ಉಡುಪಿಯ ಈಶ್ವರನಗರದಲ್ಲಿ ಅಪಾಯಕಾರಿ ಹೆದ್ದಾರಿ ತಿರುವಿನಲ್ಲಿ ಆಟೋ ರಿಕ್ಷಾವೊಂದು ನಿಯಂತ್ರಣ ತಪ್ಪಿ ನಗರಸಭೆಯ ಕುಡಿಯುವ ನೀರಿನ ಪಂಪ್‌ಹೌಸ್ ಆವರಣಕ್ಕೆ ನುಗ್ಗಿ ಪಲ್ಟಿಯಾಗಿದೆ. ಪಂಪ್‌ಹೌಸ್ ಒಳಭಾಗಕ್ಕೇ ಆಟೋ ನುಗ್ಗಿದ್ದರಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅದೃಷ್ಟವಶಾತ್ ಚಾಲಕನ ಗಾಯದ ಕುರಿತು ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ಈಶ್ವರನಗರದ ಈ ಭಾಗ ತೀವ್ರ ಇಳಿಜಾರು ಹಾಗೂ ಏಕಾಏಕಿ ತಿರುವನ್ನು ಹೊಂದಿದ್ದು, ಇಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹೊಸದಾಗಿ ಬರುವ ವಾಹನ ಸವಾರರಿಗೆ ಈ ತಿರುವಿನ ಅಂದಾಜು ಸಿಗದೆ ನಿಯಂತ್ರಣ ಕಳೆದುಕೊಳ್ಳುವುದು ಇಲ್ಲಿ ಸಾಮಾನ್ಯವಾಗಿದೆ. ಸ್ಥಳದಲ್ಲಿ ಸೂಚನಾ ಫಲಕಗಳಿದ್ದರೂ ಅವು ಕಣ್ಣಿಗೆ ಕಾಣುವಂತಿಲ್ಲ ಎಂಬುದು ಸಾರ್ವಜನಿಕರ ದೂರು.
ಇನ್ನುಮುಂದಾದರೂಅಪಘಾತಗಳನ್ನುತಡೆಯಲುಹೆದ್ದಾರಿತಿರುವಿನಬಳಿಹೆಚ್ಚುವರಿಎಚ್ಚರಿಕೆಫಲಕ, ಸ್ಪೀಡ್ಬ್ರೇಕರ್ಹಾಗೂಸುರಕ್ಷತಾತಡೆಗೋಡೆಗಳನ್ನುತಕ್ಷಣಅಳವಡಿಸಬೇಕೆಂದುಸ್ಥಳೀಯರುಆಗ್ರಹಿಸಿದ್ದಾರೆ. ವಿಷಯತಿಳಿಯುತ್ತಿದ್ದಂತೆಘಟನಾಸ್ಥಳಕ್ಕೆಮಣಿಪಾಲಪೊಲೀಸರುಭೇಟಿನೀಡಿಪರಿಶೀಲನೆನಡೆಸಿದ್ದು, ಅಪಘಾತದಕುರಿತುತನಿಖೆಮುಂದುವರಿಸಿದ್ದಾರೆ.