Kannada News Next

bengaluru

Bengaluru Food Safety: ಹೋಟೆಲ್‌ಗಳಲ್ಲಿ ಆಹಾರ ಸುರಕ್ಷತಾ ತಪಾಸಣೆ : ನಿಯಮ ಉಲ್ಲಂಘನೆ ವಿರುದ್ದ ಕ್ರಮ

ಹೋಟೆಲ್‌ ಮತ್ತು ಆಹಾರ ಮಳಿಗೆಗಳಲ್ಲಿ ಗ್ರಾಹಕರಿಗೆ ಸುರಕ್ಷಿತ ಆಹಾರ ದೊರೆಯುವಂತೆ ಮಾಡುವುದು ಆಹಾರ ಸುರಕ್ಷತಾ ತಪಾಸಣೆಯ ಮುಖ್ಯ ಉದ್ದೇಶವಾಗಿದೆ.

By Arun Gundmi | ಅರುಣ್‌ ಗುಂಡ್ಮಿ Editor-in-Chief
bengaluru food safety hotel inspection august 2026

ಬೆಂಗಳೂರು : ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಆಹಾರ ಸುರಕ್ಷತೆ ಕುರಿತು ಅಧಿಕಾರಿಗಳ ತಪಾಸಣೆಯನ್ನು ಮುಂದುವರಿಸಿದ್ದಾರೆ. ನಗರದ ಹಲವು ಹೋಟೆಲ್‌ ಹಾಗೂ ಆಹಾರ ಮಳಿಗೆಗಳಲ್ಲಿ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಬಳಕೆಗೆ ಯೋಗ್ಯವಲ್ಲದ ಆಹಾರ ಪದಾರ್ಥಗಳು ಪತ್ತೆಯಾಗಿತ್ತು. ನಿಯಮ ಉಲ್ಲಂಘನೆಯ ವಿರುದ್ದ ಕ್ರಮ ಜರುಗಿಸಲಾಗುತ್ತಿದೆ.

ಹೋಟೆಲ್‌ ಮತ್ತು ಆಹಾರ ಮಳಿಗೆಗಳಲ್ಲಿ ಗ್ರಾಹಕರಿಗೆ ಸುರಕ್ಷಿತ ಆಹಾರ ದೊರೆಯುವಂತೆ ಮಾಡುವುದು ಆಹಾರ ಸುರಕ್ಷತಾ ತಪಾಸಣೆಯ ಮುಖ್ಯ ಉದ್ದೇಶವಾಗಿದೆ. ಹೋಟೆಲ್‌ಗಳಲ್ಲಿ ಬಳಸುವ ಮಾಂಸ, ಹಾಲಿನ ಉತ್ಪನ್ನ, ತರಕಾರಿ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ಸರಿಯಾದ ತಾಪಮಾನದಲ್ಲಿ ಸಂಗ್ರಹಿಸಲಾಗಿದೆಯಾ ? ಅವುಗಳ ಗುಣಮಟ್ಟ ಹೇಗಿದೆ ? ಅವಧಿ ಮೀರಿದ ಆಹಾರ ಉತ್ಪನ್ನ ಬಳಕೆ ಮಾಡಲಾಗುತ್ತಿದ್ಯಾ ಎಂಬ ಕುರಿತು ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಆಹಾರ ಸುರಕ್ಷತೆಯ ಕುರಿತು ಅಧಿಕಾರಿಗಳು ಆಹಾರ ಪದಾರ್ಥಗಳನ್ನು ವಶಪಡಿಸಿಕೊಂಡು, ವಿಲೇವಾರಿ ಮಾಡಿರುವ ಮಾಹಿತಿ ದೊರೆತಿತ್ತು. ಅಲ್ಲದೇ ಕೆಲವು ಕಡೆಗಳಲ್ಲಿ ಅಡುಗೆ ಮನೆ ಸ್ವಚ್ಚತೆ, ಆಹಾರ ನಿರ್ವಹಣೆಯ ಕುರಿತು ಕ್ರಮಗಳ ಬಗ್ಗೆಯೂ ಪ್ರಶ್ನೆಗಳು ಎದ್ದಿದ್ದವು.

ಹೋಟೆಲ್‌ಗಳಿಗೆ ಬರುವ ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ಅಧಿಕಾರಿಗಳು ತಪಾಸಣೆ ನಡೆಯುತ್ತಿದ್ದು, ಹೋಟೆಲ್‌, ರೆಸ್ಟೋರೆಂಟ್‌ನಲ್ಲಿ ಆಹಾರ ಸೇವನೆಯ ಸ್ಥಳದ ಸ್ವಚ್ಚತೆ, ಸಿಬ್ಬಂದಿಯ ಆಹಾರ ನಿರ್ವಹಣಾ ಕ್ರಮ, ಆಹಾರದ ಗುಣಮಟ್ಟದ ಕುರಿತು ಗಮನ ಹರಿಸಲಾಗುತ್ತದೆ. ಆಹಾರವನ್ನು ಸುರಕ್ಷಿತವಾಗಿ ಸಂಗ್ರಹಣೆ ಮಾಡದೇ, ಸ್ವಚ್ಚತೆಯನ್ನು ಪಾಲಿಸದೇ ಇದ್ದರೆ ಆಹಾರ ಗುಣಮಟ್ಟದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಅದ್ರಲ್ಲೂ ಮಾಂಸ ಮತ್ತು ಹಾಲಿನ ಉತ್ಪನ್ನಗಳು ಬಹು ಬೇಗನೇ ಹಾಳಾಗುವ ಪದಾರ್ಥಗಳನ್ನು ಸರಿಯಾದ ರೀತಿಯಲ್ಲಿ ಸಂಗ್ರಹ ಮಾಡುವುದು ಬಹಳ ಮುಖ್ಯ.

ಹೋಟೆಲ್‌ಗಳಲ್ಲಿನ ಆಹಾರ ಸುರಕ್ಷತೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಹೋಟೆಲ್‌ಗಳ ಹೆಸರುಗಳು ಹರಿದಾಡಿದ್ದವು. ಆದರೆ ಯಾವ ಹೋಟೆಲ್‌ನಲ್ಲಿ ಸ್ವಚ್ಚತೆಯನ್ನು ಪಾಲಿಸುತ್ತಿಲ್ಲ ಅನ್ನೋ ಕುರಿತು ಅಧಿಕಾರಿಗಳು ಯಾವುದೇ ಅಧಿಕೃತ ಮಾಹಿತಿಯನ್ನೂ ಬಿಡುಗಡೆ ಮಾಡಿಲ್ಲ.