Kannada News Next

astrology

Horoscope Today in Kannada : ದಿನಭವಿಷ್ಯ 14 ಅಕ್ಟೋಬರ್ 2026 : ಆಯುಷ್ಮಾನ್‌ ಯೋಗ ಯಾವ ರಾಶಿಗೆ ಶುಭ

ದಿನಭವಿಷ್ಯ 14 ಅಕ್ಟೋಬರ್ 2026 ಬುಧವಾರ. ಆಶ್ವಯುಜ ಮಾಸ ಶುಕ್ಲ ಪಕ್ಷ ಚತುರ್ಥಿಯ ಶುಭದಿನ. ದ್ವಾದಶ ರಾಶಿಗಳ ಮೇಲೆ ಅಕ್ಟೋಬರ್ 15ರ ಬೆಳಗಿನ ಜಾವ 1:13ರವರೆಗೆ ಅನುರಾಧಾ ನಕ್ಷತ್ರದ ಪ್ರಭಾವ ಇರಲಿದೆ.

By Arun Gundmi | ಅರುಣ್‌ ಗುಂಡ್ಮಿ Editor-in-Chief
horoscope today in kannada 14 october 2026

ದಿನಭವಿಷ್ಯ 14 ಅಕ್ಟೋಬರ್ 2026 ಬುಧವಾರ. ಆಶ್ವಯುಜ ಮಾಸ ಶುಕ್ಲ ಪಕ್ಷ ಚತುರ್ಥಿಯ ಶುಭದಿನ. ದ್ವಾದಶ ರಾಶಿಗಳ ಮೇಲೆ ಅಕ್ಟೋಬರ್ 15ರ ಬೆಳಗಿನ ಜಾವ 1:13ರವರೆಗೆ ಅನುರಾಧಾ ನಕ್ಷತ್ರದ ಪ್ರಭಾವ ಇರಲಿದೆ. ಇಂದು ಆಯುಷ್ಮಾನ್‌, ಸರ್ವಾರ್ಥ ಸಿದ್ದಿಯೋಗ, ಅಮೃತ ಸಿದ್ದಿ ಯೋಗ, ರವಿ ಯೋಗ ಇರಲಿದೆ.

ಮೇಷ ರಾಶಿ ಭವಿಷ್ಯ (Aries)

ಕೆಲಸ ಕಾರ್ಯಗಳಲ್ಲಿ ಒತ್ತಡ ಹೆಚ್ಚಾಗುವ ಸಾಧ್ಯತೆಯಿದೆ. ಯಾವುದೇ ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ಯೋಚಿಸಿ. ಉದ್ಯೋಗದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಹಣಕಾಸಿನ ವಿಚಾರದಲ್ಲಿ ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ. ಕುಟುಂಬಸ್ಥರ ಜೊತೆಗೆ ಸಮಯವನ್ನು ಕಳೆಯಿರಿ. ಆರೋಗ್ಯ ವಿಚಾರದಲ್ಲಿ ಎಚ್ಚರಿಕೆ ಅತೀ ಅಗತ್ಯ.

ವೃಷಭ ರಾಶಿ ಭವಿಷ್ಯ (Taurus)

ನಿಮಗೆ ಇಂದು ಹೊಸ ಅವಕಾಶಗಳು ದೊರೆಯುವ ಸಾಧ್ಯತೆಯಿದೆ. ಉದ್ಯೋಗ ಕ್ಷೇತ್ರದಲ್ಲಿ ಮೇಲಾಧಿಕಾರಿಗಳ ಸಹಕಾರ ನಿಮಗೆ ಸಿಗಲಿದೆ. ಹಳೆಯ ಹಣಕಾಸಿನ ಸಮಸ್ಯೆಗಳು ಇಂದು ಪರಿಹಾರವನ್ನು ಕಾಣಲಿದೆ. ಹೂಡಿಕೆ ಮಾಡುವ ಮುನ್ನ ನೀವು ಪರಿಶೀಲನೆ ನಡೆಸುವುದು ಅತೀ ಅಗತ್ಯ. ಆರೋಗ್ಯದ ವಿಚಾರದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಬೇಡ.

ಮಿಥುನ ರಾಶಿ ಭವಿಷ್ಯ (Gemini)

ಸ್ನೇಹಿತರು ಮತ್ತು ಸಹೋದ್ಯೋಗಿಗಳು ನಿಮಗೆ ಇಂದು ನೆರವು ನೀಡುತ್ತಾರೆ. ಹೊಸ ಕೆಲಸಗಳನ್ನು ಆರಂಭಿಸುವ ಮೊದಲು ಸಾಧಕ, ಬಾಧಕಗಳ ಪರಿಶೀಲನೆ ನಡೆಸಿ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ವಹಿಸಿ. ಕುಟುಂಬಸ್ಥರ ಜೊತೆಗೆ ಮುಕ್ತವಾಗಿ ಮಾತನಾಡಿ. ಹೊಂದಾಣಿಕೆಯಿಂದ ನಿಮಗೆ ಗೆಲುವು ಇದೆ ಅನ್ನೋದನ್ನು ನೆನಪಿಡಿ.

