ಚೇಂಜ್ ಆಫೀಸರ್ (ಸ್ಕೇಲ್-III): 50 ಹುದ್ದೆಗಳು.

ಅರ್ಹತೆಗಳು:

ಪ್ರಮುಖ ದಿನಾಂಕಗಳು:

ಆಯ್ಕೆ ಪ್ರಕ್ರಿಯೆ ಮತ್ತು ವೇತನ:

ನೇಮಕಾತಿಯು ಆನ್‌ಲೈನ್ ಲಿಖಿತ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನ ಎಂಬ ಎರಡು ಹಂತಗಳಲ್ಲಿ ನಡೆಯಲಿದೆ. ಅಂತಿಮವಾಗಿ ಆಯ್ಕೆಯಾದ ಮಾರ್ಕೆಟಿಂಗ್ ಆಫೀಸರ್‌ಗಳಿಗೆ ₹48,480 ರಿಂದ ₹85,920 ವರೆಗೆ ಮತ್ತು ಫಾರಿನ್ ಎಕ್ಸ್ಚೇಂಜ್ ಆಫೀಸರ್‌ಗಳಿಗೆ ₹85,920 ರಿಂದ ₹1,05,280 ರ ಶ್ರೇಣಿಯಲ್ಲಿ ಮೂಲ ವೇತನ ಹಾಗೂ ಇತರ ಸವಲತ್ತುಗಳು ಸಿಗಲಿವೆ.

ಅರ್ಜಿ ಶುಲ್ಕ:

ಆಸಕ್ತ ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ವೆಬ್‌ಸೈಟ್ www.centralbankindia.co.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

Exit mobile version