Kannada News Next

astrology

ಪಿತೃ ಪಕ್ಷದ ಸಮಯದಲ್ಲಿ ಈ ವಸ್ತುಗಳನ್ನು ಮನೆಯಲ್ಲಿ ಇಡಬೇಡಿ ! ಇಲ್ಲವಾದರೆ ದಾರಿದ್ರ್ಯ ಗ್ಯಾರಂಟಿ !

ಹಿಂದೂ ಪಂಚಾಂಗದ ಪ್ರಕಾರ ಈ ವರ್ಷ ಪಿತೃ ಪಕ್ಷವು ಸೆಪ್ಟೆಂಬರ್‌ 26 ರಿಂದ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಪಾಲಿಸಬೇಕಾದ ವಾಸ್ತು ನಿಯಮಗಳು ಇಲ್ಲಿವೆ.

By Archana V Bhat | ಅರ್ಚನಾ ವಿ ಭಟ್‌
Photo: AI

ಹಿಂದೂ ಧರ್ಮದಲ್ಲಿ ಹಬ್ಬ, ಆಚರಣೆಗಳನ್ನು ಬಹಳ ಕಟ್ಟುನಿಟ್ಟಾಗಿ ಆಚರಿಸಲಾಗುತ್ತದೆ. ಅವುಗಳಲ್ಲಿ ಪಿತೃ ಪಕ್ಷವೂ ಒಂದು. 16 ದಿನಗಳ ಪಿತೃ ಪಕ್ಷವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಕುಟುಂಬದ ಪೂರ್ವಜರನ್ನು ಸ್ಮರಿಸಲಾಗುತ್ತದೆ. ಹಿಂದೂ ಪಂಚಾಂಗದ ಪ್ರಕಾರ ಈ ವರ್ಷ ಪಿತೃ ಪಕ್ಷವು ಸೆಪ್ಟೆಂಬರ್‌ 26 ರಿಂದ ಪ್ರಾರಂಭವಾಗುತ್ತದೆ. ಈ ಅವಧಿಯಲ್ಲಿ ಶ್ರಾದ್ಧ, ತರ್ಪಣ ಮತ್ತು ಪಿಂಡ ದಾನವನ್ನು ಮಾಡಲಾಗುತ್ತದೆ. ಧಾರ್ಮಿಕ ನಂಬಿಕೆ ಮತ್ತು ವಾಸ್ತು ಶಾಸ್ತ್ರದ ಪ್ರಕಾರ ಈ ಪಿತೃ ಪಕ್ಷದ ಅವಧಿಯಲ್ಲಿ ಕೆಲವು ಚಟುವಟಿಕೆಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಪೂರ್ವಜರ ಆಶೀರ್ವಾದ ಪಡೆಯಲು ಹಾಗೂ ಮನೆಯಲ್ಲಿನ ಸಕಾರಾತ್ಮಕ ಶಕ್ತಿಯನ್ನು ಉಳಿಸಿಕೊಳ್ಳಲು ವಾಸ್ತು ಶಾಸ್ತ್ರದಲ್ಲಿ ಕೆಲವು ಉಪಾಯಗಳನ್ನು ಸೂಚಿಸಿದ್ದಾರೆ. ಅವುಗಳನ್ನು ಪಾಲಿಸುವುದರಿಂದ ಆರ್ಥಿಕ ಸಂಕಷ್ಟ ಎದುರಾಗುವುದಿಲ್ಲ ಎಂದು ಹೇಳಲಾಗಿದೆ. ಆ ಉಪಾಯಗಳು ಯಾವುವು ಎಂದು ನೋಡೋಣ.

ಪಿತೃ ಪಕ್ಷ ವಾಸ್ತು ನಿಯಮಗಳು

ಪಿತೃ ಪಕ್ಷ ಪ್ರಾರಂಭವಾಗುವ ಮೊದಲು ಮನೆಯಲ್ಲಿರುವ ಅಶುಭ ವಸ್ತುಗಳನ್ನು ತೆಗೆದುಹಾಕಬೇಕು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಮನೆಯಲ್ಲಿರುವ ಅಶುಭ ವಸ್ತುಗಳಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸುತ್ತದೆ. ಇದು ಕುಟುಂಬ ಸದಸ್ಯರ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಹಾಗಾಗಿ ಪಿತೃ ಪಕ್ಷದ ಸಮಯದಲ್ಲಿ ಈ ಕೆಳಗಿನ ವಸ್ತುಗಳನ್ನು ಮನೆಯಿಂದ ಹೊರಹಾಕಿ.

