Kannada News Next

tech

ಮೊಟೊರೊಲಾ ಎಡ್ಜ್ 70 ನಿಯೋ ಫೀಚರ್ಸ್‌ ಲೀಕ್ : ಬೆಲೆ ಎಷ್ಟು ಗೊತ್ತಾ ?

ಮೊಟೊರೊಲಾ ಎಡ್ಜ್ 70 ನಿಯೋ (Motorola Edge 70 Neo) ಫೋನ್‌ನ ಫೀಚರ್ಸ್‌ಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ. ಮೊಬೈಲ್‌ ಪ್ರಿಯರು ಸಖತ್‌ ಖುಷಿಯಾಗಿದ್ದಾರೆ.

By Arun Gundmi | ಅರುಣ್‌ ಗುಂಡ್ಮಿ Editor-in-Chief
motorola edge 70 neo

ಮಧ್ಯಮ ವರ್ಗದ ಜನರನ್ನೇ ಗಮನದಲ್ಲಿಟ್ಟುಕೊಂಡು ಮೊಟೊರೊಲಾ ಕಂಪೆನಿ ಸ್ಮಾರ್ಟ್‌ ಪೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಾ ಬಂದಿದೆ. ಇದೀಗ ಮೊಟೊರೊಲಾ ಕಂಪನೆ ನಿಯೋ ಸರಣಿಯ ಸ್ಮಾರ್ಟ್‌ ಪೋನ್‌ ಅನ್ನು ಬಿಡುಗಡೆಗೆ ಸಜ್ಜಾಗಿದೆ. ಆದರೆ ಬಿಡುಗಡೆಗೂ ಮೊದಲೇ ಈ ಸ್ಮಾರ್ಟ್‌ಪೋನ್‌ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದೆ.

ಮೊಟೊರೊಲಾ ಎಡ್ಜ್ 70 ನಿಯೋ (Motorola Edge 70 Neo) ಫೋನ್‌ನ ಫೀಚರ್ಸ್‌ಗಳು ಈಗಾಗಲೇ ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ. ಸ್ಮಾರ್ಟ್‌ಪೋನ್‌ನ ಫೀಚರ್ಸ್‌ ಕಂಡು ಮೊಬೈಲ್‌ ಪ್ರಿಯರು ಸಖತ್‌ ಖುಷಿಯಾಗಿದ್ದಾರೆ. ಈ ಮೊಬೈಲ್‌ ಹೊಸ ವಿನ್ಯಾಸವನ್ನು ಒಳಗೊಂಡಿದ್ದು ಬರೋಬ್ಬರಿ 200MP ಕ್ಯಾಮೆರಾ ಒಳಗೊಂಡಿದೆ.

ನಾಲ್ಕು ವಿಶಿಷ್ಟ ಬಣ್ಣಗಳು ಹಾಗೂ ಟೆಕ್ಸ್ಚರ್ ವಿನ್ಯಾಸ

ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆ ಆಗಿರುವ ಮಾಹಿತಿಯ ಪ್ರಕಾರ ಮೊಟೊರೊಲಾ ಎಡ್ಜ್‌ 70 ನಿಯೋ ನಾಲ್ಕು ಪ್ರಮುಖ ಬಣ್ಣಗಳಲ್ಲಿ ಕಾಣಿಸಿಕೊಂಡಿದೆ

  • ಪಿಂಕ್ (Textured Pattern): ಪ್ರೀಮಿಯಂ ಹಾಗೂ ವೈಬ್ರೆಂಟ್ ಲುಕ್.

  • ಡಾರ್ಕ್ ಗ್ರೀನ್ (Dark Green): ಮ್ಯಾಟ್ ಫಿನಿಶ್‌ನ ಕಾರ್ಪೊರೇಟ್ ಶೈಲಿ.

  • ಲೈಟ್ ಗ್ರೀನ್ (Light Green): ಸರಳ ಹಾಗೂ ಶಾಂತ ಸೌಂದರ್ಯ.

ಲೈಟ್ ಬ್ಲೂ (Light Blue): ಕ್ಲಾಸಿಕ್ ಶೇಡ್

ಸ್ಮಾರ್ಟ್‌ಪೋನ್‌ ವೆಗಾನ್ ಲೆದರ್ (Vegan Leather) ಅಥವಾ ಟೆಕ್ಸ್ಚರ್ಡ್ ಫಿನಿಶ್ ನೀಡಿರುವುದರಿಂದ ನೋಡುವುದಕ್ಕೆ ಹೆಚ್ಚು ಆಕರ್ಷಕವಾಗಿದೆ. ಅಲ್ಲದೇ ದೈನಂದಿನ ಬಳಕೆಯ ಉದ್ದೇಶದಿಂದ ದೀರ್ಘಕಾಲದ ವರೆಗೆ ಬಳಕೆ ಮಾಡಲು ಸಹಕಾರಿಯಾಗಿದೆ.

