Horoscope Today in Kannada : ದಿನಭವಿಷ್ಯ - ವಿಶಾಖ ನಕ್ಷತ್ರದ ಪ್ರಭಾವ ಯಾವ ರಾಶಿಗಿದೆ
ದಿನಭವಿಷ್ಯ ಅಕ್ಟೋಬರ್ 13, 2026 ಮಂಗಳವಾರ ಆಶ್ವಯುಜ ಮಾಸದ ಶುಕ್ಲ ಪಕ್ಷ ತೃತೀಯಾ ತಿಥಿ ರಾತ್ರಿ 11:28 ರವರೆಗೆ ಇರಲಿದೆ.
By Arun Gundmi | ಅರುಣ್ ಗುಂಡ್ಮಿ · Editor-in-Chief
2 min read
ದಿನಭವಿಷ್ಯ ಅಕ್ಟೋಬರ್ 13, 2026 ಮಂಗಳವಾರ ಆಶ್ವಯುಜ ಮಾಸದ ಶುಕ್ಲ ಪಕ್ಷ ತೃತೀಯಾ ತಿಥಿ ರಾತ್ರಿ 11:28 ರವರೆಗೆ ಇರಲಿದೆ. ಇಂದು ಇಡೀ ದಿನದಿಂದ ಹಿಡಿದು ಮರುದಿನ ಬೆಳಗಿನ ಜಾವದವರೆಗೆ ವಿಶಾಖ ನಕ್ಷತ್ರದ ಸಂಯೋಜನೆ ಇರಲಿದೆ. ತುಲಾರಾಶಿಯಲ್ಲಿರುವ ಚಂದ್ರನು ವೃಶ್ಚಿಕರಾಶಿಗೆ ಪ್ರವೇಶಿಸಲಿದ್ದಾನೆ. ಹಾಗಾದ್ರೆ ಮೇಷರಾಶಿಯಿಂದ ಮೀನರಾಶಿವರೆಗಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ.
ಮೇಷ ರಾಶಿ ಭವಿಷ್ಯ (Aries)
ವ್ಯವಹಾರ ಹಾಗೂ ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರಲಿದೆ. ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿಯು ಉತ್ತಮವಾಗಿ ಇರಲಿದೆ. ಕೌಟುಂಬಿಕವಾಗಿ ನೆಮ್ಮದಿ ಇರಲಿದ್ದು, ಆರೋಗ್ಯದ ಬಗ್ಗೆ ಕಾಳಜಿ ಇರಲಿ.
ವೃಷಭ ರಾಶಿ ಭವಿಷ್ಯ (Taurus)
ಮೇಲಾಧಿಕಾರಿಗಳಿಂದ ಪ್ರಶಂಸೆ ಸಿಗುತ್ತದೆ. ಆರ್ಥಿಕ ವಿಚಾರದಲ್ಲಿ ಜಾಗರೂಕರಾಗಿ ಇರಿ. ಅನಗತ್ಯ ಖರ್ಚುಗಳಿಗೆ ನಿಯಂತ್ರಣ ಹೇರಿ. ವ್ಯಾಪಾರಸ್ಥರಿಗೆ ಲಾಭದಾಯಕವಾಗಿರುವ ದಿನ. ಸಂಗಾತಿಯಿಂದ ಬೆಂಬಲ ಸಿಗಲಿದೆ. ಮಾನಸಿಕವಾಗಿ ನೆಮ್ಮದಿಯ ದಿನ.
ಮಿಥುನ ರಾಶಿ ಭವಿಷ್ಯ (Gemini)
ಕೆಲಸ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಹೊಸ ಹೂಡಿಕೆಗೆ ಮುನ್ನ ಹಿರಿಯರ ಸಲಹೆಯನ್ನು ಪಡೆಯಿರಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಏಕಾಗ್ರತೆ ಅತ್ಯಗತ್ಯ. ಪ್ರಯಾಣದ ವೇಳೆಯಲ್ಲಿ ನೀವು ಹೆಚ್ಚು ಎಚ್ಚರಿಕೆಯನ್ನು ವಹಿಸಿ. ಸ್ನೇಹಿತರ ಜೊತೆಗೆ ಭಿನ್ನಾಭಿಪ್ರಾಯಗಳು ಬಗೆ ಹರಿಯಲಿದೆ.
