Horoscope Today in Kannada : ದಿನಭವಿಷ್ಯ ಅಕ್ಟೋಬರ್ 08, 2026 ಬುಧಾದಿತ್ಯ ಯೋಗ ಯಾವ ರಾಶಿಗೆ ವರ
ದಿನಭವಿಷ್ಯ ಅಕ್ಟೋಬರ್ 08, 2026 ಗುರುವಾರ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಪರೂಪ ಹಾಗೂ ಶಕ್ತಿಶಾಲಿಯಾಗಿರುವ ದಿನ.
By Arun Gundmi | ಅರುಣ್ ಗುಂಡ್ಮಿ · Editor-in-Chief
3 min read
ದಿನಭವಿಷ್ಯ ಅಕ್ಟೋಬರ್ 08, 2026 ಗುರುವಾರ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಪರೂಪ ಹಾಗೂ ಶಕ್ತಿಶಾಲಿಯಾಗಿರುವ ದಿನ. ಪಾರ್ಥಿವ ಸಂವತ್ಸರದ, ದಕ್ಷಿಣಾಯನ ಶರದ್ ಋತುವಿನ ಆಶ್ವಿಜ ಕೃಷ್ಣ ಪಕ್ಷದ ತ್ರಯೋದಶಿ ತಿಥಿ (ಸಂಜೆ 05:12ರ ವರೆಗೆ, ನಂತರ ಚತುರ್ದಶಿ) ಹಾಗೂ ಪೂರ್ವಾಫಲ್ಗುಣಿ నಕ್ಷತ್ರದ (ರಾತ್ರಿ 08:45ರ ವರೆಗೆ, ನಂತರ ಉತ್ತರಾಫಲ್ಗುಣಿ). ಇಂದು ಗ್ರಹಮಂಡಲದಲ್ಲಿ ಬಾರೀ ಬದಲಾವಣೆ ಕಂಡು ಬರಲಿದೆ. ಕನ್ಯಾರಾಶಿಯಲ್ಲಿ ಸೂರ್ಯ, ಸಿಂಹರಾಶಿಯಲ್ಲಿ ಚಂದ್ರನ ಸಂಚಾರ ಇರಲಿದೆ. ಕರ್ಕಾಟಕ ರಾಶಿಯಲ್ಲಿ ಉಚ್ಚಸ್ಥಾನದಲ್ಲಿರುವ ಗುರು ಹಾಗೂ ನೀಚ ಸ್ಥಿತಿಯಲ್ಲಿರುವ ಮಂಗಳ ಒಟ್ಟಿಗೆ ಸೇರಿ ಗುರು ಮಂಗಳ ಯೋಗ ಸೃಷ್ಟಿಸುತ್ತಿದ್ದು, ತುಲಾರಾಶಿಯಲ್ಲಿ ಬುಧ ಮತ್ತು ವಕ್ರ ಶುಕ್ರರ ಬುಧಾದಿತ್ಯ ಯೋಗ ರಾಶಿಗಳಿಗೆ ಶುಭವನ್ನು ತರಲಿದೆ. ಮೇಷರಾಶಿಯಿಂದ ಹಿಡಿದು ಮೀನರಾಶಿಯ ವರೆಗೆ ಎಲ್ಲಾ 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.
ಮೇಷ ರಾಶಿ (Aries)
ಆತುರದಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳಬೇಡಿ. ಕೆಲಸದ ಸ್ಥಳದಲ್ಲಿ ತಾಳ್ಮೆ, ಸಂಯಮ ಅಗತ್ಯ. ಧನ ಸಂಪಾದನೆಯ ಮಾರ್ಗಗಳು ಕಾಣಿಸಿದ್ರೆ ಹೂಡಿಕೆಗೆ ಮೊದಲು ಯೋಚಿಸಿ. ಕುಟುಂಬ ಸದಸ್ಯರ ಜೊತೆಗೆ ಮನಸ್ತಾಪಗಳು ಶಮನವಾಗಲಿದೆ. ಆತುರದ ನಿರ್ಧಾರಗಳು ಸಮಸ್ಯೆಯನ್ನು ತರಲಿದೆ. ಆರೋಗ್ಯದ ಬಗ್ಗೆ ಜಾಗೃತೆವಹಿಸುವುದು ಉತ್ತಮ. ಅನಗತ್ಯ ಖರ್ಚುಗಳಿಗೆ ಬ್ರೇಕ್ ಹಾಕಿ, ಆರ್ಥಿಕ ಸ್ಥಿರತೆ ಕಂಡು ಬರಲಿದೆ.
