Kannada News Next

karnataka

ECI Big Update : ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ; ನಿಮ್ಮ ಹೆಸರು ಡಿಲೀಟ್ ಆಗದಂತೆ ಹೀಗೆ ಚೆಕ್ ಮಾಡಿ

ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಇದೀಗ ಬೂತ್‌ ಮಟ್ಟದ ಅಧಿಕಾರಿಗಳು (BLO) ಮನೆ ಮನೆಗೆ ಭೇಟಿ ನೀಡಿ ಮತದಾರರ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ

By ರಶ್ಮಿ ಎಸ್. | Rashmi S

ಬೆಂಗಳೂರು : ಕೇಂದ್ರ ಚುನಾವಣಾ ಆಯೋಗವು (ECI) ಭಾರತ ದೇಶದಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಮಾಡುತ್ತಿದೆ. ಅದ್ರಲ್ಲೂ ಅಕ್ರಮ ಮತದಾರರನ್ನು ಪಟ್ಟಿಯಿಂದ ಕೈ ಬಿಡುವ ಸಲುವಾಗಿಯೇ ಎಸ್‌ಐಆರ್‌ (SIR - Special Intensive Revision) 2026 ಅಭಿಯಾನವನ್ನು ಕೈಗೊಂಡಿದೆ. ಮತದಾರರ ಪಟ್ಟಿಯಿಂದ ನಿಮ್ಮ ಹೆಸರು ಡಿಲೀಟ್‌ ಆಗದಂತೆ ಏನು ಮಾಡಬೇಕು ಅನ್ನೋ ಡಿಟೇಲ್ಸ್‌ ಇಲ್ಲಿದೆ.

ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಇದೀಗ ಬೂತ್‌ ಮಟ್ಟದ ಅಧಿಕಾರಿಗಳು (BLO) ಮನೆ ಮನೆಗೆ ಭೇಟಿ ನೀಡಿ ಮತದಾರರ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ. ಒಂದೊಮ್ಮೆ ಮತದಾರರು ಮೃತಪಟ್ಟಿದ್ದರೆ ಅಥವಾ ನಕಲಿ ದಾಖಲೆಗಳನ್ನು ಹೊಂದಿದ್ದರೆ, ಅಂತಹ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗುತ್ತದೆ.

ಅದ್ರಲ್ಲೂ 18 ವರ್ಷ ತುಂಬಿರುವ ಯುವಕ - ಯುವತಿಯರು ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆ ಆಗೋದಕ್ಕೂ ಕೂಡ ಅವಕಾಶವಿದೆ. ಇದುವರೆಗೆ ನೀವು ಮತದಾರರ ಪಟ್ಟಿಯನ್ನು ತಮ್ಮ ಹೆಸರನ್ನು ನೋಂದಣಿ ಮಾಡಿಸಿಕೊಳ್ಳದೇ ಇರುವವರು ಕೂಡಲೇ ಬಿಎಲ್‌ಓಗಳನ್ನು ಸಂಪರ್ಕಿಸಬಹುದಾಗಿದೆ.

ಇನ್ನು ಅರ್ಹ ಮತದಾರರು ತಮ್ಮ ಹೆಸರನ್ನು ವೋಟರ್‌ ಐಟಿಯಲ್ಲಿ ಉಳಿಸಿಕೊಳ್ಳಲು, ಜೊತೆಗೆ ತಿದ್ದುಪಡಿ ಮಾಡಲು ಆಯೋಗವು ಮಹತ್ವದ ಸೂಚನೆಗಳನ್ನು ನೀಡಿದೆ. ಎಸ್‌ಐಆರ್‌ ಪ್ರಕ್ರಿಯೆ ನಂತರ ಭಾರತದ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂದು ಪರಿಶೀಲಿಸಲು ಈ ಹಂತಗಳನ್ನು ಫಾಲೋ ಮಾಡಿ.

ಆನ್‌ಲೈನ್‌ನಲ್ಲೇ ಪರಿಶೀಲಿಸುವುದು ಹೇಗೆ ?

ECI ಅಧಿಕೃತ ವೆಬ್‌ಸೈಟ್ (voters.eci.gov.in) ಗೆ ಭೇಟಿ ನೀಡಿ.

'Search in Electoral Roll' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ನಿಮ್ಮ EPICS ಸಂಖ್ಯೆ (Voter ID Number) ಅಥವಾ ವೈಯಕ್ತಿಕ ವಿವರಗಳನ್ನು ನಮೂದಿಸಿ ಹೆಸರು ಪರಿಶೀಲಿಸಿ.

ಹೆಸರು ಅಥವಾ ವಿಳಾಸದಲ್ಲಿ ತಿದ್ದುಪಡಿ ಇದ್ದರೆ ಆನ್‌ಲೈನ್ ಫಾರ್ಮ್ 8 (Form 8) ಸಲ್ಲಿಸಬಹುದು.