ಬೆಂಗಳೂರು : ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ನೀಡುವ ನಿಟ್ಟಿನಲ್ಲಿ ಜಾರಿಗೆ ಬಂದಿರುವ ಗೃಹಲಕ್ಷ್ಮೀ ಯೋಜನೆ ಇದೀಗ ನವರಾತ್ರಿಯ ಹೊತ್ತಲ್ಲೇ ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದೆ. ಗೃಹಲಕ್ಷ್ಮೀ ಯೋಜನೆ (Gruhalakshmi Scheme )ಯ ಅಡಿಯಲ್ಲಿ ಈಗಾಗಲೇ 32 ಕಂತುಗಳ ಮೂಲಕ ಪ್ರತೀ ಮಹಿಳೆಯರ ಬ್ಯಾಂಕ್ ಖಾತೆಗೆ ನೇರವಾಗಿ 64 ಸಾವಿರ ರೂಪಾಯಿ ಜಮೆ ಆಗಿದೆ.
ಕರ್ನಾಟಕದಲ್ಲಿರುವ ಒಟ್ಟು 1 ಕೋಟಿ 20 ಲಕ್ಷಕ್ಕೂ ಅಧಿಕ ಮಹಿಳೆಯರು ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಾಗಿದ್ದು, ಈಗಾಗಲೇ ಪ್ರತಿಯೊಬ್ಬರ ಖಾತೆಗೂ 64 ಸಾವಿರ ರೂಪಾಯಿ ಜಮೆ ಆಗಿದ್ದು, ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸಹಕಾರಿಯಾಗಿದೆ.
ನವರಾತ್ರಿಗೆ ಇದೀಗ ದಿನಗಣನೆ ಶುರುವಾಗಿದ್ದು, ಹಬ್ಬದ ಹೊತ್ತಲ್ಲೇ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗೃಹಲಕ್ಷ್ಮೀಯರಿಗೆ ಶುಭ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಬಾಕಿ ಇರುವ 33 ಕಂತಿನ ಹಣವನ್ನು ನವರಾತ್ರಿಯ ಹೊತ್ತಲ್ಲೇ ಬಿಡುಗಡೆ ಮಾಡಲು ಸೂಚನೆಯನ್ನು ನೀಡಲಾಗಿದ್ದು, ಹಣ ಬಿಡುಗಡೆಗೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಗೃಹಲಕ್ಷ್ಮೀ ಫಲಾನುಭವಿಗಳ ಪರಿಷ್ಕರಣೆ : ಹಣ ಬಿಡುಗಡೆಗೆ ಸೂಚನೆ
ಕರ್ನಾಟಕ ಸರಕಾರ ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಮತ್ತೊಮ್ಮೆ ಪರಿಷ್ಕರಣೆಗೆ ಮುಂದಾಗಿದೆ. ಪರಿಷ್ಕರಣೆಯ ನೆಪವೊಡ್ಡಿ ಬಡ ಮಹಿಳೆಯರಿಗೆ ತಲುಪಬೇಕಾಗಿರುವ ಯೋಜನೆಯ ಹಣವನ್ನು ತಡೆ ಹಿಡಿಯ ಬೇಡಿ ಎಂದು ಸಿಎಂ ಡಿಕೆ ಶಿವಕುಮಾರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ದಸರಾ ಹಬ್ಬದ ಹೊತ್ತಲ್ಲಿ ಮಹಿಳೆಯರಿಗೆ ಸಹಕಾರಿಯಾಗಬೇಕು ಅನ್ನೋ ಕಾರಣದಿಂದಲೇ ಪರಿಷ್ಕರಣೆಯ ನಡುವಲ್ಲೇ 33ನೇ ಕಂತಿನ ಹಣವನ್ನು ತಕ್ಷಣದಲ್ಲಿಯೇ ಬಿಡುಗಡೆ ಮಾಡುವಂತೆ ಹಣಕಾಸು ಇಲಾಖೆಗೆ ನಿರ್ದೇಶನ ನೀಡಲಾಗಿದೆ.
