ದಿನ ರಾಶಿ ಭವಿಷ್ಯ ಅಕ್ಟೋಬರ್ 12, 2026 ಸೋಮವಾರ. ಇದು ಶ್ರೀ ಶಾರ್ವರಿ ನಾಮ ಸಂವತ್ಸರದ ದಕ್ಷಿಣಾಯನದ ಶರದೃತು. ಆಶ್ವಯುಜ ಮಾಸದ ಶುಕ್ಲ ಪಕ್ಷದ ದ್ವಿತೀಯಾ ತಿಥಿ . ಇಂದು ಚಂದ್ರ ತುಲಾರಾಶಿಯ ಸ್ವಾತಿ ನಕ್ಷತ್ರದಲ್ಲಿ ಸಂಚಾರ ನಡೆಸುತ್ತಿದ್ದಾನೆ. ಮೇಷರಾಶಿಯಿಂದ ಹಿಡಿದು ಮೀನರಾಶಿಯವರೆಗಿನ ದ್ವಾದಶರಾಶಿಗಳ ಮೇಲೆ ಚಂದ್ರನ ಪ್ರಭಾವ ಇರಲಿದೆ. ಹೇಗಿದೆ ಇಂದಿನ ದಿನಭವಿಷ್ಯ ತಿಳಿಯೋಣಾ ಬನ್ನಿ.
ಮೇಷ ರಾಶಿ ಭವಿಷ್ಯ (Aries)
ನೀವು ಉತ್ತಮ ಮನಸ್ಥಿತಿಯಲ್ಲಿ ಇದ್ದೀರಿ. ಯಾವುದೋ ವಿಚಾರದಲ್ಲಿ ನೀವು ಶ್ರಮ ಪಡುತ್ತಿದ್ದೀರಿ, ಅದು ನಿಮಿಗೆ ಅಂತಿಮವಾಗಿ ನೆಮ್ಮದಿ ಹಾಗೂ ತೃಪ್ತಿಯನ್ನು ನೀಡಲಿದೆ. ನಿಮ್ಮ ಆಲೋಚನೆ, ಕೌಶ್ಯಗಳನ್ನು ಬದಲಿಸಿಕೊಳ್ಳಿ. ಇಂದು ಇಡೀ ದಿನ ಶಾಂತವಾಗಿ ಇರುವುದು ಬಹಳ ಒಳಿತು. ಹೊಂದಾಣಿಕೆಯಿಂದ ಕಾರ್ಯಾನುಕೂಲ ವೃತ್ತಿ ಕ್ಷೇತ್ರದಲ್ಲಿ ಅನುಕೂಲ.
ವೃಷಭ ರಾಶಿ ಭವಿಷ್ಯ (Taurus)
ಹಣಕಾಸಿನ ಹೂಡಿಕೆ ವಿಚಾರದಲ್ಲಿ ನಿಮ್ಮ ಪಾಲಿಗೆ ಇಂದು ಅನುಕೂಲಕರವಾದ ದಿನ. ಹೊಸ ಹೂಡಿಕೆಯಿಂದ ಅಧಿಕ ಲಾಭವೂ ಸಿಗಲಿದೆ. ಕಲಾಸಕ್ತರಿಗೆ ಹೆಚ್ಚಿನ ಅವಕಾಶ ಸಿಗಲಿದೆ. ಸಂಗಾತಿಯೊಂದಿಗೆ ಸುಂದರ ಕ್ಷಣಗಳನ್ನು ಕಳೆಯುತ್ತೀರಿ. ಸ್ನೇಹಿತರ ಸಹಕಾರದೊಂದಿಗೆ ಬಹಳ ಕೆಲಸ ಕಾರ್ಯಗಳು ಸುಲಭವಾಗಿ ಪೂರ್ಣಗೊಳ್ಳಲಿದೆ. ಪ್ರಯಾಣದ ವೇಳೆಯಲ್ಲಿ ಎಚ್ಚರಿಕೆ ಅತ್ಯಗತ್ಯ.
