ಉಡುಪಿ ಜಿಲ್ಲೆಯಲ್ಲಿ ಕುಸಿದ ಬಾಲ ಆಧಾರ್​ ಸಂಖ್ಯೆ : ಪೋಷಕರ ನಿರ್ಲಕ್ಷ್ಯವೇ ಇದಕ್ಕೆ ಕಾರಣ

ದೇಶದಲ್ಲಿ ಯಾವುದೇ ಸರ್ಕಾರಿ ಸೌಲಭ್ಯಗಳನ್ನು ಪಡೆಯಬೇಕು ಎಂದರೂ ಆಧಾರ್​ ಕಾರ್ಡ್​ ಹೊಂದಿರುವುದು ಕಡ್ಡಾಯ. ಈ ನಿಯಮಾವಳಿಗಳಿಂದ ಹಸುಗೂಸುಗಳು ಕೂಡ ಹೊರತಾಗಿಲ್ಲ. ಆದರೆ ವಿಪರ್ಯಾಸ ಎಂದರೆ ಬುದ್ಧಿವಂತರ ಜಿಲ್ಲೆ ಎನಿಸಿಕೊಂಡಿರುವ ಉಡುಪಿಯಲ್ಲಿಯೇ ಬಾಲ ಆಧಾರ್​ ಮಾಡಿಸುವವರ ಸಂಖ್ಯೆಯಲ್ಲಿ ಭಾರೀ ಕುಸಿತ ಕಂಡುಬಂದಿದೆ. ಉಡುಪಿ ಜಿಲ್ಲೆಯಲ್ಲಿ 6 ವರ್ಷದೊಳಗಿನ 40,233 ಮಕ್ಕಳಿದ್ದು ಈ ಪೈಕಿ ಆಧಾರ್​ ಕಾರ್ಡ್ ಹೊಂದಿರುವವರು 32, 329 ಮಂದಿ ಮಾತ್ರ ಎಂದು ತಿಳಿದುಬಂದಿದೆ.

ಬ್ರಹ್ಮಾವರದಲ್ಲಿ ಒಟ್ಟೂ 8404 ಮಕ್ಕಳ ಪೈಕಿ 1609 ಮಕ್ಕಳು ಬಾಲ ಆಧಾರ್​ ಹೊಂದಿಲ್ಲ. ಕಾರ್ಕಳದಲ್ಲಿ ಒಟ್ಟೂ 6364 ಮಕ್ಕಳಿದ್ದು ಇವರಲ್ಲಿ 1023 ಮಕ್ಕಳು ಬಾಲ ಆಧಾರ್​ ಮಾಡಿಸಿಕೊಂಡಿಲ್ಲ. ಇನ್ನುಳಿದಂತೆ ಕುಂದಾಪುರದ 15091 ಮಕ್ಕಳ ಪೈಕಿ 3248, ಉಡುಪಿಯಲ್ಲಿ 10374 ಮಕ್ಕಳ ಪೈಕಿ 2024 ಮಕ್ಕಳ ಬಳಿ ಬಾಲ ಆಧಾರ್ ಗುರುತಿನ ಚೀಟಿ ಇಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಬಿರುಗಾಳಿಗೆ ಕುಸಿದ ಕೋಳಿ ಫಾರಂ ಶೆಡ್ : 20 ಲಕ್ಷಕ್ಕೂ ಅಧಿಕ ನಷ್ಟ..

ಮಕ್ಕಳನ್ನು ಶಾಲೆಗೆ ಸೇರಿಸುವ ಸಂದರ್ಭದಲ್ಲಿ ಆಧಾರ್​ ಮಾಡಿಸಿದರಾಯ್ತು ಎಂಬ ಪೋಷಕರ ನಿರ್ಲಕ್ಷ್ಯ ಧೋರಣೆಯೇ ಇದಕ್ಕೆ ಕಾರಣ ಎನ್ನಲಾಗಿದೆ. 6 ವರ್ಷ ತುಂಬುವವರೆಗೂ ಮಕ್ಕಳಿಗೆ ಬ್ಯಾಂಕ್​ ಖಾತೆ, ಪಾಸ್​ಪೋರ್ಟ್ ಸೇರಿದಂತೆ ಇನ್ನಿತರ ಯಾವುದೇ ದಾಖಲೆಗಳನ್ನು ಮಾಡುವ ಅವಶ್ಯಕತೆ ಇಲ್ಲದ ಕಾರಣ, ಬಾಲ ಆಧಾರ್​ನಿಂದ ಯಾವುದೇ ಪ್ರಯೋಜನ ಇಲ್ಲ ಎನ್ನುವ ಪೋಷಕರ ಅಭಿಪ್ರಾಯವೇ ಆಧಾರ್​​ ಸಂಖ್ಯೆಯಲ್ಲಿ ಇಳಿಮುಖವಾಗುವುದಕ್ಕೆ ಮುಖ್ಯ ಮೂಲಾಧಾರವಾಗಿದೆ,
ಆದರೆ ಬಾಲ ಆಧಾರ್​ ಎನ್ನುವುದು ಅತ್ಯಂತ ಅಗತ್ಯವಿರುವ ದಾಖಲೆಗಳ ಪೈಕಿ ಒಂದಾಗಿದ್ದು ಐದು ವರ್ಷದೊಳಗಿನ ಶಿಶುಗಳಿಗೆ ನೀಡಲಾಗುತ್ತದೆ. ಶಿಶುವಿನಿಂದ ಹಿಡಿದು 5 ವರ್ಷದೊಳಗಿನ ಮಕ್ಕಳಿಗೆ ಯಾವುದೇ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು, ಬ್ಯಾಂಕ್​ ಖಾತೆ ತೆರೆಯಲು, ಪಾಸ್​ಪೋರ್ಟ್​ಗಳಿಗೆ ಬಾಲ ಆಧಾರ್​ ಅವಶ್ಯಕಬಾಗಿದೆ.

Exit mobile version