ಪಂಜಾಬ್ : Security Forces : ಗಡಿ ಸಂಘರ್ಷ ಎಂತಾದ್ದೇ ಇರಲಿ. ಮಾನವೀಯತೆ ಎಂಬ ಪ್ರಶ್ನೆ ಹುಟ್ಟಿದಾಗ ಭಾರತೀಯ ಸೇನೆಯು ಚೀನಾವೇ ಆಗಿರಲಿ ಅಥವಾ ಪಾಕಿಸ್ತಾನವೇ ಆಗಿರಲಿ ಎಲ್ಲಾ ಗಡಿ ದ್ವೇಷಗಳನ್ನು ಮರೆತು ವರ್ತಿಸುತ್ತೆ ಎಂಬುದು ಅನೇಕ ಬಾರಿ ಸಾಬೀತಾಗಿದೆ. ಭಾರತವು ಎಂದಿಗೂ ತಾನಾಗಿಯೇ ಯಾವ ದೇಶದ ಮೇಲೂ ಗಡಿ ವಿಸ್ತರಿಸಬೇಕೆಂದು ಆಕ್ರಮಣ ಮಾಡಿಲ್ಲ. ಆದರೆ ತನ್ನ ನೆಲದ ಸುದ್ದಿಗೆ ಬಂದಾಗ ಮಾತ್ರ ಶತ್ರು ರಾಷ್ಟ್ರಗಳಿಗೆ ತಕ್ಕ ಶಾಸ್ತಿಯನ್ನು ಮಾಡಿದೆ. ಅದರಂತೆ ಈ ಬಾರಿ ಭಾರತೀಯ ಭದ್ರತಾ ಪಡೆಯ ಸಿಬ್ಬಂದಿ ಮಾಡಿರುವ ಒಂದು ಕೆಲಸವು ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ಅಜಾಗರೂಕತೆಯಿಂದಾಗಿ ಪಾಕಿಸ್ತಾನದ ಗಡಿ ದಾಟಿ ಪಂಜಾಬ್ಗೆ ಬಂದಿದ್ದ ಮೂರು ವರ್ಷದ ಗಂಡು ಮಗುವನ್ನು ರಕ್ಷಿಸಿದ್ದ ಭಾರತೀಯ ಭದ್ರತಾ ಪಡೆಯ ಸಿಬ್ಬಂದಿ ಮಗುವನ್ನು ಅತ್ಯಂತ ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಭಾರತೀಯ ಭದ್ರತಾ ಪಡೆಯ ಈ ಮಾನವೀಯ ಕಾರ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಹ್ಯಾಟ್ಸ್ಆಫ್ ಎನ್ನುತ್ತಿದ್ದಾರೆ.
ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ಪಂಜಾಬ್ ರಾಜ್ಯದ ಫಿರೋಜ್ಪುರ ಸೆಕ್ಟರ್ನಲ್ಲಿ ಈ ಘಟನೆ ಸಂಭವಿಸಿದೆ. ಭದ್ರತಾ ಪಡೆಯ ಸಿಬ್ಬಂದಿ ಫಿರೋಜ್ಪುರ ಸೆಕ್ಟರ್ನಲ್ಲಿ ಗಡಿ ಕಾಯುತ್ತಿದ್ದ ಸಂದರ್ಭದಲ್ಲಿ ಐಬಿ ಬೇಲಿಯ ಬಳಿಯಲ್ಲಿ ಗಂಡು ಮಗುವೊಂದು ಅಳುತ್ತಿರುವುದನ್ನು ಗಮನಿಸಿದ್ದಾರೆ.
ಬಿಕ್ಕಿ ಬಿಕ್ಕಿ ಅಳುತ್ತಿದ್ದ ಪುಟ್ಟ ಕಂದಮ್ಮ ತನ್ನ ತಂದೆಯನ್ನು ಕರೆಯುತ್ತಿತ್ತು. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ತಕ್ಷಣವೇ ಬಿಎಸ್ಎಫ್ ಫೀಲ್ಡ್ ಕಮಾಂಡರ್ ಪಾಕಿಸ್ತಾನಿ ರೇಂಜರ್ಗಳ ಜೊತೆ ಫ್ಲ್ಯಾಗ್ ಮೀಟಿಂಗ್ಗೆ ಮನವಿ ಮಾಡಿದರು. ಸಭೆ ನಡೆಸುವ ಮೂಲಕ ನಾವು ಮಗುವನ್ನು ಪೋಷಕರಿಗೆ ಹಿಂತಿರುಗಿಸಬಹುದು ಎಂದು ಮನವರಿಕೆ ಮಾಡಿದರು. ಕೂಡಲೇ ಕಾರ್ಯಪ್ರವೃತ್ತರಾದ ಬಿಎಸ್ಎಫ್ ಪಡೆ ಪಾಕಿಸ್ತಾನ ರೇಂಜರ್ ಸಮ್ಮುಖದಲ್ಲಿ ಮಗುವಿನ ಪೋಷಕರಿಗೆ ಮಗುವನ್ನು ಹಸ್ತಾಂತರಿಸಿದ್ದಾರೆ.
ಇದನ್ನು ಓದಿ : MLA Basana Gowda Patil Yatnal : ಮಂತ್ರಿ ಸ್ಥಾನಕ್ಕೆ ಕ್ಷೇತ್ರ ಬಿಟ್ಟು ವರಿಷ್ಠರ ಮನೆ ಅಲೆಯಬೇಕು : ಬಸನಗೌಡ ಪಾಟೀಲ್ ಯತ್ನಾಳ್
ಇದನ್ನೂ ಓದಿ : Rahul Dravid celebrate : ರಾಹುಲ್ ದ್ರಾವಿಡ್ ಯಾವತ್ತಾದ್ರೂ ಈ ರೀತಿ ಸಂಭ್ರಮಿಸಿದ್ದನ್ನು ನೋಡಿದ್ದೀರಾ ?
Security Forces Reunite 3-Year-Old Pakistan Boy Found At Border With Family
This post was last modified on ಜುಲೈ 2, 2022 12:51 ಅಪರಾಹ್ನ
This website uses cookies.