ವೃಷಭ ರಾಶಿ (Taurus)
ಕಚೇರಿ ಕೆಲಸಗಳಲ್ಲಿ ಇಂದು ಮೇಲಾಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ರಿಯಲ್ ಎಸ್ಟೇಟ್ ಅಥವಾ ಆಸ್ತಿ ವಿಚಾರದಲ್ಲಿ ಲಾಭದಾಯಕವಾದ ದಿನ. ಕುಟುಂಬದಲ್ಲಿ ಶುಭ ಸಮಾರಂಭಗಳು ನಡೆಯಲಿವೆ. ಹಳೆಯ ಹೂಡಿಕೆಗಳು ಉತ್ತಮ ಆದಾಯವನ್ನು ತರಲಿದೆ. ನಿಮ್ಮ ಸಂಗಾತಿಯ ಬೆಂಬಲ ಸಿಗುವುದರಿಂದ ನಿಮ್ಮ ಆತ್ಮವಿಶ್ವಾಸ ವೃದ್ದಿಸಲಿದೆ. ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ಮನಸಿಗೆ ನೆಮ್ಮದಿ ಸಿಗಲಿದೆ.
ಮಿಥುನ ರಾಶಿ (Gemini)
ಆರ್ಥಿಕ ಸ್ಥಿತಿ ಚೇತರಿಸಿಕೊಳ್ಳಲಿದೆ. ದೂರ ಪ್ರಯಾಣವನ್ನು ಮುಂದೂಡುವುದು ಒಳಿತು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ದತೆ ನಡೆಸುವವರಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ನಿಮ್ಮ ಪಾಲಿಗೆ ಇಂದು ಮಿಶ್ರದಿನ. ಕಚೇರಿಯಲ್ಲಿ ಸಹೋದ್ಯೋಗಿಗಳ ಸಹಕಾರದಿಂದ ಕೆಲಸ ಕಾರ್ಯಗಳು ಸುಗಮ. ಮಕ್ಕಳ ಶಿಕ್ಷಣ ವೃತ್ತಿ ವಿಚಾರದಲ್ಲಿ ನಿಮಗೆ ಶುಭ ಸುದ್ದಿಗಳು ಸಿಗಲಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲ.
ಕರ್ಕಾಟಕ ರಾಶಿ (Cancer)
ಉದ್ಯೋಗದಲ್ಲಿ ಹಳೆಯ ಕಾರ್ಯಾನುಭವ ಸಂಕಷ್ಟದಿಂದ ಹೊರ ಬರಲು ಸಹಕಾರಿಯಾಗಿದೆ. ಹಳೆಯ ಕಹಿಘಟನೆಗಳನ್ನು ನೆನೆದು ಚಿಂತಿಸುವ ಬದಲು, ಭವಿಷ್ಯದ ಗುರಿಯತ್ತ ಹೆಜ್ಜೆ ಇರಿಸಿ. ಜಮೀನು ಅಥವಾ ಆಸ್ತಿ ಖರೀದಿ ವಿಚಾರದಲ್ಲಿ ಆತುರದ ನಿರ್ಧಾರ ಬೇಡ. ಆರೋಗ್ಯದ ವಿಚಾರದಲ್ಲಿ ವ್ಯತ್ಯಾಸ ಕಂಡು ಬರಲಿದೆ. ಸರಿಯಾದ ಸಮಯದಲ್ಲಿ ವಿಶ್ರಾಂತಿ, ಆಹಾರ ಸೇವನೆಗೆ ಆದ್ಯತೆ ನೀಡಿ.
