ದುಬೈ : ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2027ರ ವೇಳಾಪಟ್ಟಿ ಬಿಡುಗಡೆ ಆಗಿದೆ. ಅಕ್ಟೋಬರ್ 2ರಂದು ಮೊದಲ ಪಂದ್ಯ ನಡೆಯಲಿದ್ದು, ಅಕ್ಟೋಬರ್ 7ರಂದು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳು ಮುಖಾಮುಖಿಯಾಗಲಿವೆ.
ದಕ್ಷಿಣ ಆಫ್ರಿಕಾ, ಜಿಂಬಾಬ್ಬೆ ಹಾಗೂ ನಮೀಬಿಯಾ ಜಂಟಿಯಾಗಿ ಆಯೋಜಿಸಿರುವ ಏಕದಿನ ವಿಶ್ವಕಪ್ ಅಕ್ಟೋಬರ್ 2ರಿಂದ ಆರಂಭಗೊಂಡು, ನವೆಂಬರ್ 21ರವರೆಗೆ ನಡೆಯಲಿದೆ. ಸೂಪರ್ ಸಿರೀಸ್ ಮೂಲಕ ಲೀಗ್ ಹಂತದ ಪಂದ್ಯಗಳು ಆರಂಭಗೊಳ್ಳಲಿದೆ.
ಒಟ್ಟು 12 ತಂಡಗಳು ಈ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುತ್ತಿದ್ದು, ಆರು ತಂಡಗಳಂತೆ ಎರಡು ಗುಂಪುಗಳಾಗಿ ವಿಭಾಗಿಸಲಾಗಿದೆ. ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ತಂಡಗಳು ವಿಶ್ವಕಪ್‌ಗೆ ನೇರ ಅರ್ಹತೆ ಪಡೆದಿವೆ. ಕ್ವಾಲಿಫೈಯರ್ ಆಗುವ ತಂಡಗಳ ಪೈಕಿ ಅಗ್ರಸ್ಥಾನ ಪಡೆಯುವ ತಂಡ ನೇರವಾಗಿ ಗ್ರೂಪ್ ಹಂತಕ್ಕೆ ಎಂಟ್ರಿ ಕೊಡಲಿದೆ. ಉಳಿದಂತೆ ಮೂರು ತಂಡಗಳು ಗ್ರೂಫ್ ಹಂತದ ಸ್ಥಾನಕ್ಕಾಗಿ ಸೂಪರ್ ಸೀರೀಸ್ ನಲ್ಲಿ ಸ್ಪರ್ಧೆ ಮಾಡುತ್ತವೆ.
ಪ್ರತಿಯೊಂದು ಗುಂಪಿನಿಂದ ಅಗ್ರಸ್ಥಾನಿಯಾಗುವ ಮೂರು ತಂಡಗಳು ಸೂಪರ್ 7 ಹಂತಕ್ಕೆ ಮುನ್ನಡೆ ಪಡೆಯಲಿವೆ. ಅಲ್ಲದೇ ಎರಡೂ ಗುಂಪುಗಳಲ್ಲಿ ನಾಲ್ಕನೇ ಸ್ಥಾನ ಪಡೆಯುವ ತಂಡಗಳ ಪೈಕಿ ಉತ್ತಮ ಸಾಧನೆ ಮಾಡಿದ ತಂಡ 7ನೇ ಸ್ಥಾನ ಪಡೆಯುತ್ತದೆ. ಪ್ರತೀ ಗುಂಪಿನ ಅಗ್ರ ಮೂರು ತಂಡಗಳು ಸೂಪರ್ 7 ಹಂತವನ್ನು ಪ್ರವೇಶಿಸಲಿವೆ.
ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳು ಅಕ್ಟೋಬರ್ 2ರಂದು ಆರಂಭವಾಗಲಿದೆ. ಸಿಂಗಲ್ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯುವ ಈ ಸೂಪರ್ ಸೀರೀಸ್ ನಲ್ಲಿ ಅಗ್ರಸ್ಥಾನ ಪಡೆಯುವ ತಂಡ ಗುಂಪು ಹಂತಕ್ಕೆ ಎಂಟ್ರಿ ಪಡೆಯಲಿದೆ. ಅಕ್ಟೋಬರ್ 2, 4, 6ರಂದು ಸೂಪರ್ ಸೀರೀಸ್ ಪಂದ್ಯಗಳು ನಡೆಯಲಿವೆ.
ಭಾರತ- ಪಾಕ್ ಪಂದ್ಯ ಯಾವಾಗ ?
