News Next Kannada

sports

BWF World Championship : ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ ಶಿಪ್‌ನಲ್ಲಿ ವಿಶ್ವದ ನಂ.1 ಆಟಗಾರನಿಗೆ ಸೋಲುಣಿಸಿದ ಕಾರ್ಕಳದ ಆಯುಷ್‌ ಶೆಟ್ಟಿ

ಆಯುಷ್‌ ಶೆಟ್ಟಿ ಏಷ್ಯನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ ಶಿಪ್‌ ಫೈನಲ್‌ ಪ್ರವೇಶಿಸುವ ಮೂಲಕ 61 ವರ್ಷಗಳ ಹಿಂದಿನ ದಾಖಲೆಯನ್ನು ಅಳಿಸಿ ಹಾಕಿದ್ದರು.

By Arun Gundmi | ಅರುಣ್‌ ಗುಂಡ್ಮಿ Editor-in-Chief
Twitter / X

ನವದೆಹಲಿ : ಬಿಡಬ್ಲ್ಯೂಎಫ್‌ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ ಶಿಪ್‌ನಲ್ಲಿ ಉಡುಪಿ ಜಿಲ್ಲೆಯ ಕಾರ್ಕಳದ ಮೂಲದ ಆಯುಷ್‌ ಶೆಟ್ಟಿ ವಿಶ್ವದ ನಂ.1 ಆಗಾರ ಚೀನಾದ ಶಿ ಯುಕಿಯನ್ನು ಹೀನಾಯವಾಗಿ ಸೋಲಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಬೆಂಗಳೂರಿನ ಪ್ರಕಾಶ್‌ ಪಡುಕೋಣೆ ಅಕಾಡೆಮಿಯಲ್ಲಿ ತರಬೇತಿ ಪಡೆದಿರುವ ಕಾರ್ಕಳದ ಸಾಣೂರಿನ ಆಯುಷ್‌ ಶೆಟ್ಟಿ ಇದೀಗ ವಿಶ್ವ ಬ್ಯಾಡ್ಮಿಂಟನ್‌ ಲೋಕದಲ್ಲಿ ಮಿಂಚುತ್ತಿದ್ದಾರೆ.

ಬಿಡಬ್ಲ್ಯೂಎಫ್‌ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ ಶಿಪ್‌ನ ಹಾಲಿ ಚಾಂಪಿಯನ್‌ ಚೀನಾದ ಶಿ ಯುಕಿ ಅವರನ್ನೇ 21-14, 12-21, 21-19 ಸೆಟ್‌ಗಳ ಅಂತರದಿಂದ ಸೋಲಿಸುವ ಮೂಲಕ ಆಯುಷ್‌ ಶೆ್ಟ್ಟಿ ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಹೊಸ ದೆಹಲಿಯಲ್ಲಿ ನಡೆಯುತ್ತಿರುವ ಟೂರ್ನಿಯ ಪುರುಷರ ವಿಭಾಗದ ಮೊದಲ ಸುತ್ತಿನಲ್ಲಿಯೇ ವಿಶ್ವದ ನಂ.1 ಆಟಗಾರನಿಗೆ ನೀರು ಕುಡಿಸಿದ್ದಾರೆ.

ಕಾರ್ಕಳ ತಾಲೂಕಿನ ಸಾಣೂರು ಅನ್ನೋ ಗ್ರಾಮದಲ್ಲಿ ಜನಸಿದ ಆಯುಷ್‌ ಶೆಟ್ಟಿ 8ನೇ ವಯಸ್ಸಿನಲ್ಲಿಯೇ ಸೆಟ್ಲ ರಾಕೆ್ಟ್‌ ಹಿಡಿದವರು. ಹಿತ್ತಲಲ್ಲಿ ಆಟವಾಡಲು ಆರಂಭಿಸಿ, ನಂತರ ಪ್ರಕಾಶ್‌ ಪಡುಕೋಣೆ ಬ್ಯಾಡ್ಮಿಂಟನ್‌ ಅಕಾಡೆಮಿಯನ್ನು ಸೇರಿಕೊಂಡರು. ಕಠಿಣ ಪರಿಶ್ರಮ, ತರಬೇತಿಯ ನಂತರದಲ್ಲಿ ಇಂದು ವಿಶ್ವಮಟ್ಟದಲ್ಲಿ ಮಿಂಚುತ್ತಿದ್ದಾರೆ.

ಏಷ್ಯನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ ಶಿಪ್‌ ಫೈನಲ್‌ ಪ್ರವೇಶಿಸುವ ಮೂಲಕ 61 ವರ್ಷಗಳ ಹಿಂದಿನ ದಾಖಲೆಯನ್ನು ಅಳಿಸಿ ಹಾಕಿದ್ದರು. 2025ರಲ್ಲಿ ಯುಎಸ್‌ ಓಪನ್‌ನಲ್ಲಿ ಬಿಡಬ್ಲ್ಯೂಎಫ್‌ ವಲ್ಡ್‌ ಟೂರ್‌ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಇದೀಗ ವಿಶ್ವದ ನಂ.1 ಆಟಗಾರನನ್ನೇ ಸೋಲಿಸುವ ಮೂಲಕ ಬ್ಯಾಡ್ಮಿಂಟನ್‌ ಲೋಕದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ.