3 ವರ್ಷಕ್ಕೆ 63,00,00,00,000 ಕೋಟಿ ಪ್ಯಾಕೇಜ್! ಗೂಗಲ್ ಸಿಇಒ ಸುಂದರ್ ಪಿಚೈ ವೇತನ ಭಾರಿ ಏರಿಕೆ

ಟೆಕ್ ದೈತ್ಯ ಗೂಗಲ್‌ನ ಮಾತೃ ಸಂಸ್ಥೆಯಾದ ‘ಅಲ್ಫಾಬೆಟ್’, ತನ್ನ ಸಿಇಒ ಸುಂದರ್ ಪಿಚೈ ಅವರ ಒಟ್ಟು ಸಂಭಾವನೆಯನ್ನು ಮುಂದಿನ ಮೂರು ವರ್ಷಗಳ ಅವಧಿಗೆ ಅಂದಾಜು 692 ಮಿಲಿಯನ್ ಡಾಲರ್ (ಸುಮಾರು ₹6,361 ಕೋಟಿ) ಗಳಿಗೆ ಹೆಚ್ಚಿಸಿದೆ. ಈ ಮೂಲಕ ಪಿಚೈ ಅವರು ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಅಧಿಕಾರಿಗಳಲ್ಲಿ ಒಬ್ಬರಾಗಿದ್ದಾರೆ ಎಂದು ‘ಫೈನಾನ್ಷಿಯಲ್ ಟೈಮ್ಸ್’ ವರದಿ ಮಾಡಿದೆ.

ವೇತನ ಪ್ಯಾಕೇಜ್‌ನ ಪ್ರಮುಖ ವಿವರಗಳು:

ಸಾದನೆಗೆ ಸಂದ ಗೌರವ:

2015 ರಲ್ಲಿ ಗೂಗಲ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡಾಗಿನಿಂದ, ಸುಂದರ್ ಪಿಚೈ ಅವರ ನೇತೃತ್ವದಲ್ಲಿ ಕಂಪನಿಯ ಮಾರುಕಟ್ಟೆ ಮೌಲ್ಯವು ಸುಮಾರು ಏಳು ಪಟ್ಟು ಹೆಚ್ಚಾಗಿದೆ. ಕಂಪನಿಯ ಮೌಲ್ಯವು 535 ಬಿಲಿಯನ್ ಡಾಲರ್‌ನಿಂದ 3.6 ಟ್ರಿಲಿಯನ್ ಡಾಲರ್‌ಗೆ ಏರಿಕೆಯಾಗಿರುವುದು ಅವರ ನಾಯಕತ್ವಕ್ಕೆ ಸಾಕ್ಷಿಯಾಗಿದೆ.

ಪದವೀಧರರಿಗೆ ಅಸಿಸ್ಟಂಟ್‌ ಮ್ಯಾನೇಜರ್‌ ಆಗುವ ಸುವರ್ಣಾವಕಾಶ: ಮಾರ್ಚ್‌ 19 ರೊಳಗೆ ಈ ಬ್ಯಾಂಕ್‌ಗೆ ಅರ್ಜಿ ಹಾಕಿ

ಇತರ ಟೆಕ್ ದಿಗ್ಗಜರೊಂದಿಗೆ ಹೋಲಿಕೆ: ವರದಿಗಳ ಪ್ರಕಾರ, ಮೈಕ್ರೋಸಾಫ್ಟ್ ಸಿಇಒ ಸತ್ಯ ನಡೆಲ್ಲಾ ಅವರು 2025 ರ ಹಣಕಾಸು ವರ್ಷದಲ್ಲಿ 96.5 ಮಿಲಿಯನ್ ಡಾಲರ್ ಗಳಿಸಿದ್ದರೆ, ಆಪಲ್‌ನ ಟಿಮ್ ಕುಕ್ 74.3 ಮಿಲಿಯನ್ ಡಾಲರ್ ಸಂಭಾವನೆ ಪಡೆದಿದ್ದಾರೆ. ಅವರ ತುಲನೆಯಲ್ಲಿ ಪಿಚೈ ಅವರ ಈ ಹೊಸ ಪ್ಯಾಕೇಜ್ ಅತ್ಯಂತ ದೊಡ್ಡದಾಗಿದೆ.

ಭಾರತೀಯ ಮೂಲದ 53 ವರ್ಷದ ಸುಂದರ್ ಪಿಚೈ ಅವರು 2004 ರಲ್ಲಿ ಗೂಗಲ್ ಸೇರಿದ್ದರು. ಕ್ರೋಮ್ ಬ್ರೌಸರ್ ಅಭಿವೃದ್ಧಿಪಡಿಸುವಲ್ಲಿ ಮತ್ತು ಆಂಡ್ರಾಯ್ಡ್ ವಿಭಾಗವನ್ನು ಮುನ್ನಡೆಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

[youtube https://www.youtube.com/watch?v=QA28TTkVMIY]

Exit mobile version