ಮುರಿದ ವಿಗ್ರಹಗಳು : ವಾಸ್ತು ಪ್ರಕಾರ ಮುರಿದ ವಿಗ್ರಹಗಳನ್ನು ದೇವರ ಮನೆಯಲ್ಲಿ ಇಡುವುದು ಶುಭವಲ್ಲ. ಇದರಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ನೀವು ಪೂಜಿಸುವ ದೇವರ ಕೃಪೆ ನಿಮಗೆ ಸಿಗುವುದಿಲ್ಲ. ಆದ್ದರಿಂದ ಮುರಿದ ಅಥವಾ ಭಿನ್ನವಾದ ವಿಗ್ರಹಗಳನ್ನು ನದಿಯಲ್ಲಿ ಅಥವಾ ಅರಳಿ ಮರದ ಬಳಿ ಹಾಕಿ. ನಂತರ ದೇವರ ಮನೆಯಲ್ಲಿ ಹೊಸ ವಿಗ್ರಹವನ್ನು ಸ್ಥಾಪಿಸಿ.

ಹಾಳಾದ ಗಡಿಯಾರ : ಮನೆಯಲ್ಲಿರುವ ಗಡಿಯಾರ ಪ್ರಗತಿಯ ಸಂಕೇತ. ಇದು ನಿಂತರೆ ಅಥವಾ ಮುರಿದು ಹೋಗಿದ್ದರೆ ಪ್ರಗತಿಗೆ ಅಡ್ಡಿಪಡಿಸುವ ಅಥವಾ ಉತ್ತಮ ಸಮಯವಲ್ಲದರ ಸಂಕೇತವಾಗಿದೆ. ವೃತ್ತಿ, ವ್ಯವಹಾರ, ಆರ್ಥಿಕ ಪ್ರಗತಿಯಲ್ಲಿ ಹಿನ್ನಡೆಯುಂಟಾಗಬಹುದು. ಈ ಕಾರಣದಿಂದಲೇ ಮನೆಯಲ್ಲಿ ಹಾಳಾದ ಅಥವಾ ಮುರಿದ ಗಡಿಯಾರವಿದ್ದರೆ ಅದನ್ನು ತಕ್ಷಣ ತೆಗೆದುಹಾಕಿ.

ಒಡೆದ ಪಾತ್ರಗಳು : ಮನೆಯಲ್ಲಿ ಒಡೆದ ಅಥವಾ ಬಿರುಕು ಬಿಟ್ಟ ಪಾತ್ರೆಗಳನ್ನು ಇಟ್ಟುಕೊಳ್ಳುವುದು ಅಶುಭವೆಂದು ಪರಿಗಣಿಸಲಾಗಿದೆ. ವಾಸ್ತು ಪ್ರಕಾರ ಅಂತಹ ಪಾತ್ರಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ಅಂತಹ ಪಾತ್ರೆಗಳು ನಿಮ್ಮ ಮನೆಯಲ್ಲಿದ್ದರೆ ಅವುಗಳನ್ನು ಗುಜರಿಗೆ ಹಾಕಿ.

ಹಳೆ ಬಟ್ಟೆ, ಚಪ್ಪಲಿ ಮತ್ತು ಶೂ : ಮನೆಯಲ್ಲಿ ಹರಿದ ಚಪ್ಪಲಿ, ಶೂ ಮತ್ತು ಹಳೆಯ ಬಟ್ಟೆಯಿದ್ದರೆ ಅದನ್ನು ತಕ್ಷಣ ವಿಲೇವಾರಿ ಮಾಡಿ. ಅವು ಕುಟುಂಬ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಮತ್ತು ಸಮಸ್ಯೆಗೆ ಕಾರಣವಾಗಬಹುದು.