ವಿಶ್ವಕಪ್‌ನ ಗ್ರೂಪ್ ಹಂತದ ಪಂದ್ಯಗಳು ಅಕ್ಟೋಬರ್ 7ರಂದು ಆರಂಭಗೊಳ್ಳಲಿದ್ದು, ಮೊದಲ ಪಂದ್ಯದಲ್ಲಿಯೇ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ. ಇನ್ನು ಭಾರತ ಹಾಗೂ ಪಾಕಿಸ್ತಾನ ತಂಡಗಳು ಗ್ರೂಪ್ ಹಂತದಲ್ಲಿಯೇ ಮುಖಾಮುಖಿಯಾಗಲಿವೆ.
ಅಕ್ಟೋಬರ್ 10 ರಂದು ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವು ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಲಿದೆ. ಗ್ರೂಫ್ ಹಂತದಲ್ಲಿ ಕೊನೆಯ ಪಂದ್ಯದಲ್ಲಿ ಭಾರತ ಹಾಗೂ ಅತಿಥೇಯ ಜಿಂಬಾಬ್ವೆ ತಂಡಗಳು ಮುಖಾಮುಖಿಯಾಗಲಿವೆ. ಪ್ರತೀ ಗುಂಪಿನಿಂದ ಅಗ್ರಸ್ಥಾನಿಯಾಗುವ ಮೂರು ತಂಡ ಹಾಗೂ ಎರಡೂ ಗುಂಪಿನಲ್ಲಿ ನಾಲ್ಕನೇ ಸ್ಥಾನ ಪಡೆದು, ಅದ್ರಲ್ಲೂ ಅತೀ ಹೆಚ್ಚು ಅಂಕ ಪಡೆದ ತಂಡ ಸೂಪರ್ 7 ಹಂತಕ್ಕೆ ಪ್ರವೇಶ ಪಡೆಯಲಿದೆ.
ಏಕದಿನ ಕ್ರಿಕೆಟ್ ವಿಶ್ವಕಪ್ 2027ರ ಸಂಪೂರ್ಣ ವೇಳಾಪಟ್ಟಿ
ಶನಿವಾರ, 2 ಅಕ್ಟೋಬರ್ 2027 - QF1 ವಿರುದ್ಧ QF3 - ವಿಂಡ್‌ಹೋಕ್
ಸೋಮವಾರ, 4 ಅಕ್ಟೋಬರ್ 2027 - QF1 ವಿರುದ್ಧ QF2 - ವಿಂಡ್‌ಹೋಕ್
ಬುಧವಾರ, 6 ಅಕ್ಟೋಬರ್ 2027 - QF2 ವಿರುದ್ಧ QF3 - ವಿಂಡ್‌ಹೋಕ್
ಗುಂಪು ಹಂತ
ಗುರುವಾರ, 7 ಅಕ್ಟೋಬರ್ 2027 - ಭಾರತ ವಿರುದ್ಧ ಆಸ್ಟ್ರೇಲಿಯಾ - ಕೇಪ್ ಟೌನ್
ಶುಕ್ರವಾರ, 8 ಅಕ್ಟೋಬರ್ 2027 - ಪಾಕಿಸ್ತಾನ ವಿರುದ್ಧ ಅಫ್ಘಾನಿಸ್ತಾನ - ತ್ಶ್ವಾನೆ
ಶುಕ್ರವಾರ, 8 ಅಕ್ಟೋಬರ್ 2027 - ಇಂಗ್ಲೆಂಡ್ ವಿರುದ್ಧ ಬಾಂಗ್ಲಾದೇಶ - ವಿಂಡ್‌ಹೋಕ್
ಶನಿವಾರ, 9 ಅಕ್ಟೋಬರ್ 2027 - ಜಿಂಬಾಬ್ವೆ ವಿರುದ್ಧ ಕ್ವಾಲಿಫೈಯರ್ A - ಬುಲವಾಯೊ
ಶನಿವಾರ, 9 ಅಕ್ಟೋಬರ್ 2027 - ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್ - ಕೇಪ್ ಟೌನ್
ಭಾನುವಾರ, 10 ಅಕ್ಟೋಬರ್ 2027 - ಭಾರತ ವಿರುದ್ಧ ಪಾಕಿಸ್ತಾನ - ಜೋಹಾನ್ಸ್‌ಬರ್ಗ್