ಸಿಂಹ ರಾಶಿ (Leo)
ನಾಯಕತ್ವ ಗುಣ, ಮಾತಿನ ಶೈಲಿ ಉದ್ಯೋಗದಲ್ಲಿ ಹೊಸ ಅವಕಾಶಗಳು ತೆರೆದು ಇಡಲಿದೆ. ವ್ಯಾಪಾರಸ್ಥರಿಗೆ ದೊಡ್ಡಮಟ್ಟದ ಒಪ್ಪಂದ ಕೈಗೂಡುವ ಸಾಧ್ಯತೆಯಿದೆ. ಯಾವುದೇ ಹೂಡಿಕೆಗೆ ಮೊದಲು ಅನುಭವಿ ವ್ಯಕ್ತಿಗಳಿಂದ ಜಾಣತನದ ಸಲಹೆ ಪಡೆಯುವುದು ಅತ್ಯಂತ ಶ್ರೇಯಸ್ಕರ. ಪ್ರೀತಿ ವಿಚಾರದಲ್ಲಿ ಸಣ್ಣ ಪುಟ್ಟ ಮನಸ್ಥಾನ ಉಂಟಾದ್ರು, ಸಮಸ್ಯೆ ಪರಿಹಾರ ಆಗಲಿದೆ. ಹಣಕಾಸಿನ ವಿಚಾರದಲ್ಲಿ ಸ್ಥಿರತೆ ಕಂಡು ಬರಲಿದೆ.
ಕನ್ಯಾ ರಾಶಿ (Virgo)
ಆರ್ಥಿಕ ಸ್ಥಿತಿ ಸ್ಥಿರವಾಗಿ ಇರಲಿದೆ. ಧ್ಯಾನ ಮತ್ತು ಯೋಗದ ಕಡೆಗೆ ಒಲವು ಹೆಚ್ಚಲಿದೆ. ಇದರಿಂದಾಗಿ ಮನಸಿನ ಆತಂಕಗಳು ದೂರವಾಗಲಿದೆ. ಕೌಟುಂಬಿಕವಾಗಿ ಶಾಂತಿ, ಪ್ರೀತಿಯ ವಾತಾವರಣ ನೆಲೆಸಲಿದೆ. ನಿಮ್ಮ ಮೇಲೆ ಇರುವ ಸಾಲದ ಹೊರೆ ಕಡಿಮೆ ಆಗುವ ಸೂಚನೆ ಸಿಗಲಿದೆ. ಧ್ಯಾನ ಮತ್ತು ಯೋಗದ ಕಡೆಗೆ ನಿಮ್ಮ ಮನಸ್ಸು ವಾಲಲಿದೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರಶಂಸೆ ಸಿಗಲಿದೆ.
ತುಲಾ ರಾಶಿ (Libra)
ಕೆಲಸದ ಒತ್ತಡ ಹೆಚ್ಚುವ ಸಾಧ್ಯತೆಯಿದೆ. ಒಂದೇ ಬಾರಿಗೆ ಹಲವು ಕಾರ್ಯಗಳು ಎದುರಾಗದಂತೆ ಕೆಲಸವನ್ನು ನಿರ್ವಹಿಸಿ. ಹೆಚ್ಚುವರಿ ಆದಾಯ ಮತ್ತು ಕಮಿಷನ್ ರೂಪದಲ್ಲಿ ಹಣ ಹರಿದು ಬರಲಿದೆ. ಇದರಿಂದಾಗಿ ಆರ್ಥಿಕವಾಗಿ ನಿಮಗೆ ನೆಮ್ಮದಿ ಸಿಗಲಿದೆ. ಸಂಗಾತಿಯ ಜೊತೆಗಿನ ಭಾವನಾತ್ಮಕ ಬಂಧನ ಇನ್ನಷ್ಟು ಗಟ್ಟಿಯಾಗಲಿದೆ. ಸಮಾಜಿಕವಾಗಿ ನಿಮ್ಮ ಗೌರವ, ಪ್ರಭಾವ ಹೆಚ್ಚಲಿದೆ. ಆರೋಗ್ಯದ ವಿಚಾರದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯವಹಿಸುವುದು ಬೇಡ.
