Kannada News Next

news

Sigma Movie Review : ಸಿಎಂ ವಿಜಯ್‌ ಪುತ್ರ ಜೇಸನ್‌ ಸಂಜಯ್‌ ಸಿಗ್ಮಾ ಸಿನಿಮಾ ಬಿಡುಗಡೆ

ಸಿಗ್ಮಾ ಸಿನಿಮಾದಲ್ಲಿ ಸಂದೀಪ್‌ ಕಿಶನ್‌ ಹಾಗೂ ಫರಿಯಾ ಅಬ್ದುಲ್ಲಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ

By Arun Gundmi | ಅರುಣ್‌ ಗುಂಡ್ಮಿ Editor-in-Chief
Jason Sanjay sigma movie release Sangeetha divya saasha

ಚೆನ್ನೈ: ತಮಿಳುನಾಡಿನ ಮುಖ್ಯಮಂತ್ರಿ ವಿಜಯ್‌ ಜೋಸೆಫ್‌ ಪುತ್ರ ಜೇಸನ್‌ ಸಂಜಯ್‌ ನಿರ್ದೇಶನದ ಬಹು ನಿರೀಕ್ಷಿತ ಹಾಗೂ ಚೊಚ್ಚಲ ಸಿನಿಮಾ ಸಿಗ್ಮಾ ವಿಶ್ವದಾದ್ಯಂತ ತೆರೆಕಂಡಿದೆ. ಸಿನಿಮಾ ಬಿಡುಗಡೆಯ ದಿನದಂದೇ ತಾಯಿ ಸಂಗೀತಾ ಸೋಮಲಿಂಗಂ ಹಾಗೂ ತಂಗಿ ದಿವ್ಯಾ ಸಾಶಾ ಅವರ ಜೊತೆಗೆ ಸಿನಿಮಾ ವೀಕ್ಷಣೆ ಮಾಡಿದ್ದಾರೆ.

ಸಿಗ್ಮಾ ಸಿನಿಮಾದಲ್ಲಿ ಸಂದೀಪ್‌ ಕಿಶನ್‌ ಹಾಗೂ ಫರಿಯಾ ಅಬ್ದುಲ್ಲಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ವೀಕ್ಷಣೆಯ ನಂತರ ಮಾತನಾಡಿದ ಜೇಸನ್‌ ಸಂಜಯ್‌, ತಂದೆ ವಿಜಯ್‌ ಸಿನಿಮಾದ ನೋಡಿದ ಬಳಿಕ ಹೇಗೆ ಉತ್ತರಿಸಬಹುದು ಅನ್ನೋ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಜೇಸನ್‌, ಅವರು ತುಂಬಾ ಶಾಂತ ಸ್ವಭಾವದವರು, ಯಾವುದೇ ಸಿನಿಮಾವನ್ನು ವೀಕ್ಷಿಸಿ, ಅದನ್ನು ವಿಶ್ಲೇಷಿಸುವುದಕ್ಕೆ ಸ್ವಲ್ಪ ಸಮಯ ಬೇಕಾಘುತ್ತದೆ. ಇದು ನನ್ನ ಮೊದಲ ಸಿನಿಮಾ ಹೀಗಾಗಿ ಅವರಿಗೆ ಖಂಡಿತಾ ಹೆಮ್ಮೆಯಾಗುತ್ತದೆ ಎಂದಿದ್ದಾರೆ.

ಸಿಎಂ ವಿಜಯ್‌ ಹಾಗೂ ಸಂಗೀತಾ ಅವರು 1999ರ ಅಗಸ್ಟ್‌ 25ರಂದು ಮದುವೆ ಆಗಿದ್ದರು. ಈ ದಂಪತಿಗಳಿಗೆ ಜೇಸನ್‌ ಸಂಜಯ್‌ ಹಾಗೂ ದಿವ್ಯಾ ಸಾಶಾ ಅನ್ನೋ ಇಬ್ಬರು ಮಕ್ಕಳಿದ್ದಾರೆ. ಇದೀಗ ಜೇಸನ್‌ ಸಂಜಯ್‌ ತನ್ನ ಚೊಚ್ಚಲ ಸಿನಿಮಾ ನಿರ್ದೇಶಿಸುವ ಮೂಲಕ ತಂದೆಯ ಹಾದಿಯನ್ನೇ ಹಿಡಿದಿದ್ದಾನೆ.

ತಮಿಳುನಾಡಿನ ಮುಖ್ಯಮಂತ್ರಿಯಾಗಿ ವಿಜಯ್‌ ಸೋಸೆಫ್‌ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ ವಿಜಯ್‌ ಹಾಗೂ ಸಂಗೀತಾ ದಾಂಪತ್ಯ ಜೀವನದ ಕುರಿತು ಸಾಕಷ್ಟು ಗಾಸಿಫ್‌ಗಳು ಹರಿದಾಡಿದ್ದವು. ಈ ನಡುವಲ್ಲೇ ಸಂಗೀತಾ ಕಳೆದ ಫೆಬ್ರವರಿಯಲ್ಲಿ ಚೆಂಗಲ್ಪಟ್ಟು ನ್ಯಾಯಾಲಯದಲ್ಲಿ ವಿಚ್ಚೇಧನಕ್ಕಾಗಿ ಅರ್ಜಿ ಸಲ್ಲಿಸಿದ್ದರು.

ಆದರೆ ಜೂನ್‌15ರ ವಿಚಾರಣೆಯ ವೇಳೆಯಲ್ಲಿ ತಾವು ಸಲ್ಲಿಸಿದ್ದ ವಿಚ್ಚೇಧನದ ಅರ್ಜಿಯನ್ನು ವಾಪಾಸ್‌ ಪಡೆಯುವ ಇಚ್ಚೆಯನ್ನು ವ್ಯಕ್ತಪಡಿಸಿದ್ದರು. ಅಗಸ್ಟ್‌ 7ರಂದು ನ್ಯಾಯಾಲಯ ಈ ಪ್ರಕರಣಕ್ಕೆ ಅಧಿಕೃತವಾಗಿ ಅಂತ್ಯ ಹಾಡಿದೆ.