ಕರ್ಕಾಟಕ ರಾಶಿ ಭವಿಷ್ಯ (Cancer)

ಕುಟುಂಬಸ್ಥರ ಬೆಂಬಲ ಸಿಗುವುದರಿಂದ ಮನಸಿಗೆ ನೆಮ್ಮದಿ ಸಿಗಲಿದೆ. ಹೊಸ ಜವಾಬ್ದಾರಿಗಳನ್ನು ನೀವು ಸಮರ್ಥವಾಗಿ ನಿಭಾಯಿಸಲಿದ್ದೀರಿ. ವ್ಯಾಪಾರದಲ್ಲಿ ಯಾವುದೇ ನಿರ್ಧಾರಗಳನ್ನು ಎಚ್ಚರಿಕೆಯಿಂದ ಕೈಗೊಳ್ಳಿ. ಹಣಕಾಸಿನ ವಿಚಾರದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಿ. ವಿಶ್ರಾಂತಿಯ ಕಡೆಗೆ ಗಮನಕೊಡಿ.

ಸಿಂಹ ರಾಶಿ ಭವಿಷ್ಯ (Leo)

ನೀವಿಂದು ಆತ್ಮವಿಶ್ವಾಸದಿಂದ ಕೆಲಸ ಕಾರ್ಯಗಳನ್ನು ಮಾಡಿದರೆ ಉತ್ತಮ ಫಲಗಳನ್ನು ಪಡೆಯುತ್ತೀರಿ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಉತ್ತಮ ಅವಕಾಶ ದೊರಕಲಿದೆ. ಇತರರ ಜೊತೆಗೆ ಮಾತನಾಡುವಾಗ ಅಹಂಕಾರವನ್ನು ತೋರಿಸಬೇಡಿ. ಸಹಕಾರ ಮನೋಭಾವದಿಂದ ನೀವು ಯಶಸ್ಸು ಪಡೆಯುತ್ತೀರಿ.

ಕನ್ಯಾ ರಾಶಿ ಭವಿಷ್ಯ (Virgo)

ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕಾರ್ಯವೈಖರಿಗೆ ಮೆಚ್ಚುಗೆ ಸಿಗಲಿದೆ. ಹಣಕಾಸಿನ ವ್ಯವಹಾರದಲ್ಲಿ ಲೆಕ್ಕಾಚಾರಕ್ಕೆ ಹೆಚ್ಚಿನ ಗಮನ ಹರಿಸಿ. ಹೊಸ ಜವಾಬ್ದಾರಿಗಳು ಎದುರಾದರೂ ಗಾಬರಿಯಾಗಬೇಡಿ. ಕುಟುಂಬಸ್ಥರ ಸಲಹೆಯನ್ನು ಮುಕ್ತವಾಗಿ ಪರಿಗಣಿಸಿ. ಆರೋಗ್ಯದಲ್ಲಿ ಸುಧಾರಣೆ ಆಗಲಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲವಿದೆ ಅನ್ನೋದು ನಿಮಗೆ ನೆನಪಿರಲಿ.

ತುಲಾ ರಾಶಿ ಭವಿಷ್ಯ (Libra)

ವ್ಯವಹಾರ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಜೊತೆಗೆ ಒಗ್ಗಟ್ಟಿನಿಂದ ಕೆಲಸ ಮಾಡಿದ್ರೆ ಉತ್ತಮ ಫಲಗಳನ್ನು ಪಡೆಯುತ್ತೀರಿ. ವ್ಯಾಪಾರದಲ್ಲಿ ಹೊಸ ಒಪ್ಪಂದಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ. ಹಣವನ್ನು ಖರ್ಚು ಮಾಡುವ ವೇಳೆಯಲ್ಲಿ ನಿಮ್ಮ ಅಗತ್ಯಗಳಿಗೆ ಗಮನ ಹರಿಸಿ. ಯಾವುದೇ ಸಮಸ್ಯೆಯನ್ನು ಶಾಂತವಾಗಿಯೇ ಪರಿಹಾರ ಮಾಡಿ. ಸಂಬಂಧಗಳನ್ನು ಸಾಮರಸ್ಯದಿಂದ ಕಾಪಾಡಿ.

