ಬೈಂದೂರು: ಅನ್ನಭಾಗ್ಯ ಅಕ್ಕಿ ಅಕ್ರಮ ಮಾರಾಟ ಜಾಲಕ್ಕೆ ಬ್ರೇಕ್; 400 ಕೆಜಿ ಅಕ್ಕಿ ವಶ, ಇಬ್ಬರ ಬಂಧನ

ಬೈಂದೂರು ತಾಲೂಕಿನ ಬಿಜೂರು ಗ್ರಾಮದ ಹರಕೇರಿ ಎಂಬಲ್ಲಿ ಭರ್ಜರಿ ದಾಳಿ ನಡೆಸಿರುವ ಅಧಿಕಾರಿಗಳು ಅಕ್ರಮವಾಗಿ ದಾಸ್ತಾನು ಇರಿಸಲಾಗಿದ್ದ ಸುಮಾರು 400 ಕೆಜಿ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ.

ಬೈಂದೂರು : ಬಡವರಿಗಾಗಿ ಸರ್ಕಾರ ನೀಡುವ ಉಚಿತ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ದಂಧೆಯನ್ನು ಬೈಂದೂರು ಆಹಾರ ನಿರೀಕ್ಷಕರು ಪತ್ತೆಹಚ್ಚಿದ್ದಾರೆ.

ಬೈಂದೂರು ತಾಲೂಕಿನ ಬಿಜೂರು ಗ್ರಾಮದ ಹರಕೇರಿ ಎಂಬಲ್ಲಿ ಭರ್ಜರಿ ದಾಳಿ ನಡೆಸಿರುವ ಅಧಿಕಾರಿಗಳು ಅಕ್ರಮವಾಗಿ ದಾಸ್ತಾನು ಇರಿಸಲಾಗಿದ್ದ ಸುಮಾರು 400 ಕೆಜಿ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ.

ಬೈಂದೂರು ತಾಲೂಕಿನ ಆಹಾರ ನಿರೀಕ್ಷಕರಾದ ವಿನಯಕುಮಾರ್ ಅವರಿಗೆ ಬಿಜೂರು ಗ್ರಾಮದಲ್ಲಿ ಅಕ್ಕಿ ಅಕ್ರಮವಾಗಿ ದಾಸ್ತಾನು ಮಾಡಿರುವ ಬಗ್ಗೆ ಖಚಿತ ಮಾಹಿತಿ ದೊರೆತಿತ್ತು. ಈ ಮಾಹಿತಿಯ ಮೇರೆಗೆ ಮಾರ್ಚ್ 07 ರಂದು ಬೆಳಿಗ್ಗೆ 9:30 ಗಂಟೆಗೆ ಹರಕೇರಿ ಎಂಬಲ್ಲಿನ ಅಬ್ದುಲ್ ಮಜೀದ್ ಮತ್ತು ಐಶಾ ವಾಸೀಂ ಎಂಬುವವರ ಅಡಗುದಾಣದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಜಪ್ತಿ ಮಾಡಿದ ವಸ್ತುಗಳು:

ದಾಳಿಯ ವೇಳೆ ಆರೋಪಿಗಳು ಉಚಿತ ಅಕ್ಕಿಯನ್ನು ಸಾರ್ವಜನಿಕರಿಂದ ಕಡಿಮೆ ದರಕ್ಕೆ ಖರೀದಿಸಿ, ಬಳಿಕ ಅದನ್ನು ಹೆಚ್ಚಿನ ಲಾಭಕ್ಕೆ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿಟ್ಟಿರುವುದು ಬೆಳಕಿಗೆ ಬಂದಿದೆ.

Also Read: ಬ್ರಹ್ಮಾವರ: ನಾಗಮಂಡಲ ಸೇವೆಗೆ ಹೋಗಿದ್ದ ದಂಪತಿ ; ಮನೆ ಬೀಗ ಒಡೆದು 14.67 ಲಕ್ಷ ಮೌಲ್ಯದ ಸೊತ್ತು ಕಳವು

ವಶಪಡಿಸಿಕೊಂಡ ಅಕ್ಕಿಯನ್ನು ಸುರಕ್ಷಿತವಾಗಿ ತಲ್ಲೂರಿನ TAMPMC ಗೋಡಾಮಿಗೆ ರವಾನಿಸಲಾಗಿದೆ. ಆಹಾರ ನಿರೀಕ್ಷಕ ವಿನಯಕುಮಾರ್ ಅವರು ನೀಡಿದ ದೂರಿನ ಆಧಾರದ ಮೇಲೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಬ್ದುಲ್ ಮಜೀದ್ ಮತ್ತು ಐಶಾ ವಾಸೀಂ ವಿರುದ್ಧ ಅಪರಾಧ ಕ್ರಮಾಂಕ 23/2026 ಹಾಗೂ ಅಗತ್ಯ ವಸ್ತುಗಳ ಕಾಯ್ದೆ (Essential Commodities Act) ಕಲಂ 3, 6, 7 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಅಕ್ರಮ ಜಾಲದಲ್ಲಿ ಇನ್ನು ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

byndoor food inspector seizes illegal anna bhagya rice bijoor raid

Exit mobile version