ಗೃಹಲಕ್ಷ್ಮಿ ಯೋಜನೆ ಎಂದರೇನು?
ಕರ್ನಾಟಕ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮೀ ಯೋಜನೆ ಕೂಡ ಒಂದಾಗಿದೆ.
ಮಾಸಿಕ ಆರ್ಥಿಕ ನೆರವು: ಪ್ರತೀ ಬಿಪಿಎಲ್ ಕುಟುಂಬದ ಯಜಮಾನಿ ಎಂದು ಗುರುತಿಸಿರುವ ಮಹಿಳೆಯರ ಬ್ಯಾಂಕ್ ಖಾತೆಗೆ ನೇರವಾಗಿಪ್ರತಿ ತಿಂಗಳು ₹2,000 ಜಮೆ ಮಾಡಲಾಗುತ್ತದೆ.
ನೇರ ಹಣ ವರ್ಗಾವಣೆ (DBT): ಯೋಜನೆಯ ಅಡಿಯಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ತಡೆಯುವ ಸಲುವಾಗಿ ಡಿಬಿಟಿ (Direct Benefit Transfer) ಮೂಲಕ ನೇರವಾಗಿ ಆಧಾರ್ ಜೋಡಣೆ ಆಗಿರುವ ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತದೆ.
ಕೋಟ್ಯಾಂತರ ಮಹಿಳೆಯರಿಗೆ ಅನುಕೂಲ : ಕರ್ನಾಕಟ ರಾಜ್ಯದಲ್ಲಿ ಈಗಾಗಲೇ ಕೋಟಿಗೂ ಅಧಿಕ ಮಹಿಳೆಯರು ಈ ಯೋಜನೆಯ ಅಡಿಯಲ್ಲಿ ನೋಂದಣಿಯಾಗಿದ್ದು, ಕೌಟುಂಬಿಕ ಅವಶ್ಯಕತೆಯನ್ನು ಪೂರೈಸಲು ಈ ಯೋಜನೆ ದೊಡ್ಡ ಆಸರೆಯಾಗಿದೆ.
ನಿಮ್ಮ ಖಾತೆಗೆ ಗೃಹಲಕ್ಷ್ಮೀ ಹಣ ಬಂದಿದ್ಯಾ ? ಚೆಕ್ ಮಾಡುವುದು ಹೇಗೆ ?
ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಹಣ ನಿಮ್ಮ ಖಾತೆಗೆ ಜಮೆ ಆಗಿದ್ಯಾ ಎಂದು ಪರಿಶೀಲಿಸಲು ಈ ಕೆಳಗಿನ ಹಂತವನ್ನು ಅನುಸರಿಸಿ.
ನಿಮ್ಮ ಖ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ ಸಂದೇಶವನ್ನು ಗಮನಿಸಿ.
ಡಿಬಿಟ್ ಕಾರ್ಡ್ ಬಳಿಸಿ ನಿಮ್ಮ ಹತ್ತಿರದ ಎಟಿಎಂ ಅಥವಾ ಬ್ಯಾಂಕ್‌ಗೆ ತೆರಳಿ ಬ್ಯಾಲೆನ್ಸ್ ಚೆಕ್ ಮಾಡಿಕೊಳ್ಳಿ.
ಡಿಬಿಟಿ ಕರ್ನಾಟಕ (DBT Karnataka) ಮೊಬೈಲ್ ಆ್ಯಪ್ ಬಳಸುವ ಮೂಲಕ ನಿಮ್ಮ ಆಧಾರ್ ಸಂಖ್ಯೆಯನ್ನು ಬಳಸಿ ಸ್ಟೇಟಸ್ ಪರಿಶೀಲಿಸಿಕೊಳ್ಳಬಹುದು.