ಪಕ್ಷ ಸೇವೆಯೊಂದಿಗೆ ಚುನಾವಣೆ ಗೆಲ್ಲುವ ಅಭ್ಯರ್ಥಿಗಳಿಗೆ ಮಣೆ, ಹಿರಿತನಕ್ಕಲ್ಲ: ಬದಲಾದ ರಾಹುಲ್ ಗಾಂಧಿ ತಂತ್ರಗಾರಿಕೆ!

ಬದಲಾದ ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ, "ಚುನಾವಣೆಗಳನ್ನು ಗೆಲ್ಲಿಸಿಕೊಡುವ ನಾಯಕತ್ವ" ಮಾತ್ರವೇ ಪಕ್ಷದ ಉಳಿವು ಮತ್ತು ಬೆಳವಣಿಗೆಗೆ ಮುಖ್ಯ ಎಂಬುದನ್ನು ರಾಹುಲ್ ಗಾಂಧಿ ಮನಗಂಡಿದ್ದಾರೆ.

ಬೆಂಗಳೂರು: ಚುನಾವಣೆಗಳನ್ನು ಯಾರು ಗೆಲ್ಲುತ್ತಾರೆ ಎಂಬುದೇ ನನಗೆ ಮುಖ್ಯ ಎಂಬುದನ್ನು  ರಾಹುಲ್ ಗಾಂಧಿ ಈ ಬಾರಿಯ ಕೇರಳ ಹಾಗೂ ಕರ್ನಾಟಕದ ಮುಖ್ಯಮಂತ್ರಿ ಆಯ್ಕೆಯಲ್ಲಿ ಪ್ರಧಾನ ಆದ್ಯತೆ ನೀಡಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.

ಸಂಪ್ರದಾಯಿಕ ರಾಜಕಾರಣದಲ್ಲಿ ಸಾಮಾನ್ಯವಾಗಿ ಹಿರಿತನ (Seniority) ಮತ್ತು ಪಕ್ಷಕ್ಕೆ ಸಲ್ಲಿಸಿದ ದೀರ್ಘಾವಧಿಯ ಸೇವೆಗೆ ಮೊದಲ ಮನ್ನಣೆ ಸಿಗುತ್ತಿತ್ತು. ಆದರೆ ಬದಲಾದ ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ, “ಚುನಾವಣೆಗಳನ್ನು ಗೆಲ್ಲಿಸಿಕೊಡುವ ನಾಯಕತ್ವ” ಮಾತ್ರವೇ ಪಕ್ಷದ ಉಳಿವು ಮತ್ತು ಬೆಳವಣಿಗೆಗೆ ಮುಖ್ಯ ಎಂಬುದನ್ನು ರಾಹುಲ್ ಗಾಂಧಿ ಮನಗಂಡಿದ್ದಾರೆ.

ಭವಿಷ್ಯದಲ್ಲಿ ಯಾರು ಚುನಾವಣೆಗಳನ್ನು ಗೆಲ್ಲುತ್ತಾರೆ ಅವರನ್ನು ಪಕ್ಷದ ಮುಂಚೂಣಿ ಸ್ಥಾನಗಳಿಗೆ ತರುವ ಯೋಚನೆಯನ್ನು ಹಾಗೂ ತಂತ್ರಗಾರಿಕೆಯನ್ನು ರಾಹುಲ್ ಗಾಂಧಿ ಹೊಂದಿದ್ದಾರೆ ಎಂದು ತಿಳಿದುಬಂದಿದೆ.

ಕರ್ನಾಟಕದ ಈ ಬಾರಿಯ ಮುಖ್ಯಮಂತ್ರಿ ಆಯ್ಕೆಯಲ್ಲಿ ಈ ವಿಷಯವೇ ಪ್ರಧಾನ ಭೂಮಿಕೆಯಲ್ಲಿ ಇತ್ತು ಎಂಬುದು ಈಗ ತಿಳಿದು ಬಂದಿದೆ. ಈ ಕಾರಣದಿಂದ ಭವಿಷ್ಯದ ಚುನಾವಣೆಗಳನ್ನು ಗೆಲ್ಲಲು ಡಿಕೆ ಶಿವಕುಮಾರ್ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಹಿರಿತನಕ್ಕೆ ಆದ್ಯತೆ ನೀಡಿದರೆ ಚುನಾವಣೆಗಳನ್ನು ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ರಾಹುಲ್ ಗಾಂಧಿ ತೀರ್ಮಾನಿಸಿದ್ದು  ಸಿದ್ದರಾಮಯ್ಯನವರ ಹಿರಿತನ ಹಾಗೂ ಸೇವೆಗೆ ಗೌರವವನ್ನು ನೀಡಿ , ಹೊಸ ಜನರೇಷನ್ ಶಿಫ್ಟಿಗೆ ರಾಹುಲ್ ಗಾಂಧಿ ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ನೆಲೆಯಲ್ಲಿ ಅಭ್ಯರ್ಥಿಗಳಿಗೆ ಆದ್ಯತೆ ನೀಡಲು ರಾಹುಲ್ ಗಾಂಧಿ ತೀರ್ಮಾನಿಸಿದ್ದಾರೆ ಹಾಗೂ ಅದನ್ನ ಅನುಷ್ಠಾನಿಸಲು ಯೋಜಿಸಿದ್ದಾರೆ ಎಂದು ತಿಳಿದುಬಂದಿದೆ.

Exit mobile version