Kannada News Next

udupi

ಕುಂದಾಪುರ : ಪತಿಯ ಕಿರುಕುಳಕ್ಕೆ ಮನನೊಂದ ಗೃಹಿಣಿ ಫಿನಾಯಿಲ್‌ ಸೇವನೆ, ದೂರು ದಾಖಲು

ಪತಿಯ ಕಿರುಕುಳ ತಾಳಲಾರದೆ ಗೃಹಿಣಿಯೋರ್ವಳು ಫಿನಾಯಿಲ್‌ ಸೇವಿಸಿ ಅಸ್ವಸ್ಥಗೊಂಡ ಘಟನೆ ಉಡುಪಿ ಜಿಲ್ಲೆಯ ಗಂಗೊಳ್ಳಿ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ದಾಖಲಾಗಿದೆ.

By Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ
gangolli woman attempts suicide after husband harassment

ಕುಂದಾಪುರ : ಪತಿಯ ಕಿರುಕುಳ ತಾಳಲಾರದೆ ಗೃಹಿಣಿಯೋರ್ವಳು ಫಿನಾಯಿಲ್‌ ಸೇವಿಸಿ ಅಸ್ವಸ್ಥಗೊಂಡ ಘಟನೆ ಉಡುಪಿ ಜಿಲ್ಲೆಯ ಗಂಗೊಳ್ಳಿ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ದಾಖಲಾಗಿದೆ.

ಉಡುಪಿ ಜಿಲ್ಲೆಯ ಆಲೂರಿನ ನಿವಾಸಿಯಾಗಿರುವ ಜಯಶ್ರೀ ಎಂಬವರೇ ಇದೀಗ ಅಸ್ವಸ್ಥಗೊಂಡವರು. 2024ರ ನವೆಂಬರ್‌ 17ರಂದು ಜಯಶ್ರೀ ಎಂಬವರಿಗೆ ಅಮಾಸೆಬೈಲು ತಪ್ಲು ನಿವಾಸಿಯಾಗಿರುವ ಪ್ರಕಾಶ್‌ ಆಚಾರ್ಯ ಎಂಬವರ ಜೊತೆಗೆ ಮದುವೆ ಆಗಿತ್ತು.

ಮದುವೆಯ ನಂತರದಲ್ಲಿ ಪ್ರಕಾಶ್‌ ಆಚಾರ್ಯ ಅವರ ಅಣ್ಣ ಪ್ರಭಾಕರ ಹಾಗೂ ತಂಗಿ ಪ್ರಶಾಂತಿ ಎಂಬವರು ಕಿರುಕುಳ ನೀಡುತ್ತಿದ್ದರು. ನಿನಗೆ ಮಕ್ಕಳಾದ್ರೆ ಪ್ರಕಾಶ್‌ ಆಚಾರ್ಯ ನಿನನ್ನು ನೋಡುವುದಿಲ್ಲ ಎಂದು ಹಿಯಾಳಿಸುತ್ತಿದ್ದರು.

ಇದೇ ವಿಚಾರವನ್ನು ಜಯಶ್ರೀ ಅವರು ತನ್ನ ಮನೆಯವರಿಗೆ ತಿಳಿಸಿದಾಗ ಮೊಬೈಲ್‌ ಕಸಿದು, ಬೆದರಿಕೆ ಒಡ್ಡದರು. ಅಲ್ಲದೇ 2025ರ ಡಿಸೆಂಬರ್‌ ತಿಂಗಳಿನಲ್ಲಿ ಜಯಶ್ರೀ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ಆರೋಪಿ ಪ್ರಕಾಶ್‌ ಆಚಾರ್ಯ ಆರು ತಿಂಗಳಿಂದ ಮನೆಗೆ ಬಾರದೇ ದೂರ ಇದ್ದ.

ಇದರಿಂದಾಗಿ ದಾಂಪತ್ಯದಲ್ಲಿ ಕಲಹ ಉಂಟಾಗಿತ್ತು. ಕಳೆದ ಎರಡು ದಿನಗಳ ಹಿಂದೆಯಷ್ಟೆ ಎರಡೂ ಕುಟುಂಬಗಳ ನಡುವೆ ಮಾತುಕತೆ ನಡೆದಿತ್ತು. ಈ ವೇಳೆ ಪ್ರಕಾಶ್‌ ಆಚಾರ್ಯ ತನ್ನ ಪತ್ನಿಯ ಜೊತೆಗೆ ಸಂಸಾರ ನಡೆಸೋದಿಲ್ಲ ಎಂದು ಸ್ಪಷ್ಟ ಪಡಿಸಿದ್ದು, ಮಾನಸಿಕ ಹಿಂಸೆ ನೀಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದರಿಂದಾಗಿ ಮಾನಸಿಕವಾಗಿ ನೊಂದ ಜಯಶ್ರೀ ಅವರು ಆಲೂರಿನಲ್ಲಿರುವ ತಮ್ಮ ಮನೆಯಲ್ಲಿಯೇ ಫಿನಾಯಿಲ್‌ ಸೇವನೆ ಮಾಡಿದ್ದಾರೆ. ಕೂಡಲೇ ಅವರು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಗಂಗೊಳ್ಳಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.