ಫ್ಲಾಟ್ ಡಿಸ್ಪ್ಲೇ: ಗೇಮರ್‌ಗಳಿಗೆ ಸಿಹಿ ಸುದ್ದಿ

ಮೊಟೊರೊಲಾ ಕಂಪನಿ ಈ ಹಿಂದೆ ಬಿಡುಗಡೆ ಮಾಡಿರುವ ಮಾಡೆಲ್‌ಗಳ ಪೈಕಿಎಡ್ಜ್ ನಿಯೋ ಮಾದರಿಗಳು ಅತಿಯಾದ ಬಾಗಿದ (Curved) ಪರದೆಯನ್ನು ಹೊಂದಿದ್ದವು. ಆದರೆ ಹೊಸ ಎಡ್ಜ್‌ 70 ನಿಯೋ ಚಪ್ಪಟೆ (Flatter Display ವಿನ್ಯಾಸವನ್ನು ಒಳಗೊಂಡಿದೆ.

ಫ್ಲಾಟ್ ಡಿಸ್ಪ್ಲೇಯಿಂದ ಆಗುವ ಪ್ರಮುಖ ಪ್ರಯೋಜನಗಳು:

  • ಗೇಮಿಂಗ್ ಅಥವಾ ಮೆಸೇಜಿಂಗ್ ಮಾಡುವಾಗ ಅಂಗೈ ತಾಗಿ ಆಪ್‌ಗಳು ಓಪನ್ ಆಗುವುದು ತಪ್ಪುತ್ತದೆ.

  • ವೀಡಿಯೊ ಮತ್ತು ಫೋಟೋಗಳ ಅಂಚುಗಳು ಮಸುಕಾಗುವುದಿಲ್ಲ.

  • ಕರ್ವ್ಡ್ ಡಿಸ್ಪ್ಲೇಗಳಿಗೆ ಹೋಲಿಸಿದರೆ ಫ್ಲಾಟ್ ಪರದೆಗೆ ಸ್ಕ್ರೀನ್ ಪ್ರೊಟೆಕ್ಟರ್‌ಗಳು ಸುಲಭವಾಗಿ ಹೊಂದಿಕೊಳ್ಳುತ್ತವೆ.

200MP ಕ್ಯಾಮೆರಾ ಜೊತೆಗೆ ವಿಶಿಷ್ಟ ತಂತ್ರಜ್ಞಾನ

ವಿಶೇಷವಾಗಿ ಮೊಟೊರೊಲಾ ಕಂಪೆನಿ ತನ್ನ ಹೊಸ ಮಾದರಿಯ ಸ್ಮಾರ್ಟ್‌ಪೋನ್‌ನ ಹಿಂಭಾಗದಲ್ಲಿ "200MP" ಕ್ಯಾಮರಾ ಎಂದು ಬರೆಯಲಾಗಿದೆ. ಬಜೆಟ್ ಹಾಗೂ ಮಿಡ್-ರೇಂಜ್ ವಿಭಾಗದಲ್ಲಿ 200 ಮೆಗಾಪಿಕ್ಸೆಲ್ ಸೆನ್ಸರ್ ನೀಡಲಾಗಿದೆ.

ಸ್ಮಾರ್ಟ್‌ ಪೋನ್‌ ಅತ್ಯಧಿಕ ಮೆಗಾ ಫಿಕ್ಸೆಲ್‌ ಕ್ಯಾಮೆರಾ ಅಳವಡಿಸಿರುವ ಕಾರಣದಿಂದಲೇ ಪೋಟೋಗಳ ಗುಣಮಟ್ಟವು ಇಮೇಜ್‌ ಸಿಗ್ನಲ್ ಪ್ರೊಸೆಸರ್ (ISP) ಒಳಗೊಂಡಿದೆ. ಲೆನ್ಸ್ ಗುಣಮಟ್ಟ ಮತ್ತು ಸಾಫ್ಟ್‌ವೇರ್ ಆಪ್ಟಿಮೈಸೇಶನ್ ಮೇಲೆ ಅವಲಂಭಿಸಿದೆ. ಸಣ್ಣ ಸೆನ್ಸಾರ್‌ ಕೂಡ ಹೆಚ್ಚು ತುಂಬುವುದರಿಂದ ಫೈಲ್‌ ಸೈಜ್‌ಕೂಡ ದೊಡ್ಡದಾಗುವ ಜೊತೆ ಜೊತೆಗೆ ಇಮೇಜ್‌ ನಾಯ್ಸ್‌ ಕೂಡ ಹೆಚ್ಚಾಗುವ ಸಾಧ್ಯತೆಯಿದೆ.