ಮಿಥುನ ರಾಶಿ ಭವಿಷ್ಯ (Gemini)
ಚಾಣಾಕ್ಷತನದಿಂದ ಕೈಗೊಂಡ ನಿರ್ಧಾರಗಳು ಭವಿಷ್ಯತ್ತಿನಲ್ಲಿ ಉತ್ತಮ ಫಲ ಕೊಡಲಿದೆ. ವಿದ್ಯಾರ್ಥಿಗಳು ಓದಿನಲ್ಲಿ ಏಕಾಗ್ರತೆಯನ್ನು ರೂಢಿಸಿಕೊಳ್ಳಬೇಕು. ಸ್ನೇಹಿತರ ಜೊತೆಗಿನ ಸಣ್ಣ ಪ್ರವಾಸದ ಯೋಗವಿದೆ. ಕೌಟುಂಬಿಕವಾಗಿ ಆಹ್ಲಾದಕರ ವಾತಾವರಣ ಇರಲಿದೆ. ನಿಮ್ಮ ಮಾತಿನಿಂದ ಎಲ್ಲರ ಮನಸ್ಸನ್ನು ಗೆಲ್ಲುತ್ತಿರಿ. ಹೊಸ ಯೋಜನೆಗಳಿಗೆ ಚಾಲನೆ ನೀಡುತ್ತಿದೆ.
ಕರ್ಕಾಟಕ ರಾಶಿ ಭವಿಷ್ಯ (Cancer)
ಹೊಸ ಮನೆ ಖರೀದಿಯ ಯೋಗವಿದೆ. ಮನೆಯಲ್ಲಿ ಶುಭ ಕಾರ್ಯದ ಕುರಿತು ಚರ್ಚೆ ನಡೆಸಲಿದ್ದೀರಿ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಆರ್ಥಿಕವಾಗಿ ನಿಮ್ಮ ಪರಿಸ್ಥಿತಿ ಸ್ಥಿರವಾಗಿ ಇರಲಿದೆ. ಕೆಲಸದ ಸ್ಥಳದಲಲಿ ಸಹೋದ್ಯೋಗಿಗಳ ಸಂಪೂರ್ಣ ಬೆಂಬಲ ಸಿಗಲಿದೆ. ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ.
ಸಿಂಹ ರಾಶಿ ಭವಿಷ್ಯ (Leo)
ನಾಯಕತ್ವದ ಗುಣಗಳು ಮೆಚ್ಚುಗೆಗೆ ಪಾತ್ರವಾಗಲಿದೆ. ಸಾಮಾಜಿಕವಾಗಿ ನಿಮ್ಮ ಮೇಲಿನ ಗೌರವ, ಪ್ರತಿಷ್ಠೆ ಹೆಚ್ಚಾಗಲಿದೆ. ವ್ಯಾಪಾರ ಕ್ಷೇತ್ರದಲ್ಲಿ ಹೊಸ ಒಪ್ಪಂದಗಳು ಯಶಸ್ವಿಯಾಗಿ ಕೈಗೂಡಲಿದೆ. ಆರೋಗ್ಯವೂ ಉತ್ತಮವಾಗಿ ಇರಲಿದೆ. ಅಲ್ಲದೇ ಪೂರ್ಣ ಉತ್ಸಾಹದಿಂದ ಕೆಲಸ ಮಾಡುತ್ತೀರಿ.
ಕನ್ಯಾ ರಾಶಿ ಭವಿಷ್ಯ (Virgo)
ಆರ್ಥಿಕವಾಗಿ ನೀವು ಇಂದು ಹೆಚ್ಚು ಜಾಗರೂಕರಾಗಿ ಇರಬೇಕು. ಅನಗತ್ಯ ಖರ್ಚುಗಳಿಗೆ ಕಠಿ ಕಡಿವಾಣ ಹಾಕಿ. ಮಾತಿನ ಮೇಲೆ ಸಂಪೂರ್ಣವಾದ ಹಿಡಿತ ಇರಲಿ. ಒಂದೊಮ್ಮೆ ಮಾತಿನ ಮೇಲೆ ಹಿಡಿತ ಇಲ್ಲದೇ ಇದ್ದರೆ, ಅನವಶ್ಯಕ್ಕೆ ಗಲಭೆಗೆ ಆಸ್ಪದವಾಗಲಿದೆ. ಕಚೇರಿಯಲ್ಲಿ ನಿಮ್ಮ ಮೇಲೆ ಜವಾಬ್ದಾರಿಗಳು ಹೆಚ್ಚಲಿದೆ. ದೊಡ್ಡ ಸಮಸ್ಯೆಗಳನ್ನು ನೀವು ಸುಲಭವಾಗಿ ಪರಿಹರಿಸಿಕೊಳ್ಳುತ್ತೀರಿ.
