ಬಿಎಂಟಿಸಿ-ವಾಯುವಜ್ರ ಭೀಕರ ರಸ್ತೆ ಅಪಘಾತ :8 ಜನರಿಗೆ ಗಾಯ, ಮೂವರ ಸ್ಥಿತಿ ಗಂಭೀರ!

ನಗರದ ಅತ್ಯಂತ ಬ್ಯುಸಿ ಜಂಕ್ಷನ್ ಹಾಗೂ ವಿಧಾನ ಸೌಧದಿಂದ ಕೂಗಳತೆ ದೂರದಲ್ಲಿರುವ ಕೆ.ಆರ್. ಸರ್ಕಲ್ (ಕೃಷ್ಣರಾಜೇಂದ್ರ ವೃತ್ತ) ಬಳಿಯ ಮಹಾರಾಣಿ ಕಾಲೇಜು ಅಪ್ಪರ್ ರ‍್ಯಾಂಪ್ ಬಳಿ ಎರಡು ಬಿಎಂಟಿಸಿ (BMTC) ಬಸ್‌ಗಳ ನಡುವೆ ಸಂಭವಿಸಿದ ಈ ಘೋರ ಡಿಕ್ಕಿಯಿಂದಾಗಿ ಬಸ್ ಚಾಲಕ ಸೇರಿದಂತೆ ಕನಿಷ್ಠ 13ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸಿಲಿಕಾನ್ ಸಿಟಿಯ ಹೃದಯಭಾಗದಲ್ಲಿ ಶನಿವಾರ ಬೆಳಗಿನ ಜಾವವೇ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ನಗರದ ಅತ್ಯಂತ ಬ್ಯುಸಿ ಜಂಕ್ಷನ್ ಹಾಗೂ ವಿಧಾನ ಸೌಧದಿಂದ ಕೂಗಳತೆ ದೂರದಲ್ಲಿರುವ ಕೆ.ಆರ್. ಸರ್ಕಲ್ (ಕೃಷ್ಣರಾಜೇಂದ್ರ ವೃತ್ತ) ಬಳಿಯ ಮಹಾರಾಣಿ ಕಾಲೇಜು ಅಪ್ಪರ್ ರ‍್ಯಾಂಪ್ ಬಳಿ ಎರಡು ಬಿಎಂಟಿಸಿ (BMTC) ಬಸ್‌ಗಳ ನಡುವೆ ಸಂಭವಿಸಿದ ಈ ಘೋರ ಡಿಕ್ಕಿಯಿಂದಾಗಿ ಬಸ್ ಚಾಲಕ ಸೇರಿದಂತೆ ಕನಿಷ್ಠ 13ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಪಘಾತದ ತೀವ್ರತೆಗೆ ಬಿಎಂಟಿಸಿ ಬಸ್ ಚಾಲಕನಿಗೆ ಗಂಭೀರ ಪೆಟ್ಟು ಬಿದ್ದಿದ್ದು, ಅವರ ಪರಿಸ್ಥಿತಿ ಸದ್ಯ ಚಿಂತಜನಕವಾಗಿದೆ ಎನ್ನಲಾಗಿದೆ ಕೂಡಲೇ ಹತ್ತಿರದ ಆಸ್ಪತ್ರೆಗೆ ಶಿಫ್ಟ್ ಮಾಡಿ.ತುರ್ತು ಚಿಕಿತ್ಸೆ ಕೊಡಲಾಗುತ್ತಿದೆ ಎರಡು ಬಸ್ಗಳಲ್ಲಿ ಇದ್ದ ಸಾಕಷ್ಟು ಪ್ರಯಾಣಿಕರು ಈ ಘಟನೆ ಯಿಂದ ಗಾಯಗೊಂಡಿದ್ದಾರೆ ಕೆಲವರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದು ಇನ್ನೂ ಹಲವರಿಗೆ ತೀವ್ರ ಗಾಯಗಳಾಗಿವೆ.

ಇದೆ ವೇಳೆ ಬಸ್ನ ಸ್ವಯಂ ಚಾಲಿತ ಬಾಗಿಲಿನ ಮಧ್ಯೆ ಯುವತಿ ಒಬ್ಬರು ಕಾಲು ಸಿಲುಕಿಕೊಂಡಿದ್ದರಿಂದ ಅವರು ನೋವಿನಿಂದ ನರಳುತ್ತಿದ್ದರು ತಕ್ಷಣವೇ ಸ್ಥಳೀಯ ಸಾರ್ವಜನಿಕರು ಹಾಗೂ ಸಾರಿಗೆ ಸಿಬ್ಬಂದಿಗಳು ಸಮಯ ಪ್ರಜ್ಞೆ ಮೆರೆದು ಮಹಿಳೆಯನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಪಘಾರದ ಬೆನ್ನಲ್ಲೆ ಕೆಆರ್ ಸರ್ಕಲ್ ಮತ್ತು ಸುತ್ತಮುತ್ತಲು ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಂಚಾರಿ ಠಾಣೆ ಪೊಲೀಸ್ರು ಆಗಮಿಸಿ ಜಖಂ ಗೊಂಡ ವಾಹನಗಳನ್ನು ಬದಿಗೆ ಸೇರಿಸಿ ವಾಹನ ಸಂಚಾರವನ್ನು ಸುಗಮಗೊಳಿಸಿದರು ಬ್ರೇಕ್ ವೈಫಲ್ಯವೇ ಅಥವಾ ಚಾಲಕನ ನಿರ್ಲಕ್ಷವೆ ಎಂಬ ಕಂಪ್ಲೀಟ್ ಮಾಹಿತಿಯಿಂದ ತಿಳಿಯಬೇಕಿದೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Exit mobile version