Kannada News Next

cricket

ಶುಭಮನ್ ಗಿಲ್ ವಿಶ್ವದಲ್ಲೇ ಅತಿ ವೇಗದ ದ್ವಿಶತಕ: ಗುವಾಹಟಿಯಲ್ಲಿ ದಾಖಲೆಗಳ ಸುರಿಮಳೆ

ಭಾರತ ಕ್ರಿಕೆಟ್‌ ತಂಡದ ನಾಯಕ ಶುಭಮನ್‌ ಗಿಲ್‌ (Shubman Gill) ಅತೀ ವೇಗದ ಶತಕ ಬಾರಿಸುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ.

By Arun Gundmi | ಅರುಣ್‌ ಗುಂಡ್ಮಿ Editor-in-Chief
Photo: BCCI

ಬೆಂಗಳೂರು/ಗುವಾಹಟಿ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ 2ನೇ ಏಕದಿನ ಪಂದ್ಯ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ. ಏಕದಿನ ಪಂದ್ಯದಲ್ಲಿ 811ರನ್‌ ದಾಖಲಾದ್ರೆ, ಭಾರತ ಕ್ರಿಕೆಟ್‌ ತಂಡದ ನಾಯಕ ಶುಭಮನ್‌ ಗಿಲ್‌ (Shubman Gill) ಅತೀ ವೇಗದ ಶತಕ ಬಾರಿಸುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ.

ಶುಭಮನ್ ಗಿಲ್ ವಿಶ್ವ ದಾಖಲೆಯ ದ್ವಿಶತಕ

ವೆಸ್ಟ್‌ ಇಂಡಿಸ್‌ ವಿರುದ್ದ ಎರಡು ಏಕದಿನ ಪಂದ್ಯಗಳನ್ನು ಗೆದ್ದು ಬೀಗಿರುವ ಭಾರತ ತಂಡಕ್ಕೆ ನಾಯಕ ಎರಡನೇ ಗೆಲುವು ತಂದು ಕೊಟ್ರು. ಮೊದಲ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಅವರ ಆಕರ್ಷಕ ಶತಕದಿಂದ ಭಾರತ ಗೆಲುವು ಕಂಡಿತ್ತು. ಆದರೆ ಎರಡನೇ ಪಂದ್ಯದಲ್ಲಿ ವೆಸ್ಟ್‌ ಇಂಡಿಸ್‌ ನೀಡಿದ್ದ 406ರನ್‌ ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ ಕೇವಲ 117 ಎಸೆತಗಳಲ್ಲಿ ದ್ವಿಶತಕ ಪೂರ್ಣಗೊಳಿಸಿದ್ರು.

ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಇದು ಅತ್ಯಂತ ವೇಗದ ದ್ವಿಶತಕವಾಗಿದ್ದು, ವಿಶ್ವದ ಮೊದಲ ಆಟಗಾರ ಅನ್ನೋ ಖ್ಯಾತಿಗೆ ಶುಭಮನ್‌ ಗಿಲ್‌ ಪಾತ್ರರಾಗಿದ್ದಾರೆ. 2022ರಲ್ಲಿ ಬಾಂಗ್ಲಾದೇಶ ವಿರುದ್ಧ ಇಶಾನ್ ಕಿಶನ್ ಮಾಡಿದ್ದ 126 ಎಸೆತಗಳ ದಾಖಲೆಯನ್ನು ಗಿಲ್ ಮುರಿದರು.

ಏಕದಿನ ಕ್ರಿಕೆಟ್ ನಲ್ಲಿ ರನ್‌ ಚೇಸಿಂಗ್‌ನಲ್ಲಿ ಆಸ್ಟ್ರೇಲಿಯಾ ತಂಡದ ಗ್ಲೇನ್‌ ಮ್ಯಾಕ್ಸ್‌ವೆಲ್‌ ಅವರ ದಾಖಲೆಯನ್ನು ಗಿಲ್‌ ಅಳಿಸಿ ಹಾಕಿದ್ದಾರೆ. ರನ್‌ ಚೇಸಿಂಗ್‌ ನಲ್ಲಿ 223ರನ್‌ ಬಾರಿಸಿ ಅಜೇಯರಾಗಿ ಉಳಿಯುವ ಮೂಲಕ ಗಿಲ್‌ ವಿಶ್ವದ ನಂ.1 ಆಟಗಾರ ಎನಿಸಿಕೊಂಡಿದ್ದಾರೆ.

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ರೋಹಿತ್‌ ಶರ್ಮಾ ಎರಡು ದ್ವಿಶಕ ಸಿಡಿಸಿದ ದಾಖಲೆಯನ್ನು ಹೊಂದಿದ್ದಾರೆ. ಮತ್ತೊಂದೆಡೆಯಲ್ಲಿ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ ಶತಕ ಸಿಡಿಸುವ ಮೂಲಕ ಆಯ್ಕೆಗಾರರ ಬಾಯಿ ಮುಚ್ಚಿಸಿದ್ದಾರೆ. ಅಲ್ಲದೇ ಏಕದಿನ ಕ್ರಿಕೆಟ್‌ನಲ್ಲಿ 12000ರನ್‌ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ (242 ಇನ್ನಿಂಗ್ಸ್)ನಲ್ಲಿ ಈ ಸಾಧನೆಯನ್ನು ಮಾಡಿದ್ರೆ, ರೋಹಿತ್‌ ಶರ್ಮಾ (282 ಇನ್ನಿಂಗ್ಸ್) 12000 ರನ್‌ ಗಳ ಕ್ಲಬ್‌ಗೆ ಸೇರ್ಪಡೆ ಆಗಿದ್ದಾರೆ. ಇನ್ನು ರೋಹಿತ್‌ ಶರ್ಮಾ ಹಾಗೂ ಶುಭಮನ್‌ ಗಿಲ್ ಆರಂಭಿಕರಾಗಿ ಕಣಕ್ಕೆ ಇಳಿದು 255ರನ್‌ ಗಳ ಜೊತೆಯಾಟ ಆಗಿದ್ದು, ಭಾರತ ಪರ ದಾಖಲಾದ ಎರಡನೇ ಅತ್ಯಧಿಕ ಆರಂಭಿಕ ಜೊತೆಯಾಟ ಎನಿಸಿಕೊಂಡಿದೆ.

