ಪವರ್‌ಫುಲ್‌ ಗೇಮಿಂಗ್ ಮೊಬೈಲ್‌ ನುಬಿಯಾ ನಿಯೋ 5 ಪ್ರೋ ಅನಾವರಣ: 50 MP ಕ್ಯಾಮೆರಾ, 80W ಫಾಸ್ಟ್‌ ಚಾರ್ಜಿಂಗ್‌ ವೈಶಿಷ್ಟ್ಯ

ನುಬಿಯಾ ತನ್ನ ಹೊಸ ಮಧ್ಯಮ ರೇಂಜ್‌ನ ಗೇಮಿಂಗ್‌ ಮೊಬೈಲ್‌ ನಿಯೋ 5 ಪ್ರೋ ಅನ್ನು ಫಿಲಿಫೈನ್ಸ್‌ ನಲ್ಲಿ ಬಿಡುಗಡೆಮಾಡಿದೆ. ಗೇಮಿಂಗ್‌ ಪ್ರಿಯರ ಈ ಮೊಬೈಲ್ ಏನೆಲ್ಲಾ ವೈಶಿಷ್ಟ್ಯ ಹೊಂದಿದೆ? ಬೆಲೆ ಎಷ್ಟು? ಇಲ್ಲಿದೆ ಓದಿ.

Nubia Neo 5 Pro: ಸ್ಮಾರ್ಟ್‌ಫೋನ್‌ಗಳ ದುನಿಯಾದಲ್ಲಿ ಗೇಮಿಂಗ್‌ ಮೊಬೈಲ್‌ ಎಂದೇ ಹೆಸರುವಾಸಿಯಾಗಿರುವ ನುಬಿಯಾ ತನ್ನ ಮಿಡ್‌ ರೇಂಜ್‌ನ ಗೇಮಿಂಗ್‌ ಮೊಬೈಲ್‌ ಒಂದನ್ನು ಅನಾವರಣಗೊಳಿಸಿದೆ. ಕಂಪನಿ ಇದನ್ನು ನುಬಿಯಾ ನಿಯೋ 5 ಪ್ರೋ ಎಂಬ ಹೆಸರಿನಿಂದ ಪರಿಚಯಿಸಿದೆ. ಮೊದಲಿನಂತೆಯೇ ಈ ಮೊಬೈಲ್ ಕೂಡಾ ಗೇಮಿಂಗ್‌ ಪ್ರಿಯರನ್ನು ಗಮನದಲ್ಲಿಟ್ಟುಕೊಂಡೇ ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಗೇಮಿಂಗ್ ಮೊಬೈಲ್‌ಗೆ ಅಗತ್ಯವಿರುವ ಹೆಚ್ಚಿನ ರಿಫ್ರೆಶ್ ದರ, ಸೂಕ್ಷ್ಮ ಸಂವೇದನೆಗೆ ಪ್ರತಿಕ್ರಿಯಿಸುವ ಟಚ್‌ ಸ್ಕ್ರೀನ್‌ ಮತ್ತು ಶಕ್ತಿಯುತ ಕೂಲಿಂಗ್‌ ವ್ಯವಸ್ಥೆ ಸೇರಿದಂತೆ ಹಲವಾರು ವೈಶಿಷ್ಟ್ಯಗಳನ್ನು ಇದು ಹೊಂದಿದೆ.

ನುಬಿಯಾ ನಿಯೋ 5 ಪ್ರೋ ವೈಶಿಷ್ಟ್ಯ

ಈಗಾಗಲೇ ತಿಳಿದಿರುವಂತೆ ನುಬಿಯಾ ನಿಯೋ 5 ಪ್ರೋ ಒಂದು ಗೇಮಿಂಗ್‌ ಮೊಬೈಲ್‌. ಹಾಗಾಗಿ ಗೇಮಿಂಗ್‌ಗೆ ಅಗತ್ಯವಿರುವ ವೈಶಿಷ್ಟ್ಯಗಳನ್ನು ಇದರಲ್ಲಿ ಕಾಣಬಹುದು. 6.8-ಇಂಚಿನ OLED ಡಿಸ್ಪ್ಲೇ, 1.5K ರೆಸಲ್ಯೂಶನ್ ಮತ್ತು 144Hz ರಿಫ್ರೆಶ್ ದರವನ್ನು ನಿಯೋ 5ಪ್ರೋ ಬೆಂಬಲಿಸುತ್ತದೆ. ಇದರಿಂದ ಗೇಮಿಂಗ್ ಮತ್ತು ವೀಡಿಯೊ ವೀಕ್ಷಣೆ ಸಾಕಷ್ಟು ಸುಗಮವಾಗಿರುತ್ತದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 7400 ಪ್ರೊಸೆಸರ್, 12GB ವರೆಗಿನ RAM ಮತ್ತು 256GB ಸಂಗ್ರಹಣೆ ಹೊಂದಿದೆ. ಹಾಗಾಗಿ ಇದು ಮಲ್ಟಿ ಟಾಸ್ಕಿಂಗ್‌ ಮತ್ತು ಗೇಮಿಂಗ್‌ಗೆ ಹೆಚ್ಚು ಸೂಕ್ತವಾಗಿದೆ.

