Kannada News Next

karnataka

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ : 13 ಮಂದಿ ಹೊಸ ಶಾಸಕರಿಗೆ ಸಚಿವಗಿರಿ : ಗಾಯತ್ರಿ ಶಾಂತೇಗೌಡಗೆ ಜಾಕ್‌ಪಾಟ್‌

By Arun Gundmi | ಅರುಣ್‌ ಗುಂಡ್ಮಿ Editor-in-Chief
Karnataka Cabinet Expansion 3 New Faces Inducted Jackpot for Gayatri Shanthegowda

ಬೆಂಗಳೂರು : ಕರ್ನಾಟಕದ ಕಾಂಗ್ರೆಸ್‌ ಸರಕಾರ ಕೊನೆಗೂ ಸಂಪುಟ ವಿಸ್ತರಣೆಗೆ ಅಸ್ತು ಎಂದಿದೆ. ಇಂದು 20 ನೂತನ ಸಚಿವರ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದ್ದು, ಈ ಪೈಕಿ 13 ಮಂದಿ ಶಾಸಕರು ಮೊದಲ ಬಾರಿಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅದ್ರಲ್ಲೂ ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದ ಗಾಯತ್ರಿ ಶಾಂತೇಗೌಡ ಅವರಿಗೆ ಜಾಕ್‌ಪಾಟ್‌ ಖುಲಾಯಿಸಿದೆ.

ಪಿಎಂ ನರೇಂದ್ರ ಸ್ವಾಮಿ, ಶಿವರಾಜ್‌ ತಂಗಡಗಿ, ರುದ್ರಪ್ಪ ಲಮಾಣಿ, ಕೆಎಸ್‌ ಬಸವಂತಪ್ಪ, ಬಿ.ನಾಗೇಂದ್ರ, ಸಂತೋಷ್‌ ಲಾಡ್‌, ಮಧು ಬಂಗಾರಪ್ಪ, ಟಿ. ರುದ್ರಮೂರ್ತಿ, ಝಮೀರ್‌ ಅಹಮದ್‌ ಖಾನ್‌, ರಿಜ್ವಾನ್‌ ಅರ್ಷದ್‌, ಪುಟ್ಟರಂಗ ಶೆಟ್ಟಿ, ಮಂಕಾಳ ವೈದ್ಯ, ಡಾ. ಅಜಯ್‌ ಸಿಂಗ್‌, ಕೆ.ಎಂ.ಶಿವಲಿಂಗೇಗೌಡ, ಎನ್.‌ ಚೆಲುವರಾಯಸ್ವಾಮಿ, ಗಾಯತ್ರಿ ಶಾಂತೇಗೌಡ, ಎಚ್.ಸಿ. ಬಾಲಕೃಷ್ಣ, ವಿಜಯಾನಂದ ಕಾಶಪ್ಪನವರ್‌, ಬಸವರಾಜ ರಾಯೆರೆಡ್ಡಿ, ಲಕ್ಷ್ಮಣ ಸವದಿ ಅವರು ಸಚಿವರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಯುಟಿ ಖಾದರ್‌ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದ ಬೆನ್ನಲ್ಲೇ, ತೆರವಾಗಿರುವ ವಿಧಾನ ಸಭಾಧ್ಯಕ್ಷರ ಹುದ್ದೆಗೆ ಜಿಎಸ್‌ ಪಾಟೀಲ್‌ ಅವರನ್ನು ನೇಮಕ ಮಾಡಲಾಗಿದ್ದು, ಉಪ ಸಭಾಧ್ಯಕ್ಷರಾಗಿ ಪೊನ್ನಣ್ಣ, ವಿಧಾನ ಪರಿಷತ್‌ ಸಭಾಪತಿಯಾಗಿ ಸಲೀಂ ಅಹ್ಮದ್‌ ಹಾಗೂ ಉಪ ಸಭಾಪತಿಯಾಗಿ ಉಮಾಶ್ರೀ ಅವರನ್ನು ಆಯ್ಕೆ ಮಾಡಲಾಗಿದೆ.