Kannada News Next

sports

Commonwealth Games : ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ 39 ಪದಕ ಗೆದ್ದ ಭಾರತೀಯರು : ಹೈದರಾಬಾದ್ ಗೆ ಒಲಿದ 2030ರ ಕಾಮನ್‌ವೆಲ್ತ್‌ಗೆ ಆತಿಥ್ಯ

ಭಾರತಕ್ಕೆ ಹೆಚ್ಚು ಪದಕ ತಂದುಕೊಡುತ್ತಿದ್ದ ಸಾಂಪ್ರದಾಯಿಕ ಕ್ರೀಡೆಗಳನ್ನು ಕೈಬಿಡಲಾಗಿದ್ದರೂ ಸಹ, ಭಾರತೀಯ ಅಥ್ಲೀಟ್‌ಗಳು 13 ಚಿನ್ನ, 17 ಬೆಳ್ಳಿ ಹಾಗೂ 9 ಕಂಚಿನ ಪದಕ ಗೆದ್ದಿದ್ದಾರೆ.

By ರಶ್ಮಿ ಎಸ್. | Rashmi S
glasgow commonwealth games india medals hyderabad 2030

ಗ್ಲಾಸ್ಗೋದಲ್ಲಿ ನಡೆದ 2026ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಒಟ್ಟು 39 ಪದಕಗಳೊಂದಿಗೆ ಅಭೂತಪೂರ್ವ ಯಶಸ್ಸನ್ನು ಸಾಧಿಸಿದ್ದಾರೆ.

ಈ ಬಾರಿಯ ಕ್ರೀಡಾಕೂಟದಲ್ಲಿ ಕುಸ್ತಿ, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್ ಮತ್ತು ಹಾಕಿ ಸೇರಿದಂತೆ ಭಾರತಕ್ಕೆ ಹೆಚ್ಚು ಪದಕ ತಂದುಕೊಡುತ್ತಿದ್ದ ಸಾಂಪ್ರದಾಯಿಕ ಕ್ರೀಡೆಗಳನ್ನು ಕೈಬಿಡಲಾಗಿದ್ದರೂ ಸಹ, ಭಾರತೀಯ ಅಥ್ಲೀಟ್‌ಗಳು 13 ಚಿನ್ನ, 17 ಬೆಳ್ಳಿ ಹಾಗೂ 9 ಕಂಚಿನ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಕಾಮನ್‌ವೆಲ್ತ್‌ ಗೇಮ್ಸ್‌ನ ಪದಕ ಪಟ್ಟಿಯಲ್ಲಿ ಹೆಮ್ಮೆಯ ಭಾರತ ನಾಲ್ಕನೇ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಕಟು ಪೈಪೋಟಿಯ ನಡುವೆಯೂ ಆತಿಥೇಯ ಸ್ಕಾಟ್‌ಲ್ಯಾಂಡ್ ತಂಡವನ್ನು ಹಿಂದಿಕ್ಕಿ ಭಾರತೀಯ ಕ್ರೀಡಾಪಟುಗಳು ಈ ಸಾಧನೆಗೈದಿದ್ದಾರೆ.

ಈ ಬಾರಿಯ ಭಾರತದ ಐತಿಹಾಸಿಕ ಅಭಿಯಾನದಲ್ಲಿ ಬಾಕ್ಸಿಂಗ್ ತಂಡವು ಸಿಂಹಪಾಲು ಕೊಡುಗೆ ನೀಡಿದ್ದು, ಸಾರ್ವಕಾಲಿಕ ಅತ್ಯುತ್ತಮ ಪ್ರದರ್ಶನದೊಂದಿಗೆ ದಾಖಲೆಯ 7 ಚಿನ್ನ ಹಾಗೂ 3 ಬೆಳ್ಳಿ ಸೇರಿದಂತೆ ಒಟ್ಟು 10 ಪದಕಗಳನ್ನು ಬಾಚಿಕೊಂಡಿದೆ. ವೇಟ್‌ಲಿಫ್ಟಿಂಗ್‌ನಲ್ಲಿ ಸ್ಟಾರ್ ಆಟಗಾರ್ತಿ ಮೀರಾಬಾಯಿ ಚಾನು ಸತತ ಮೂರನೇ ಬಾರಿಗೆ ಚಿನ್ನದ ಪದಕ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ..

ಜುಡೋದಲ್ಲಿ ಅಸ್ಮಿತಾ ಡೇ ಭಾರತದ ಇತಿಹಾಸದಲ್ಲೇ ಮೊದಲ ಚಿನ್ನದ ಪದಕ ತಂದುಕೊಟ್ಟು ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಅಥ್ಲೆಟಿಕ್ಸ್ ವಿಭಾಗದಲ್ಲಿ ತೇಜಸ್ವಿನ್ ಶಂಕರ್ ಡೆಕತ್ಲಾನ್‌ನಲ್ಲಿ ಕಂಚು ಗೆದ್ದರೆ, ಜಾವೆಲಿನ್ ಥ್ರೋ ಸ್ಟಾರ್​​ ನೀರಜ್ ಚೋಪ್ರಾ ಬೆಳ್ಳಿ ಪದಕದೊಂದಿಗೆ ಕಮ್‌ಬ್ಯಾಕ್ ಮಾಡಿದ್ದಾರೆ.

ಮತ್ತೊಂದೆಡೆ, ಭಾರತದ ಪ್ಯಾರಾ ಅಥ್ಲೀಟ್‌ಗಳು ಸಹ ತಮ್ಮ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನವನ್ನು ದಾಖಲಿಸಿದ್ದು, 3 ಚಿನ್ನ ಸೇರಿದಂತೆ ಒಟ್ಟು 7 ಪದಕಗಳನ್ನು ಗೆದ್ದು ದೇಶದ ಕೀರ್ತಿಯನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚಿಸಿದ್ದಾರೆ.

ಗ್ಲಾಸ್ಗೋ ಕ್ರೀಡಾಕೂಟವು ಮುಕ್ತಾಯಗೊಂಡ ಬೆನ್ನಲ್ಲೇ, ಸಮಾರೋಪ ಸಮಾರಂಭದಲ್ಲಿ ಭಾರತೀಯ ಬಾಕ್ಸಿಂಗ್ ತಾರೆ ಜೈಸ್ಮಿನ್ ಲಂಬೋರಿಯಾ ಅವರು ರಾಷ್ಟ್ರಧ್ವಜವನ್ನು ಹೊತ್ತು ಭಾರತೀಯ ತಂಡವನ್ನು ಮುನ್ನಡೆಸಿದರು. ಕ್ರೀಡಾಕೂಟದ ಯಶಸ್ವಿ ಮುಕ್ತಾಯದೊಂದಿಗೆ, ಇದೀಗ ಅಧಿಕೃತವಾಗಿ 2030ರ ಕಾಮನ್‌ವೆಲ್ತ್ ಗೇಮ್ಸ್ ಆತಿಥ್ಯದ ಜವಾಬ್ದಾರಿಯನ್ನು ಭಾರತದ ಅಹಮದಾಬಾದ್ ನಗರಕ್ಕೆ ಹಸ್ತಾಂತರಿಸಲಾಗಿದೆ.