ತುಲಾ ರಾಶಿ ಭವಿಷ್ಯ (Libra)
ಚಂದ್ರನು ನಿಮ್ಮ ರಾಶಿಯಲ್ಲಿಯೇ ಸಂಚಾರ ನಡೆಸುತ್ತಾ ಇರುವುದರಿಂದ ನಿಮ್ಮ ಪಾಲಿಗೆ ಇಂದು ವಿಶೇಷವಾಗಿರುವ ದಿನ. ಮನಸ್ಸಿನಲ್ಲಿ ಇರುವ ಸಕಾರಾತ್ಮಕ ಯೋಚನೆ, ಹೊಸ ಆಲೋಚನೆಗಳು ಮೂಡುತ್ತದೆ. ವ್ಯಾಪಾರ ಹಾಗೂ ವೃತ್ತಿ ಜೀವನದಲ್ಲಿ ಹೊಸ ಸಾಧನೆ ಮಾಡಲಿದ್ದೀರಿ. ಆರೋಗ್ಯದ ವಿಚಾರದಲ್ಲಿ ಅತ್ಯಂತ ಸಂತೋಷದಿಂದ ಇರಲಿದ್ದೀರಿ. ನಿಮ್ಮ ಸೃಜನಾತ್ಮಕ ಕೆಲಸಗಳಲ್ಲಿ ಯಶಸ್ಸು ಪಡೆಯುತ್ತೀರಿ.
ವೃಶ್ಚಿಕ ರಾಶಿ ಭವಿಷ್ಯ (Scorpio)
ದೈವಿಕತೆಯ ಕುರಿತು ನಿಮಗೆ ಒಲವು ಹೆಚ್ಚಾಗಲಿದೆ. ಆಧ್ಯಾತ್ಮಿಕ ಚಿಂತನೆಗಳು ನಿಮಗೆ ಖುಷಿಯನ್ನು ಕೊಡಲಿದೆ. ಖರ್ಚು - ವೆಚ್ಚ ಹೆಚ್ಚುವುದರಿಂದ ಆರ್ಥಿಕ ನಿರ್ಧಾರ ಕೈಗೊಳ್ಳುವ ಮುನ್ನ ಹಿರಿಯ ಸಲಹೆ ಪಡೆಯಿರಿ. ರಹಸ್ಯ ಶತ್ರುಗಳ ಬಗ್ಗೆ ನೀವು ಹೆಚ್ಚಾಗಿ ಎಚ್ಚರಿಕೆಯಿಂದ ಇರಬೇಕು. ಯೋಗ, ಧ್ಯಾನ ಮಾಡಿದ್ರೆ ಮನಸ್ಸಿಗೆ ಅಪಾರ ಶಾಂತಿ ಸಿಗಲಿದೆ.
ಆಧ್ಯಾತ್ಮಿಕ ಚಿಂತನೆಗಳು ಮತ್ತು ದೈವಿಕ ಒಲವು
ಧನಸ್ಸು ರಾಶಿ ಭವಿಷ್ಯ (Sagittarius)
ಸ್ನೇಹಿತರಿಂದ ಆರ್ಥಿಕ ಸಹಾಯ ಬೆಂಬಲ ಸಿಗಲಿದೆ. ಸಾಮಾಜಿಕ ಕಾರ್ಯದಲ್ಲಿ ಉತ್ಸಾಹದಿಂದ ಭಾಗವಹಿಸುತ್ತೀರಿ. ಕುಟುಂಬದವರೊಂದಿಗೆ ಸಂತೋಷದ ಕ್ಷಣಗಳನ್ನು ಪಡೆಯುತ್ತೀರಿ. ದೀರ್ಘಕಾಲದ ಅನಾರೋಗ್ಯ ಸಮಸ್ಯೆಗಳಿಂದ ನಿಮಗೆ ಮುಕ್ತಿ ಸಿಗಲಿದೆ. ಉದ್ಯೋಗದಲ್ಲಿ ಬಡ್ತಿ, ಬೇರೆ ಸ್ಥಳಕ್ಕೆ ವರ್ಗಾವಣೆ ಆಗುವ ಸಾಧ್ಯತೆಯಿದೆ.