ಇನ್ನು ಗೇಮಿಂಗ್‌ ಪ್ರಿಯರಿಗಾಗಿಯೇ ತಯಾರಿಸಿರುವ ಈ ಫೋನ್‌ ಗೇಮಿಂಗ್‌ ಸಮಯದಲ್ಲಿ ಉತ್ತಮ ನಿಯಂತ್ರಣವನ್ನು ನೀಡಲು ಇರುವ ಶೋಲ್ಡರ್‌ ಟ್ರಿಗರ್‌ಗಳನ್ನು ಹೊಂದಿದೆ. ಮ್ಯಾಜಿಕ್‌ ಟಚ್‌ 3.0 ತಂತ್ರಜ್ಞಾನವು ಸ್ಕ್ರೀನ್‌ನ ಪ್ರತಿಕ್ರಿಯೆಯನ್ನು ಸುಧಾರಿಸಿದೆ. ಅಂದರೆ ಟಚ್‌ ಸ್ಕ್ರೀನ್‌ ವೇಗವಾಗಿ ಪ್ರತಿಕ್ರಿಯಿಸುತ್ತದೆ. AI- ಆಧಾರಿತ ಆಂಟಿ-ಮಿಸ್‌ಟಚ್ ಸಿಸ್ಟಮ್ ಆಕಸ್ಮಿಕ ಸ್ಪರ್ಶಗಳನ್ನು ಕಡಿಮೆ ಮಾಡುತ್ತದೆ, ಆದರೆ Z-ಆಕ್ಸಿಸ್ ಲೀನಿಯರ್ ಮೋಟಾರ್ ಸುಧಾರಿತ ಹ್ಯಾಪ್ಟಿಕ್ ಪ್ರತಿಕ್ರಿಯೆಯನ್ನು ಒದಗಿಸುತ್ತದೆ.

ಇದನ್ನೂ ಓದಿ: ವಿವೋ X300 FE ಅಬ್ಬಬ್ಬಾ ಎಂತಹಾ ಫೀಚರ್ಸ್‌ ! 6500mAh ಬ್ಯಾಟರಿ, 50MP ಸೋನಿ IMX921 ZEISS ಕ್ಯಾಮೆರಾ

ನುಬಿಯಾ ನಿಯೋ 5 ಪ್ರೋ ಕ್ಯಾಮೆರಾ ವೈಶಿಷ್ಟ್ಯ ಮತ್ತು ಬ್ಯಾಟರಿ

ಈ ಮೊಬೈಲ್ ಕೇವಲ ಗೇಮ್‌ಗಷ್ಟೇ ಮೀಸಲಾಗಿಲ್ಲ. ಛಾಯಾಗ್ರಹಣಕ್ಕೂ ಉತ್ತಮವಾಗಿದೆ. ಇದು 50MP ಪ್ರಾಥಮಿಕ ಕ್ಯಾಮೆರಾ ಜೊತೆಗೆ 2MP ದ್ವಿತೀಯ ಸಂವೇದಕವನ್ನು ಹೊಂದಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ, 16MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ 80W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ದೊಡ್ಡದಾದ 6,210mAh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ.

ಬೆಲೆ ಮತ್ತು ಲಭ್ಯತೆ

ಬೆಲೆಯ ಬಗ್ಗೆ ಹೇಳುವುದಾದರೆ, ನುಬಿಯಾ ನಿಯೋ 5 ಪ್ರೊ ಫೋನ್‌ ಸದ್ಯ ಫಿಲಿಪೈನ್ಸ್‌ನಲ್ಲಿ ಬಿಡುಗಡೆಯಾಗಿದೆ. ಇದರ 12GB RAM + 128GB ರೂಪಾಂತರದ ಬೆಲೆ PHP 14,999 ಅಂದರೆ ಸರಿಸುಮಾರು 24 ಸಾವಿರ ರೂ. ಮತ್ತು 12GB RAM + 256GB ಮಾದರಿಯ ಬೆಲೆ PHP 17,999 ಅಂದರೆ ಸರಿಸುಮಾರು 28 ಸಾವಿರ ರೂ. ಎಂದು ಹೇಳಲಾಗಿದೆ.

Exit mobile version