ಕರ್ಕಾಟಕ ರಾಶಿ ಭವಿಷ್ಯ (Cancer)
ಕೌಟುಂಬಿಕವಾಗಿ ಸಂತೋಷದ ವಾತಾವರಣ ಇರಲಿದೆ. ಆಸ್ತಿ, ವಾಹನ ಖರೀದಿಯ ಯೋಚನೆ ಇದ್ದರೆ ಹೆಚ್ಚು ಅನುಕೂಲಕರವಾಗಿರಲಿದೆ. ಕಚೇರಿಯಲ್ಲಿ ಸಹೋದ್ಯೋಗಿಗಳ ಬೆಂಬಲ ಸಿಗುತ್ತದೆ. ಆರೋಗ್ಯದ ವಿಚಾರದಲ್ಲಿ ದೊಡ್ಡ ಸಮಸ್ಯೆಗಳು ಎದುರಾಗುವುದಿಲ್ಲ. ಹೊರಗಿನ ಆಹಾರ ಸೇವೆಯನ್ನು ಸಾಧ್ಯವಾದಷ್ಟು ತಪ್ಪಿಸಿ.
ಸಿಂಹ ರಾಶಿ ಭವಿಷ್ಯ (Leo)
ಸಿಟ್ಟು, ಕೋಪದ ಮೇಲೆ ಹಿಡಿತ ಇಟ್ಟುಕೊಳ್ಳಿ. ವ್ಯವಹಾರಿಕ ಕ್ಷೇತ್ರದಲ್ಲಿ ಸಣ್ಣಪುಟ್ಟ ಅಡೆತಡೆಗಳು ಎದುರಾದರೂ ಧೈರ್ಯದಿಂದ ಅವುಗಳನ್ನು ಜಯಿಸಿ. ಆರ್ಥಿಕವಾಗಿ ಎಚ್ಚರಿಕೆಯ ಹೆಜ್ಜೆ ಇಡಿ. ದೇವತಾ ಕಾರ್ಯಗಳಲ್ಲಿ ಭಾಗಿಯಾಗುವಿರಿ.
ಕನ್ಯಾ ರಾಶಿ ಭವಿಷ್ಯ (Virgo)
ಆರ್ಥಿಕವಾಗಿ ನಿಮ್ಮ ಪಾಲಿಗೆ ಉತ್ತಮವಾಗಿರುವ ದಿನ. ದೂರದ ಊರಿನಿಂದ ಶುಭ ಸುದ್ದಿಯೊಂದು ಸಿಗುವ ಸಾಧ್ಯತೆಯಿದೆ. ಕುಟುಂಬಸ್ಥರ ಆರೋಗ್ಯದ ಕಡೆ ಗಮನಹರಿಸಿ. ಸಾಮಾಜಿಕವಾಗಿ ನಿಮ್ಮ ವರ್ಚಸ್ಸು ಹೆಚ್ಚಲಿದೆ. ಮಾತಿನಲ್ಲಿ ಹಿಡಿತ ಇರಲಿ.
ತುಲಾ ರಾಶಿ ಭವಿಷ್ಯ (Libra)
ನಿಮ್ಮ ಪಾಲಿಗೆ ಇಂದು ಹರ್ಷದಾಯಕವಾಗಿರುವ ದಿನ. ವ್ಯಾಪಾರದಲ್ಲಿ ನಿಮ್ಮ ನಿರೀಕ್ಷೆಗೂ ಮೀರಿದ ಲಾಭ ಸಿಗಲಿದೆ. ಹಳೆಯ ಸ್ನೇಹಿತರನ್ನು ಇಂದು ಭೇಟಿಯಾಗುವ ಯೋಗ ಇದೆ. ಕಲಾವಿದರಿಗೆ, ಮಾಧ್ಯಮ ಕ್ಷೇತ್ರದಲ್ಲಿ ಇರುವವರಿಗೆ ಉತ್ತಮ ಅವಕಾಶಗಳು ಹುಡುಕಿ ಬರಲಿದೆ. ಪ್ರೀತಿ, ವೈವಾಹಿಕ ಜೀವನದಲ್ಲಿ ಮಧುರತೆ ಇರಲಿದೆ.
ವೃಶ್ಚಿಕ ರಾಶಿ ಭವಿಷ್ಯ (Scorpio)
ಮಾನಸಿಕ ಒತ್ತಡ ದೂರವಾಗುತ್ತದೆ. ಇದರಿಂದ ನಿಮ್ಮ ಉತ್ಸಾಹ ಹೆಚ್ಚಾಗುತ್ತದೆ. ನ್ಯಾಯಾಲಯದ ಕೆಲಸ ಕಾರ್ಯಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ದೂರ ಪ್ರಯಾಣ ನಿಮ್ಮ ವರ್ಚಸ್ಸನ್ನು ಹೆಚ್ಚಿಸುತ್ತದೆ. ವ್ಯವಹಾರಿಕವಾಗಿ ಹೊಸ ಯೋಜನೆಗಳನ್ನು ಜಾರಿಗೆ ತರಲು ಅನುಕೂಲರಾಗಿದೆ. ಆರೋಗ್ಯವೂ ವೃದ್ದಿಸುತ್ತದೆ.