ವೃಶ್ಚಿಕ ರಾಶಿ ಭವಿಷ್ಯ (Scorpio)

ಹಲವು ಕಾಲದಿಂದಲೂ ಬಾಕಿ ಉಳಿದಿರುವ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ಮನಸ್ಸಿನಲ್ಲಿ ಹೊಸ ಆಲೋಚನೆಗಳು ಮೂಡಲಿದೆ. ಉದ್ಯೋಗದಲ್ಲಿ ತಾಳ್ಮೆಯಿಂದ ನಡೆದುಕೊಂಡರೆ ಅನುಕೂಲವಾಗಲಿದೆ. ಹಣಕಾಸಿನ ವ್ಯವಹಾರದಲ್ಲಿ ದಾಖಲೆಗಳನ್ನು ಪರಿಶೀಲನೆ ನಡೆಸಿ. ಕುಟುಂಬಸ್ಥರ ಭಾವನೆಗಳಿಗೆ ಬೆಲೆ ಕೊಡಿ. ಆತುರದ ನಿರ್ಧಾರವನ್ನು ತಪ್ಪಿಸಿ. ನಮಸ್ಸಿನ ನೆಮ್ಮದಿಗೆ ಸಮಯವನ್ನು ನೀಡಿ.

ಧನಸ್ಸುರಾಶಿ ಭವಿಷ್ಯ (Sagittarius)

ವ್ಯವಹಾರ ಹಾಗೂ ಕೆಲಸದ ಸ್ಥಳದಲ್ಲಿ ಹೊಸ ಅವಕಾಶಗಳು ತೆರೆದುಕೊಳ್ಳಲಿದೆ. ನಿಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಹಣಕಾಸಿನ ವಿಚಾರದಲ್ಲಿ ಆದಾಯ ಮತ್ತು ಖರ್ಚಿನಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಿ. ಸ್ನೇಹಿತರ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತೀರಿ. ದೂರ ಪ್ರಯಾಣದ ಯೋಚನೆ ಇದ್ದರೆ ಅದಕ್ಕೆ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಿ. ಆರೋಗ್ಯದ ಕಡೆಗೆ ಗಮನ ಕೊಡಿ.

ಮಕರ ರಾಶಿ ಭವಿಷ್ಯ (Capricorn)

ಉದ್ಯೋಗ ಕ್ಷೇತ್ರದಲ್ಲಿ ಬಾಕಿ ಉಳಿದಿರುವ ಕೆಲಸಗಳನ್ನು ಮುಗಿಸಲು ನಿಮಗೆ ಅನುಕೂಲಕರವಾಗಲಿದೆ. ಹಣಕಾಸಿನ ವಿಚಾರದಲ್ಲಿ ಉಳಿತಾಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿ. ಕುಟುಂಬದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೀರಿ. ವ್ಯಾಪಾರಸ್ಥರ ಪಾಲಿಗೆ ಇಂದು ಅನುಕೂಲರವಾಗಿರುವ ದಿನ. ಸಹನೆ, ಶಿಸ್ತಿನಿಂದ ಮುಂದುವರಿದರೆ ಉತ್ತಮ ಫಲಿತಾಂಶ ಪಡೆಯುವ ಸಾಧ್ಯತೆಯಿದೆ.

ಕುಂಭ ರಾಶಿ ಭವಿಷ್ಯ (Aquarius)

ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಹೊಂದಾಣಿಕೆ ಅತೀ ಅಗತ್ಯ. ಸ್ನೇಹಿತರಿಂದ ಮುಕ್ತ ಮಾಹಿತಿ ದೊರೆಯಲಿದೆ. ಹಣಕಾಸಿನ ವಿಚಾರದಲ್ಲಿ ಅಪರಿಚಿತರ ಮಾತಿಗೆ ಮರಳಾಗಬೇಡಿ. ಕುಟುಂಬದವರೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುತ್ತೀರಿ. ಆರೋಗ್ಯದ ದೃಷ್ಟಿಯಿಂದ ವ್ಯಾಯಾಮದ ಕಡೆಗೆ ಗಮನ ಹರಿಸಿ.

ಮೀನ ರಾಶಿ ಭವಿಷ್ಯ ( Pisces)

ಹೊಸ ಜವಾಬ್ದಾರಿಗಳನ್ನು ಪಡೆಯುವ ಅವಕಾಶ ನಿಮ್ಮದಾಗಲಿದೆ. ಸೃಜನಶೀಲ ಕೆಲಸಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಲಿದೆ. ಕುಟುಂಸ್ಥರ ಪ್ರೀತಿ, ಬೆಂಬಲ ಮನಸಿಗೆ ನೆಮ್ಮದಿಯನ್ನು ತರಲಿದೆ. ಬಹುಕಾಲದ ಆಸೆಯೊಂದು ಈಡೇರಿಸಲು ಯತ್ನಿಸುವವರಿಗೆ ಹೊಸ ದಾರಿಗಳು ಗೋಚರಕ್ಕೆ ಬರಲಿದೆ. ಆತ್ಮವಿಶ್ವಾದ ಜೊತೆಗೆ ವಾಸ್ತವಿಕತೆಯ ಕಡೆಗೆ ಗಮನ ಹರಿಸಿ. ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರಿಕೆ ಅತೀ ಅಗತ್ಯ.