ಮೊಟೊರೊಲಾ ಎಡ್ಜ್ 70 ನಿಯೋ ವಿಶೇಷತೆ ಏನು ?

3 ವಿನ್ಯಾಸ : ಮೊಟೊರೊಲಾ ಸ್ಮಾರ್ಟ್‌ಪೋನ್‌ ಮುಖ್ಯವಾಗಿ 3 ಆಕರ್ಷಕ ಶೇಡ್‌ಗಳನ್ನು ಒಳಗೊಂಡಿದೆ. ಪಿಂಕ್, ಗ್ರೀನ್, ಬ್ಲೂ ನೋಡುವುದಕ್ಕೆ ಹೆಚ್ಚು ಆಕರ್ಷಕವಾಗಿದೆ.

ಪ್ರೊಸೆಸರ್ (Chipset): ಸಿಲಿಕಾನ್ ಚಿಪ್‌ಸೆಟ್ ವಿವರ ಅಸ್ಪಷ್ಟ

ಡಿಸ್ಪ್ಲೇ: ಫ್ಲಾಟರ್ ಅಂಚುಗಳುಳ್ಳ ಆಕರ್ಷಕ ಪ್ರದರ್ಶನಬ್ಯಾಟರಿ: ಸಾಮರ್ಥ್ಯ ಮತ್ತು ಚಾರ್ಜಿಂಗ್ ಸ್ಪೀಡ್

ಕ್ಯಾಮೆರಾ: 200MP ಬ್ರ್ಯಾಂಡಿಂಗ್ ಹೊಂದಿರುವ ಟ್ರಿಪಲ್ ಸೆನ್ಸರ್

RAM / Storage: ಮೆಮೊರಿ ರೂಪಾಂತರಗಳು

OS: Android 17 Beta ಪರೀಕ್ಷೆಯಲ್ಲಿ ಹೆಸರು ಪತ್ತೆ

ಮೊಟೊರೊಲಾ ಎಡ್ಜ್ 70 ನಿಯೋ ಬೆಲೆ ಎಷ್ಟು ಭಾರತೀಯ ಮಾರುಕಟ್ಟೆಯ ಅಧಿಕೃತ ಬೆಲೆ

ಭಾರತದಲ್ಲಿಆಂಡ್ರಾಯ್ಡ್ 17 ಬೀಟಾ ಪರೀಕ್ಷೆ ನಡೆದಿದೆ. ಈ ಕಾರಣದಿಂದಲೇ ಎಡ್ಜ್ 70 ನಿಯೋ ಫೋನ್ ಶೀಘ್ರದಲ್ಲೇ ಮಾರುಕಟ್ಟೆಗೆ ಲಾಂಚ್ ಆಗುವುದು ಬಹುತೇಕ ಖಚಿತವಾಗಿದೆ. ಆದರೆ ಈ ಸ್ಮಾರ್ಟ್‌ಪೋನ್‌ ಅಧಿಕೃತ ಬೆಲೆ ಇನ್ನೂ ನಿರ್ಧಾರವಾದಂತೆ ಕಾಣಿಸುತ್ತಿಲ್ಲ.

ಮೊಟೊರೊಲಾ ಎಡ್ಜ್ 70 ನಿಯೋ ಕೇವಲ ಬಣ್ಣ ಮತ್ತು ಕ್ಯಾಮೆರಾ ಬ್ರ್ಯಾಂಡಿಂಗ್‌ಗೆ ಸೀಮಿತವಾಗದೆ, ಬಲವಾದ ಪ್ರೊಸೆಸರ್ ಮತ್ತು ಸೂಕ್ತ ಬೆಲೆಯನ್ನು ಹೊಂದಿದ್ದರೆ ಮಾತ್ರ ಮಿಡ್-ರೇಂಜ್ ವಿಭಾಗದಲ್ಲಿ ಗ್ರಾಹಕರನ್ನು ಸೆಳೆಯೋದಕ್ಕೆ ಸಾಧ್ಯ. ಉಳಿದಂತೆ ಫೋನ್‌ನ ಅಧಿಕೃತ ವಿವರಗಳಿಗಾಗಿ ಮೊಟೊರೊಲಾ ನೀಡುವ ಅಧಿಕೃತ ಪ್ರಕಟಣೆಯನ್ನು ಕಾಯಬೇಕಾಗಿದೆ.