ವೃಶ್ಚಿಕ ರಾಶಿ (Scorpio)
ಕೌಟುಂಬಿಕವಾಗಿ ಹಳೆಯ ತಪ್ಪು ಗ್ರಹಿಕೆ ಮರೆಯಾಗಿ ಸಾಮರಸ್ಯ ನೆಲೆಸಲಿದೆ. ಶೇರು ಮಾರುಕಟ್ಟೆಯಲ್ಲಿನ ಹೂಡಿಕೆಯ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಆತುರತೆ ಮಾಡಬೇಡಿ. ಸ್ನೇಹಿತರ ಜೊತೆಗೆ ಸಮಯ ಕಳೆಯಲು ಅವಕಾಶ ಸಿಗಲಿದ್ದು, ಮನಸಿಗೆ ಉಲ್ಲಾಸ ಲಭಿಸಲಿದೆ. ದೂರದ ಬಂಧುಗಳ ಭೇಟಿಯಿಂದಾಗಿ ಮನೆಯಲ್ಲಿ ಹಬ್ಬದ ವಾತಾವರಣ ಇರಲಿದೆ.
ಧನುಸ್ಸು ರಾಶಿ (Sagittarius)
ಹಣಕಾಸಿನ ವಿಚಾರದಲ್ಲಿ ಜಾಗೃತೆ ಇರಲಿ. ಅನಗತ್ಯ ಸಾಲ ನೀಡುವ ಸಾಹಸಕ್ಕೆ ಕೈ ಹಾಕಲೇ ಬೇಡಿ. ವೃತ್ತಿರಂಗದಲ್ಲಿ ಅನಗತ್ಯ ಸಾಲ ನೀಡುವುದು ಬೇಡ. ಸರಿಯಾಗಿ ಪರಿಶೀಲನೆ ನಡೆಸದೇ ಯಾವುದೇ ಕಾರಣಕ್ಕೂ ಯಾವುದೇ ನಿರ್ಧಾರವನ್ನು ಕೈಗೊಳ್ಳಬೇಡಿ. ಸಣ್ಣ ಪ್ರಯಾಣಗಳು ನಿಮಗೆ ಕಾರ್ಯಸಾಧನೆಗೆ ಸಹಕಾರಿಯಾಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ನೆಮ್ಮದಿ ಸಿಗಲಿದೆ.
ಮಕರ ರಾಶಿ (Capricorn)
ಹೊಸ ಜವಾಬ್ದಾರಿಗಳು ನಿಮ್ಮ ಹೆಗಲೇರಲಿದೆ. ಉದ್ಯೋಗ ಕ್ಷೇತ್ರದಲ್ಲಿ ಸುದೀರ್ಘವಾಗಿರುವ ಶ್ರಮಕ್ಕೆ ತಕ್ಕ ಬಡ್ತಿ ಸಿಗಲಿದೆ. ಹಳೆಯ ಹೂಡಿಕೆ, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿನ ಲಾಭ ಸಿಗಲಿದೆ. ವ್ಯವಹಾರಕ್ಕೆ ಸಂಬಂಧಿಸಿದ ದೂರ ಪ್ರಯಾಣ ನಿಮಗೆ ಯಶಸ್ಸನ್ನು ತಂದು ಕೊಡಲಿದೆ. ಪ್ರೇಮಿಗಳಿಗೆ ಮನೆಯಲ್ಲಿ ಬೆಂಬಲ ಸಿಗಲಿದ್ದು, ಆರೋಗ್ಯವೂ ಕೂಡ ಉತ್ತಮವಾಗಿ ಇರಲಿದೆ. ಮಾನಸಿಕವಾಗಿ ಇಂದು ಸಾಕಷ್ಟು ಖುಷಿಯಿಂದ ಇರುವ ದಿನವಾಗಿದೆ.