ಭಾರತ - ವೆಸ್ಟ್‌ಇಂಡಿಸ್‌ ಪಂದ್ಯಗಳ ದಾಖಲೆಗಳ ಪಟ್ಟಿ

ಅತೀ ದೊಡ್ಡ ರನ್‌ ಚೇಸ್‌: ವೆಸ್ಟ್‌ ಇಂಡಿಸ್‌ ಭಾರತಕ್ಕೆ ಬರೋಬ್ಬರಿ 406ರನ್‌ ಗಳ ಗುರಿಯನ್ನು ನೀಡಿತ್ತು. ಭಾರತ ಈ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದೆ. ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿಯೇ ಇದು ಎರಡನೇ ಅತೀ ದೊಡ್ಡ ಯಶಸ್ವಿ ರನ್‌ ಚೇಸ್‌ ಎನಿಸಿಕೊಂಡಿದೆ.

ಒಂದೇ ಪಂದ್ಯ ಐದು ಶತಕ : ಹೌದು, ಭಾರತ ಹಾಗೂ ವೆಸ್ಟ್‌ ಇಂಡಿಸ್‌ ವಿರುದ್ದದ ಪಂದ್ಯದಲ್ಲಿ ಒಟ್ಟು ಐವರು ಆಟಗಾರರು ಶತಕದ ಸಾಧನೆ ಮಾಡಿದ್ದಾರೆ. ನ್ ಕ್ಯಾಂಪ್ಬೆಲ್, ಶಾಯ್ ಹೋಪ್, ಅಮೀರ್ ಜಂಗೂ ಮತ್ತು ಭಾರತ ತಂಡದ ನಾಯಕ ಶುಭಮನ್‌ ಗಿಲ್‌ ಹಾಗೂ ರೋಹಿತ್ ಶರ್ಮಾ ಶತಕ ಸಿಡಿಸಿದ್ದಾರೆ. ಏಕದಿನ ಪಂದ್ಯವೊಂದರಲ್ಲಿ ಐವರು ಶತಕ ಸಿಡಿಸಿದ ಮೊಲದ ಪಂದ್ಯ ಇದಾಗಿದೆ.

ಅತೀ ವೇಗದ 400ರನ್‌, ಅತೀ ವೇಗದ 300 ರನ್‌ : ಭಾರತ ಕೇವಲ ದಾಖಲೆಯ ರನ್‌ ಚೆಸ್‌ ಮಾಡಿ ಗೆದ್ದ ದಾಖಲೆ ಮಾಡಿರುವುದು ಮಾತ್ರವಲ್ಲ, ಅತೀ ವೇಗದ 300 ಹಾಗೂ 400 ರನ್‌ ಬಾರಿಸಿದ ಸಾಧನೆ ಮಾಡಿದೆ. ಭಾರತ ಕೇವಲ 29.1 ಓವರ್‌ಗಳಲ್ಲಿ 300 ರನ್‌ ಗಡಿದಾಟಿದ್ರೆ, 43ನೇ ಓವರ್‌ನಲ್ಲಿ 400ರನ್‌ ಗಳಿಸಿದ ಸಾಧನೆ ಮಾಡಿದೆ.

ಸೋಲಿನಲ್ಲೂ ದಾಖಲೆ ಬರೆದ ವೆಸ್ಟ್‌ಇಂಡಿಸ್‌ : ಭಾರತ ವಿರುದ್ದದ ಎರಡನೇ ಪಂದ್ಯದಲ್ಲಿ ವೆಸ್ಟ್‌ಇಂಡಿಸ್‌ ದಾಖಲೆಯ ರನ್‌ ಬಾರಿಸಿದ್ದರೂ ಕೂಡ, ಸೋಲನ್ನು ಕಂಡಿದೆ. ಆದರೆ ವೆಸ್ಟ್‌ ಇಂಡಿಸ್‌ ತಂಡ ಏಕದಿನ ಪಂದ್ಯವೊಂದರಲ್ಲಿ ಮೂವರು ಆಟಗಾರರು ಶತಕ ಬಾರಿಸಿದರೂ ಸೋಲನ್ನು ಕಂಡ ಮೊದಲ ತಂಡ ಎನಿಸಿಕೊಂಡಿದೆ. ಅಲ್ಲದೇ ವೆಸ್ಟ್‌ ಇಂಡಿಸ್‌ ತಂಡ ಏಕದಿನ ಪಂದ್ಯದಲ್ಲಿ ಮೊದಲ ಬಾರಿಗೆ 400 ರನ್‌ಗಳ ಗಡಿದಾಟಿದೆ.