ಮದ್ರಾಸ್ ಹೈಕೋರ್ಟ್ ಐತಿಹಾಸಿಕ ತೀರ್ಪು; ಭಗವದ್ಗೀತೆ ಕೇವಲ ಧಾರ್ಮಿಕ ಗ್ರಂಥವಲ್ಲ, ಅದು ನೈತಿಕ ವಿಜ್ಞಾನ

Madras High Court on Bhagavad Gita: ಚೆನ್ನೈ: ಭಗವದ್ಗೀತೆಯು ಕೇವಲ ಒಂದು ನಿರ್ದಿಷ್ಟ ಧರ್ಮಕ್ಕೆ ಸೀಮಿತವಾದ ಗ್ರಂಥವಲ್ಲ, ಬದಲಾಗಿ ಅದು ಜೀವನದ ಮೌಲ್ಯಗಳನ್ನು ಬೋಧಿಸುವ ‘ನೈತಿಕ ವಿಜ್ಞಾನ’ (Moral Science) ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಮೂಲಕ ಭಗವದ್ಗೀತೆ ಮತ್ತು ಯೋಗವನ್ನು ಬೋಧಿಸುವ ಸಂಸ್ಥೆಯೊಂದರ ಎಫ್‌ಸಿಆರ್‌ಎ (FCRA) ನೋಂದಣಿ ಅರ್ಜಿಯನ್ನು ತಿರಸ್ಕರಿಸಿದ್ದ ಕೇಂದ್ರ ಸರ್ಕಾರದ ಆದೇಶವನ್ನು ನ್ಯಾಯಾಲಯ ರದ್ದುಗೊಳಿಸಿದೆ.

ಪ್ರಕರಣದ ಹಿನ್ನೆಲೆ:

‘ಶ್ರೀಮದ್ ಭಗವದ್ಗೀತೆ ಎಜುಕೇಶನಲ್ ಟ್ರಸ್ಟ್’ ಎಂಬ ಸಂಸ್ಥೆಯು ವಿದೇಶಿ ದೇಣಿಗೆ ಪಡೆಯಲು ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆಯಡಿ (FCRA) ನೋಂದಣಿಗಾಗಿ ಅರ್ಜಿ ಸಲ್ಲಿಸಿತ್ತು. ಆದರೆ ಕೇಂದ್ರ ಗೃಹ ಸಚಿವಾಲಯವು, “ಈ ಸಂಸ್ಥೆಯು ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ ಮತ್ತು ಧಾರ್ಮಿಕ ಗ್ರಂಥಗಳನ್ನು ಬೋಧಿಸುತ್ತಿದೆ” ಎಂಬ ಕಾರಣ ನೀಡಿ ಅರ್ಜಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಟ್ರಸ್ಟ್ ಹೈಕೋರ್ಟ್ ಮೆಟ್ಟಿಲೇರಿತ್ತು.

ನ್ಯಾಯಾಲಯದ ಪ್ರಮುಖ ಅವಲೋಕನಗಳು:

ಇದನ್ನೂ ಓದಿ: ಪದವೀಧರರಿಗೆ ಗುಡ್‌ ನ್ಯೂಸ್‌: ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಕ್ರೆಡಿಟ್‌ ಆಫೀಸರ್‌ ಹುದ್ದೆಗೆ ಅರ್ಜಿ ಆಹ್ವಾನ

ಸರ್ಕಾರಕ್ಕೆ ಆದೇಶ:

ಕೇಂದ್ರ ಗೃಹ ಸಚಿವಾಲಯದ ತಿರಸ್ಕಾರದ ಆದೇಶವು ಕಾನೂನುಬಾಹಿರ ಎಂದು ಘೋಷಿಸಿದ ಹೈಕೋರ್ಟ್, ಎಂಟು ವಾರಗಳ ಒಳಗಾಗಿ ಸದರಿ ಟ್ರಸ್ಟ್‌ಗೆ ಎಫ್‌ಸಿಆರ್‌ಎ (FCRA) ನೋಂದಣಿ ಪ್ರಮಾಣಪತ್ರವನ್ನು ಮಂಜೂರು ಮಾಡುವಂತೆ ಆದೇಶಿಸಿದೆ. ಈ ತೀರ್ಪು ಭಗವದ್ಗೀತೆ ಮತ್ತು ಯೋಗದಂತಹ ಪಾರಂಪರಿಕ ವಿಷಯಗಳನ್ನು ಬೋಧಿಸುವ ಶಿಕ್ಷಣ ಸಂಸ್ಥೆಗಳಿಗೆ ದೊಡ್ಡ ಮಟ್ಟದ ಕಾನೂನು ಬಲ ನೀಡಿದಂತಾಗಿದೆ.

Exit mobile version