ಮಕರ ರಾಶಿ ಭವಿಷ್ಯ (Capricorn)
ಕಠಿಣ ಪರಿಶ್ರಮಕ್ಕೆ ಇಂದು ತಕ್ಕ ಪ್ರತಿಫಲ ಸಿಗಲಿದೆ. ವೃತ್ತಿ ಕ್ಷೇತ್ರದಲ್ಲಿ ಹೆಚ್ಚಿನ ಮನ್ನಣೆ ಸಿಗಲಿದೆ. ಹಿರಿಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ. ಹೊಸ ಉದ್ಯೋಗ ಅಥವಾ ವ್ಯವಹಾರವನ್ನು ಆರಂಭಿಸುವುದಕ್ಕೆ ಇಂದು ಅತ್ಯಂತ ಪ್ರಶಸ್ತವಾಗಿರುವ ದಿನ. ನಿಮ್ಮ ಆರ್ಥಿಕ ಸ್ಥಿತಿ ಹಿಂದಿಗಿಂತಲೂ ಉತ್ತಮವಾಗಿ ಇರಲಿದೆ. ಕೌಟುಂಬಿಕವಾಘಿ ಸಂತೋಷದ ವಾತಾವರಣ ಇರಲಿದೆ.
ಕುಂಭ ರಾಶಿ ಭವಿಷ್ಯ (Aquarius)
ದೂರದ ಊರಿನಿಂದ ಶುಭ ಸುದ್ದಿಯನ್ನು ಕೇಳುತ್ತೀರಿ. ಧಾರ್ಮಿಕ ಕಾರ್ಯಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತೀರಿ. ಉನ್ನತ ಶಿಕ್ಷಣ ಪಡೆಯಲು ಪ್ರಯತ್ನ ನಡೆಸುತ್ತಿರುವವರಿಗೆ ಹೆಚ್ಚಿನ ಯಶಸ್ಸು ಸಿಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ನೀವು ಭಾಗಿಯಾಗುತ್ತೀರಿ. ಕೌಟುಂಬಿಕ ಜೀವನದಲ್ಲಿ ನೆಮ್ಮದಿ ನೆಲೆಸುತ್ತದೆ. ನಿಮ್ಮ ಗುರಿಯನ್ನು ಮುಟ್ಟುವುದಕ್ಕೆ ಬೇಕಾಗಿ, ಹೊಸ ಹೊಸ ಮಾರ್ಗಗಳು ಗೋಚರಕ್ಕೆ ಬರಲಿದೆ.
ಮೀನ ರಾಶಿ ಭವಿಷ್ಯ (Pisces)
ಆರೋಗ್ಯದ ವಿಚಾರದಲ್ಲಿ ಹೆಚ್ಚು ಎಚ್ಚರವಾಗಿ ಇರಿ. ವ್ಯವಹಾರದ ಸಂದರ್ಭದಲ್ಲಿ ಹೊಸ ಸವಾಲುಗಳು ನಿಮಗೆ ಎದುರಾಗಲಿದೆ. ಯಾವುದೇ ಕಾರಣಕ್ಕೂ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ವಿದ್ಯಾರ್ಥಿಗಳು ಏಕಾಗ್ರತೆಯನ್ನು ಕೈಗೊಳ್ಳಿ. ಹೊಂದಾಣಿಕೆಯಿಂದ ನಿಮಗೆ ಕಾರ್ಯಾನುಕೂಲವಿದೆ.