ರಾಧಾಷ್ಟಮಿ 2026: ರಾಧೆ ಇಲ್ಲದೆ ಕೃಷ್ಣನ ಪೂಜೆ ಅಪೂರ್ಣ.. ಇಲ್ಲಿದೆ ರಹಸ್ಯ

ಹಿಂದೂ ಧರ್ಮದಲ್ಲಿ ಕೃಷ್ಣ ಜನ್ಮಾಷ್ಟಮಿಗೆ ಎಷ್ಟು ಮಹತ್ವವಿದೆಯೋ, ಅದೇ ರೀತಿ ಶ್ರೀಕೃಷ್ಣನ ಪ್ರಾಣಪ್ರಿಯೆಯಾದ ರಾಧಾರಾಣಿಯ ಜನ್ಮದಿನವಾದ ‘ರಾಧಾಷ್ಟಮಿ’ ಹಬ್ಬಕ್ಕೂ ಅತ್ಯಂತ ವಿಶೇಷ ಸ್ಥಾನವಿದೆ.

By Meghana Pranuth | ಮೇಘನಾ ಪ್ರಣೂತ್‌

1 min read

WhatsAppPost
RADHA KRISHNA
RADHA KRISHNA

ಹಿಂದೂ ಧರ್ಮದಲ್ಲಿ ಕೃಷ್ಣ ಜನ್ಮಾಷ್ಟಮಿಗೆ ಎಷ್ಟು ಮಹತ್ವವಿದೆಯೋ, ಅದೇ ರೀತಿ ಶ್ರೀಕೃಷ್ಣನ ಪ್ರಾಣಪ್ರಿಯೆಯಾದ ರಾಧಾರಾಣಿಯ ಜನ್ಮದಿನವಾದ ‘ರಾಧಾಷ್ಟಮಿ’ ಹಬ್ಬಕ್ಕೂ ಅತ್ಯಂತ ವಿಶೇಷ ಸ್ಥಾನವಿದೆ. ಭಾದ್ರಪದ ಮಾಸದ ಶುಕ್ಲ ಪಕ್ಷದ ಅಷ್ಟಮಿ ತಿಥಿಯಂದು ಆಚರಿಸಲಾಗುವ ರಾಧಾಷ್ಟಮಿಯು ಭಕ್ತರಿಗೆ ಅತ್ಯಂತ ಪವಿತ್ರವಾದ ದಿನವಾಗಿದೆ. ಈ ದಿನ ರಾಧಾರಾಣಿಯನ್ನು ಆರಾಧಿಸುವುದರಿಂದ ಶ್ರೀಕೃಷ್ಣನ ಕೃಪೆಯೂ ಲಭಿಸುತ್ತದೆ ಎಂಬುದು ಧಾರ್ಮಿಕ ನಂಬಿಕೆ.

ರಾಧಾಷ್ಟಮಿ ಪೂಜಾ ಮುಹೂರ್ತ ಮತ್ತು ದಿನಾಂಕ

ಭಾದ್ರಪದ ಶುಕ್ಲ ಪಕ್ಷದ ಅಷ್ಟಮಿ ತಿಥಿ (ಸೆಪ್ಟೆಂಬರ್ 2026) ರಾಧಾ ರಾಣಿಯ ಆರಾಧನೆಗೆ ಬ್ರಾಹ್ಮ ಮುಹೂರ್ತ ಹಾಗೂ ಅಭಿಜಿತ್ ಮುಹೂರ್ತಗಳು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನ ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ, ಶುಭ್ರವಾದ ಬಟ್ಟೆಗಳನ್ನು ಧರಿಸಿ ಪೂಜೆಯನ್ನು ಕೈಗೊಳ್ಳಬೇಕು.

ರಾಧಾಷ್ಟಮಿಯ ಮಹತ್ವ ಏನು?