ಭಾನುವಾರ, 10 ಅಕ್ಟೋಬರ್ 2027 - ಶ್ರೀಲಂಕಾ ವಿರುದ್ಧ ಕ್ವಾಲಿಫೈಯರ್ B - ವಿಂಡ್‌ಹೋಕ್
ಸೋಮವಾರ, 11 ಅಕ್ಟೋಬರ್ 2027 - ಜಿಂಬಾಬ್ವೆ ವಿರುದ್ಧ ಅಫ್ಘಾನಿಸ್ತಾನ - ಬುಲವಾಯೊ
ಮಂಗಳವಾರ, 12 ಅಕ್ಟೋಬರ್ 2027 - ಆಸ್ಟ್ರೇಲಿಯಾ ವಿರುದ್ಧ ಕ್ವಾಲಿಫೈಯರ್ A - ಪಾರ್ಲ್
ಮಂಗಳವಾರ, 12 ಅಕ್ಟೋಬರ್ 2027 - ನ್ಯೂಜಿಲೆಂಡ್ ವಿರುದ್ಧ ಬಾಂಗ್ಲಾದೇಶ - ಕುಗೊಂಪೊ ಸಿಟಿ
ಬುಧವಾರ, 13 ಅಕ್ಟೋಬರ್ 2027 - ಇಂಗ್ಲೆಂಡ್ ವಿರುದ್ಧ ಶ್ರೀಲಂಕಾ - ವಿಂಡ್‌ಹೋಕ್
ಬುಧವಾರ, 13 ಅಕ್ಟೋಬರ್ 2027 - ದಕ್ಷಿಣ ಆಫ್ರಿಕಾ ವಿರುದ್ಧ ಕ್ವಾಲಿಫೈಯರ್ B - ಪಾರ್ಲ್
ಗುರುವಾರ, 14 ಅಕ್ಟೋಬರ್ 2027 - ಭಾರತ ವಿರುದ್ಧ ಅಫ್ಘಾನಿಸ್ತಾನ - ತ್ಶ್ವಾನೆ
ಶುಕ್ರವಾರ, 15 ಅಕ್ಟೋಬರ್ 2027 - ಪಾಕಿಸ್ತಾನ ವಿರುದ್ಧ ಕ್ವಾಲಿಫೈಯರ್ A - ಬ್ಲೋಮ್‌ಫಾಂಟೈನ್
ಶುಕ್ರವಾರ, 15 ಅಕ್ಟೋಬರ್ 2027 - ಜಿಂಬಾಬ್ವೆ ವಿರುದ್ಧ ಆಸ್ಟ್ರೇಲಿಯಾ - ಹರಾರೆ
ಶನಿವಾರ, 16 ಅಕ್ಟೋಬರ್ 2027 - ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ - ಡರ್ಬನ್
ಶನಿವಾರ, 16 ಅಕ್ಟೋಬರ್ 2027 - ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ - ಕ್ವೆಬೆರ್ಹಾ
ಭಾನುವಾರ, 17 ಅಕ್ಟೋಬರ್ 2027 - ಭಾರತ ವಿರುದ್ಧ ಕ್ವಾಲಿಫೈಯರ್ A - ಬ್ಲೋಮ್‌ಫಾಂಟೈನ್
ಭಾನುವಾರ, 17 ಅಕ್ಟೋಬರ್ 2027 - ನ್ಯೂಜಿಲೆಂಡ್ ವಿರುದ್ಧ ಕ್ವಾಲಿಫೈಯರ್ ಬಿ - ಹರಾರೆ
ಸೋಮವಾರ, 18 ಅಕ್ಟೋಬರ್ 2027 - ಆಸ್ಟ್ರೇಲಿಯಾ ವಿರುದ್ಧ ಅಫ್ಘಾನಿಸ್ತಾನ - ಕುಗೊಂಪೊ ಸಿಟಿ
ಮಂಗಳವಾರ, 19 ಅಕ್ಟೋಬರ್ 2027 - ಜಿಂಬಾಬ್ವೆ ವಿರುದ್ಧ ಪಾಕಿಸ್ತಾನ - ಹರಾರೆ
ಮಂಗಳವಾರ, 19 ಅಕ್ಟೋಬರ್ 2027 - ದಕ್ಷಿಣ ಆಫ್ರಿಕಾ ವಿರುದ್ಧ ಬಾಂಗ್ಲಾದೇಶ - ಡರ್ಬನ್
ಬುಧವಾರ, 20 ಅಕ್ಟೋಬರ್ 2027 - ನ್ಯೂಜಿಲೆಂಡ್ ವಿರುದ್ಧ ಶ್ರೀಲಂಕಾ - ಜೋಹಾನ್ಸ್‌ಬರ್ಗ್