ಕುಂಭ ರಾಶಿ (Aquarius)
ಆದಾಯದ ಹೊಸ ಮೂಲಗಳು ಗೋಚರಕ್ಕೆ ಬರಲಿದೆ. ಹಳೆಯ ಸಾಲವನ್ನು ತೀರಿಸಲು ಸುಗಮ ದಾರಿ ತಿಳಿಯಲಿದೆ. ಹೊಸ ಪಾಲುದಾರಿಕೆ, ಒಪ್ಪಂದಗಳಿಗೆ ಅತ್ಯುತ್ತಮ ಅವಕಾಶ. ವಿದ್ಯಾರ್ಥಿಗಳಿಗೆ ಅಧ್ಯಯನದಿಂದ ಏಕಾಗ್ರತೆ ಹೆಚ್ಚುತ್ತದೆ. ಬಂಧು ಮಿತ್ರರ ಆಗಮನ ಮನೆಯಲ್ಲಿ ಸಂತೋಷ ವಾತಾವರಣವನ್ನು ಸೃಷ್ಟಿಸುತ್ತದೆ. ಕಚೇರಿ ಕೆಲಸಗಳಲ್ಲಿ ಉತ್ತಮ ಮನ್ನಣೆ ನಿಮ್ಮದಾಗಲಿದೆ.
ಮೀನ ರಾಶಿ (Pisces)
ವೃತ್ತಿಪರವಾಗಿರುವ ಯೋಜನೆಗಳಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳಿ. ಧೈರ್ಯಗೆಡದೆ ಆತ್ಮವಿಶ್ವಾಸದಿಂದ ಮುನ್ನೆಡೆಯನ್ನು ಪಡೆಯುವಿರಿ. ಹಣಕಾಸಿನ ವಹಿವಾಟು ನಡೆಸುವಾಗ ಯಾವುದೇ ಕಾರಣಕ್ಕೂ ಆತುರದ ನಿರ್ಧಾರವನ್ನು ಕೈಗೊಳ್ಳಬೇಡಿ. ಕುಟುಂಬವು ನಿಮ್ಮ ಪರವಾಗಿ ಇರಲಿದೆ. ಆಧ್ಯಾತ್ಮಿಕ ಚಿಂತನೆಗಳು ನಿಮ್ಮ ಮನಸಿಕ ಆತಂಕವನ್ನು ದೂರ ಮಾಡಲಿದೆ. ಶತ್ರುಗಳು ಹಾಘೂ ಪ್ರತಿಸ್ಪರ್ಧಿಗಳಿಂದ ಸಣ್ಣಪುಟ್ಟ ಸಮಸ್ಯೆ ಎದುರಾಗುವ ಸಾಧ್ಯತೆ ಇರುವುದರಿಂದ ಎಚ್ಚರವಾಗಿರುವುದು ಒಳಿತು.
Topics
ಸಂಬಂಧಿತ ಸುದ್ದಿಗಳು
astrology
ಮನೆಯಲ್ಲಿ, ಮನಸ್ಸಿನಲ್ಲಿ ನೆಮ್ಮದಿ ತರಬೇಕಾ.. ಹಾಗಾದರೆ ಕರುಂಗಲಿ ಮಾಲೆ ಧರಿಸುವ ಮುನ್ನ ಇದನ್ನು ತಿಳಿಯಿರಿ
astrology
Horscope Today in Kannada : ದಿನಭವಿಷ್ಯ ಅಕ್ಟೋಬರ್ 07, 2026, ಚಂದ್ರನ ಪ್ರಭಾವ ಯಾವರಾಶಿಗೆ ಲಾಭ
astrology
Horoscope Today in Kannada : ದಿನಭವಿಷ್ಯ ಅಕ್ಟೋಬರ್ 06 2026 : 12 ರಾಶಿಗಳ ಸಂಪೂರ್ಣ ರಾಶಿ ಭವಿಷ್ಯ
astrology