ಶ್ರೀಕೃಷ್ಣನಿಲ್ಲದೆ ರಾಧೆಯಿಲ್ಲ, ರಾಧೆಯಿಲ್ಲದೆ ಕೃಷ್ಣನಿಲ್ಲ ಎಂಬುದು ಪ್ರತೀತಿ. ಕೃಷ್ಣ ಭಕ್ತಿಯಲ್ಲಿ ರಾಧಾ-ಕೃಷ್ಣರ ಪ್ರೇಮವು ಪರಮೋಚ್ಚ ಭಕ್ತಿಯ ಸಂಕೇತವಾಗಿದೆ. ಉಪಜನ್ಮಾಷ್ಟಮಿಯ ವ್ರತದ ಸಂಪೂರ್ಣ ಫಲ ಸಿಗಬೇಕಾದರೆ ರಾಧಾಷ್ಟಮಿ ವ್ರತವನ್ನು ಆಚರಿಸಬೇಕು ಎಂಬ ನಂಬಿಕೆಯಿದೆ. ಈ ದಿನ ವಾಸವಿದ್ದು, ರಾಧಾ-ಕೃಷ್ಣರನ್ನು ಒಟ್ಟಾಗಿ ಪೂಜಿಸುವುದರಿಂದ ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ. ದಾಂಪತ್ಯ ಜೀವನದಲ್ಲಿ ಮಧುರತೆ ಹೆಚ್ಚಲು ಮತ್ತು ಭಕ್ತರ ಇಷ್ಟಾರ್ಥಗಳು ನೆರವೇರಲು ಈ ಪೂಜೆ ಸಹಕಾರಿ.

ಕುತೂಹಲಕಾರಿ ಪೌರಾಣಿಕ ಕಥೆ

ಪುರಾಣಗಳ ಪ್ರಕಾರ, ರಾಧಾರಾಣಿಯು ವೃಷಭಾನು ರಾಜ ಮತ್ತು ಕೀರ್ತಿ ದೇವಿಯ ಮಗಳಾಗಿ ಜನಿಸಿದಳು. ಆದರೆ ಜನಿಸಿದಾಗ ಆಕೆ ತನ್ನ ಕಣ್ಣುಗಳನ್ನು ತೆರೆದಿರಲಿಲ್ಲ ಮತ್ತು ಯಾರ ಜತೆಗೂ ಮಾತನಾಡುತ್ತಿರಲಿಲ್ಲ! ಇದರಿಂದ ಆಕೆಯ ತಂದೆ-ತಾಯಿ ತುಂಬಾ ಚಿಂತಿತರಾಗಿದ್ದರು.

ಆಗ ಗೋಕುಲದಿಂದ ನಂದ ಮಹಾರಾಜನೊಂದಿಗೆ ಬಾಲಕೃಷ್ಣನು ವೃಷಭಾನು ರಾಜನ ಮನೆಗೆ ಬರ್ತಾನೆ. ಕೃಷ್ಣನು ತೆವಳುತ್ತಾ ಬಂದು ತೊಟ್ಟಿಲಲ್ಲಿ ಮಲಗಿದ್ದ ರಾಧಾರಾಣಿಯ ಮುಖವನ್ನು ಸ್ಪರ್ಶಿಸುತ್ತಿದ್ದಂತೆ, ರಾಧೆಯು ಮೊದಲ ಬಾರಿಗೆ ತನ್ನ ಕಣ್ಣುಗಳನ್ನು ತೆರೆದು ನಕ್ಕಳಂತೆ.

ಅಂದಿನಿಂದ ಆಕೆ ಕೇವಲ ಕೃಷ್ಣನ ಕಡೆಗೆ ಮಾತ್ರ ನೋಡುತ್ತಿದ್ದಳು ಮತ್ತು ಕೃಷ್ಣನ ಇಚ್ಛೆಯಂತೆ ಮಾತನಾಡಿದಳು ಎಂಬ ಪೌರಾಣಿಕ ಕಥೆಯಿದೆ. ರಾಧೆ-ಕೃಷ್ಣರ ಈ ದಿವ್ಯ ಬಾಂಧವ್ಯವು ಆಧ್ಯಾತ್ಮಿಕ ಪ್ರೇಮದ ಪ್ರತೀಕವಾಗಿದೆ.
ರಾಧಾಷ್ಟಮಿ ದಿನದಂದು ಸಾಧ್ಯವಾದಷ್ಟು ದಾನ-ಧರ್ಮಗಳನ್ನು ಮಾಡಿ ಮತ್ತು ರಾಧಾಕೃಷ್ಣರ ನಾಮಸ್ಮರಣೆ ಮಾಡುವುದರಿಂದ ವಿಶೇಷ ಪುಣ್ಯ ಪ್ರಾಪ್ತಿಯಾಗುತ್ತದೆ.

Topics

ಸಂಬಂಧಿತ ಸುದ್ದಿಗಳು