ಬುಧವಾರ, 20 ಅಕ್ಟೋಬರ್ 2027 - ಇಂಗ್ಲೆಂಡ್ ವಿರುದ್ಧ ಕ್ವಾಲಿಫೈಯರ್ ಬಿ - ಹರಾರೆ
ಗುರುವಾರ, 21 ಅಕ್ಟೋಬರ್ 2027 - ಅಫ್ಘಾನಿಸ್ತಾನ ವಿರುದ್ಧ ಕ್ವಾಲಿಫೈಯರ್ ಎ - ಕುಗೊಂಪೊ ಸಿಟಿ
ಶುಕ್ರವಾರ, 22 ಅಕ್ಟೋಬರ್ 2027 - ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ - ಪಾರ್ಲ್
ಶುಕ್ರವಾರ, 22 ಅಕ್ಟೋಬರ್ 2027 - ದಕ್ಷಿಣ ಆಫ್ರಿಕಾ ವಿರುದ್ಧ ಶ್ರೀಲಂಕಾ - ಜೋಹಾನ್ಸ್‌ಬರ್ಗ್
ಶನಿವಾರ, 23 ಅಕ್ಟೋಬರ್ 2027 - ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ - ಕ್ವೆಬೆರ್ಹಾ
ಶನಿವಾರ, 23 ಅಕ್ಟೋಬರ್ 2027 - ಬಾಂಗ್ಲಾದೇಶ ವಿರುದ್ಧ ಕ್ವಾಲಿಫೈಯರ್ ಬಿ - ತ್ಶ್ವಾನೆ
ಭಾನುವಾರ, 24 ಅಕ್ಟೋಬರ್ 2027 - ಜಿಂಬಾಬ್ವೆ ವಿರುದ್ಧ ಭಾರತ - ವಿಕ್ಟೋರಿಯಾ ಫಾಲ್ಸ್
ಸೂಪರ್ 7 ಹಂತ (ಪ್ರಸ್ತುತ ಶ್ರೇಯಾಂಕಿತ ತಂಡವು ಆವರಣದಲ್ಲಿದೆ)
ಸೋಮವಾರ, 25 ಅಕ್ಟೋಬರ್ 2027 - A2 (ಆಸ್ಟ್ರೇಲಿಯಾ) ವಿರುದ್ಧ B3 (ಶ್ರೀಲಂಕಾ) - ಜೋಹಾನ್ಸ್‌ಬರ್ಗ್
ಮಂಗಳವಾರ, 26 ಅಕ್ಟೋಬರ್ 2027 - B1 (ನ್ಯೂಜಿಲೆಂಡ್) ವಿರುದ್ಧ A3 (ಪಾಕಿಸ್ತಾನ) - ಕ್ವೆಬೆರ್ಹಾ
ಬುಧವಾರ, 27 ಅಕ್ಟೋಬರ್ 2027 - B2 (ದಕ್ಷಿಣ ಆಫ್ರಿಕಾ) ವಿರುದ್ಧ AB4 (ಇಂಗ್ಲೆಂಡ್) - ತ್ಶ್ವಾನೆ
ಗುರುವಾರ, 28 ಅಕ್ಟೋಬರ್ 2027 - A1 (ಭಾರತ) ವಿರುದ್ಧ A2 (ಆಸ್ಟ್ರೇಲಿಯಾ) - ವಿಕ್ಟೋರಿಯಾ ಫಾಲ್ಸ್
ಶುಕ್ರವಾರ, 29 ಅಕ್ಟೋಬರ್ 2027 - B1 (ನ್ಯೂಜಿಲೆಂಡ್) ವಿರುದ್ಧ B3 (ಶ್ರೀಲಂಕಾ) - ಕುಗೊಂಪೊ ಸಿಟಿ
ಶನಿವಾರ, 30 ಅಕ್ಟೋಬರ್ 2027 - A3 (ಪಾಕಿಸ್ತಾನ) ವಿರುದ್ಧ AB4 (ಇಂಗ್ಲೆಂಡ್) - ವಿಕ್ಟೋರಿಯಾ ಫಾಲ್ಸ್
ಭಾನುವಾರ, 31 ಅಕ್ಟೋಬರ್ 2027 - B2 (ದಕ್ಷಿಣ ಆಫ್ರಿಕಾ) ವಿರುದ್ಧ A1 (ಭಾರತ) - ಜೋಹಾನ್ಸ್‌ಬರ್ಗ್