ಧನಸ್ಸು ರಾಶಿ ಭವಿಷ್ಯ (Sagittarius)
ಸಾಮಾಜಿಕ ಸೇವೆಯಲ್ಲಿ, ಧಾರ್ಮಿಕ ಕಾರ್ಯಗಳ ಬಗ್ಗೆ ಒಲವು ಹೆಚ್ಚಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಲಿದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗಲಿದ್ದು, ವಿದ್ಯಾಭ್ಯಾಸದ ವಿಚಾರದಲ್ಲಿ ಎಚ್ಚರಿಕೆ ವಹಿಸಿ. ಸಂಗಾತಿಯ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸಿ.
ಮಕರ ರಾಶಿ ಭವಿಷ್ಯ (Capricorn)
ಹೊಸ ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲಕರವಾಗಲಿದೆ. ಕೌಟುಂಬಿಕವಾಗಿ ಆರ್ಥಿಕ ವಿಚಾರದಲ್ಲಿ ಗೊಂದಲಗಳು ಬಗೆ ಹರಿಯಲಿದೆ. ಸಾಲದ ಬಾಧೆಯಿಂದ ನಿಮಗೆ ಮುಕ್ತಿ ಸಿಗಲಿದೆ. ಸಹೋದ್ಯೋಗಿಗಳ ಜೊತೆಗೆ ಹೊಂದಾಣಿಕೆ ಅತೀ ಅಗತ್ಯ.
ಕುಂಭ ರಾಶಿ ಭವಿಷ್ಯ (Aquarius)
ನೀವು ಇಂದು ಹೆಚ್ಚು ತಾಳ್ಮೆಯಿಂದ ಇರುವುದು ಅವಶ್ಯಕ. ಕೆಲವೊಂದು ವಿಚಾರದಲ್ಲಿ ನಿಮಗೆ ನಿರೀಕ್ಷಿತ ಫಲ ಸಿಗದೆ ನಿರಾಶೆಯಾಗಬಹುದು, ಆದರೆ ಯಾವುದಕ್ಕೂ ನೀವು ಧೃತಿಗೆಡಬೇಡಿ. ಹಿರಿಯರ ಆರೋಗ್ಯದ ಕಡೆ ಗಮನವಿರಲಿ. ಹೊಸ ಉದ್ಯೋಗ ಹಾಗೂ ಹೂಡಿಕೆಗಳ ಬಗ್ಗೆ ಯೋಚಿಸುತ್ತಿದ್ದರೆ ಆತುರದ ನಿರ್ಧಾರ ಕೈಗೊಳ್ಳಬೇಡಿ.
ಮೀನ ರಾಶಿ ಭವಿಷ್ಯ (Pisces)
ಇಡೀ ದಿನವು ಅತ್ಯಂತ ಉತ್ಸಾಹದಿಂದ ಕೂಡಿರಲಿದೆ. ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಯೋಗವಿದೆ. ಅವಿವಾಹಿತರಿಗೆ ಶೀಘ್ರದಲ್ಲಿಯೇ ಉತ್ತಮ ಸಂಬಂಧ ಕೂಡಿ ಬರುತ್ತದೆ. ಆರೋಗ್ಯವು ಅತ್ಯಂತ ಚೈತನ್ಯದಿಂದ ಕೂಡಿರಲಿದೆ.
Topics
ಸಂಬಂಧಿತ ಸುದ್ದಿಗಳು
astrology
Horoscope Today in Kannada : ದಿನ ರಾಶಿ ಭವಿಷ್ಯ ಅಕ್ಟೋಬರ್ 12, 2026 : ತುಲಾರಾಶಿಯಲ್ಲಿ ಚಂದ್ರನ ಸಂಚಾರ, ಯಾವ ರಾಶಿಗೆ ಶುಭ
astrology
Horoscope Today in Kannada : ದಿನಭವಿಷ್ಯ ಅಕ್ಟೋಬರ್ 10, 2026 - ಮಹಾಲಯ ಅಮಾವಾಸ್ಯೆ ದಿನದ ರಾಶಿ ಭವಿಷ್ಯ
astrology
ದಿನ ಭವಿಷ್ಯ ಅಕ್ಟೋಬರ್ 09 2026: ಇಂದಿನ ಪಂಚಾಂಗ, ನಕ್ಷತ್ರ ಫಲ ಹಾಗೂ ದ್ವಾದಶ ರಾಶಿಗಳ ಫಲಾಫಲಗಳು
astrology