ಸೋಮವಾರ, 1 ನವೆಂಬರ್ 2027 - A2 (ಆಸ್ಟ್ರೇಲಿಯಾ) ವಿರುದ್ಧ B1 (ನ್ಯೂಜಿಲೆಂಡ್) - ವಿಕ್ಟೋರಿಯಾ ಫಾಲ್ಸ್
ಮಂಗಳವಾರ, 2 ನವೆಂಬರ್ 2027 - B3 (ಶ್ರೀಲಂಕಾ) ವಿರುದ್ಧ AB4 (ಇಂಗ್ಲೆಂಡ್) - ಕೇಪ್ ಟೌನ್
ಬುಧವಾರ, 3 ನವೆಂಬರ್ 2027 - B2 (ದಕ್ಷಿಣ ಆಫ್ರಿಕಾ) ವಿರುದ್ಧ A3 (ಪಾಕಿಸ್ತಾನ) - ಡರ್ಬನ್
ಗುರುವಾರ, 4 ನವೆಂಬರ್ 2027 - A1 (ಭಾರತ) ವಿರುದ್ಧ B1 (ನ್ಯೂಜಿಲೆಂಡ್) - ಪಾರ್ಲ್
ಶುಕ್ರವಾರ, 5 ನವೆಂಬರ್ 2027 - A2 (ಆಸ್ಟ್ರೇಲಿಯಾ) ವಿರುದ್ಧ AB4 (ಇಂಗ್ಲೆಂಡ್) - ಡರ್ಬನ್
ಶನಿವಾರ, 6 ನವೆಂಬರ್ 2027 - B2 (ದಕ್ಷಿಣ ಆಫ್ರಿಕಾ) ವಿರುದ್ಧ B3 (ಶ್ರೀಲಂಕಾ) - ಬ್ಲೋಮ್‌ಫಾಂಟೈನ್
ಭಾನುವಾರ, 7 ನವೆಂಬರ್ 2027 - A1 (ಭಾರತ) ವಿರುದ್ಧ A3 (ಪಾಕಿಸ್ತಾನ) - ಕೇಪ್ ಟೌನ್
ಸೋಮವಾರ, 8 ನವೆಂಬರ್ 2027 - B1 (ನ್ಯೂಜಿಲೆಂಡ್) ವಿರುದ್ಧ AB4 (ಇಂಗ್ಲೆಂಡ್) - ಡರ್ಬನ್
ಮಂಗಳವಾರ, 9 ನವೆಂಬರ್ 2027 - B2 (ದಕ್ಷಿಣ ಆಫ್ರಿಕಾ) ವಿರುದ್ಧ A2 (ಆಸ್ಟ್ರೇಲಿಯಾ) - ಗೆಬೆರ್ಹಾ
ಬುಧವಾರ, 10 ನವೆಂಬರ್ 2027 - A3 (ಪಾಕಿಸ್ತಾನ) ವಿರುದ್ಧ B3 (ಶ್ರೀಲಂಕಾ) - ಬ್ಲೋಮ್‌ಫಾಂಟೈನ್
ಗುರುವಾರ, 11 ನವೆಂಬರ್ 2027 - A1 (ಭಾರತ) ವಿರುದ್ಧ AB4 (ಇಂಗ್ಲೆಂಡ್) - ಗೆಬೆರ್ಹಾ
ಶುಕ್ರವಾರ, 12 ನವೆಂಬರ್ 2027 - B2 (ದಕ್ಷಿಣ ಆಫ್ರಿಕಾ) ವಿರುದ್ಧ B1 (ನ್ಯೂಜಿಲೆಂಡ್) - ಕೇಪ್ ಟೌನ್
ಶನಿವಾರ, 13 ನವೆಂಬರ್ 2027 - A2 (ಆಸ್ಟ್ರೇಲಿಯಾ) ವಿರುದ್ಧ A3 (ಪಾಕಿಸ್ತಾನ) - ಬ್ಲೋಮ್‌ಫಾಂಟೈನ್
ಭಾನುವಾರ, 14 ನವೆಂಬರ್ 2027 - A1 (ಭಾರತ) ವಿರುದ್ಧ B3 (ಶ್ರೀಲಂಕಾ) - ಡರ್ಬನ್
ಸೆಮಿಫೈನಲ್
ಬುಧವಾರ, 17 ನವೆಂಬರ್ 2027 - ಸೆಮಿಫೈನಲ್ 1 - ಕೇಪ್ ಟೌನ್
ಗುರುವಾರ, 18 ನವೆಂಬರ್ 2027 - ಸೆಮಿಫೈನಲ್ 2 - ತ್ಶ್ವಾನೆ
ಫೈನಲ್
ಭಾನುವಾರ, 21 ನವೆಂಬರ್ 2027 - ಫೈನಲ್ - ಜೋಹಾನ್ಸ್‌ಬರ್ಗ್