Kannada News Next

astrology

ಶನಿ–ಬುಧ ಸೇರಿ ಸಂಸಪ್ತಕ ಯೋಗ ಸೃಷ್ಟಿ : ಈ 3 ರಾಶಿಯವರ ಮೇಲೆ ಸುರಿಯಲಿದೆ ಸಂಪತ್ತಿನ ವೃಷ್ಟಿ !

ಸೆಪ್ಟೆಂಬರ್‌ 7 ರಂದು ಶನಿ ಮತ್ತು ಬುಧ ಗ್ರಹಗಳು ಸೇರಿ ಅತ್ಯಂತ ಶುಭವೆಂದು ಪರಿಗಣಿಸಿರುವ ಸಂಸಪ್ತಕ ಯೋಗ ಸೃಷ್ಟಿಸಿದ್ದಾರೆ. ಇದರಿಂದ ಯಾವ 3 ರಾಶಿಯವರಿಗೆ ಸುಖ, ಸಂಪತ್ತು ಸಿಗಲಿದೆ?

By Archana V Bhat
Samsaptak Yoga

ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ಮತ್ತು ಬುಧ ಎರಡೂ ಪ್ರಭಾವ ಶಾಲಿ ಗ್ರಹಗಳಾಗಿವೆ. ಬುಧನನ್ನು ಗ್ರಹಗಳ ಅಧಿಪತಿ ಎಂದು ಕರೆದರೆ, ಶನಿಯನ್ನು ಕರ್ಮಫಲದಾತ ಎಂದು ಕರೆಯುತ್ತಾರೆ. ಬುಧನು ಬುದ್ಧಿಶಕ್ತಿ, ಸಂವಹನ ಮತ್ತು ವ್ಯಾಪಾರವನ್ನು ಪ್ರತಿನಿಧಿಸುತ್ತಾನೆ. ಶನಿಯು ನೇರ, ಕಠಿಣ ಪರಿಶ್ರಮ ಮತ್ತು ತೀರ್ಪನ್ನು ಪ್ರತಿನಿಧಿಸುತ್ತಾನೆ. ಈ ಎರಡೂ ರಾಶಿಗಳ ಸಂಯೋಗವು ಜ್ಯೋತಿಷ್ಯದಲ್ಲಿ ಅಪರೂಪ ಎಂದು ಪರಿಗಣಿಸಲಾಗಿದೆ. ಸೆಪ್ಟೆಂಬರ್‌ 7 (ಇಂದು) ಈ ಎರಡೂ ರಾಶಿಗಳು ಸೇರಿ ವಿಶೇಷ ಸನ್ನಿವೇಶವೊಂದನ್ನು ರೂಪಿಸಲಿದೆ. ಅದನ್ನು ಸಂಸಪ್ತಕ ಯೋಗ ಎಂದು ಜ್ಯೋತಿಷ್ಯದಲ್ಲಿ ಕರೆಯಲಾಗಿದೆ. ಇದು ಅತ್ಯಂತ ವಿಶೇಷ ಮತ್ತು ಪರಿಣಾಮಕಾರಿ ಯೋಗ ಎಂದು ವಿವರಿಸಲಾಗಿದೆ. ಬುಧನು ತನ್ನ ಉಚ್ಛ ರಾಶಿಯಾದ ಕನ್ಯಾರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದಾಗಿ ಮೀನ ರಾಶಿಯಲ್ಲಿರುವ ಶನಿಯು ಮತ್ತು ಕನ್ಯಾ ರಾಶಿಯಲ್ಲಿರುವ ಬುಧ ಸರಳ ರೇಖೆ (180 ಡಿಗ್ರಿ) ಯಲ್ಲಿ ಪರಸ್ಪರ ಎದುರಾಗುತ್ತಾರೆ. ಇದನ್ನೇ ಸಂಸಪ್ತಕ ಯೋಗ ಎಂದು ಕರೆಯುತ್ತಾರೆ. ಈ ಯೋಗದಿಂದ ಕೆಲವು ರಾಶಿಯವರಿಗೆ ಸಿಕ್ಕಾಪಟ್ಟೆ ಲಾಭವಾಗಲಿದೆ. ಇದರಿಂದ ವ್ಯಕ್ತಿಯ ಕೌಶಲ, ಸಾಮರ್ಥ್ಯ, ವ್ಯಾಪಾರ ಚಟುವಟಿಕೆಗಳಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ. ಶನಿ ಮತ್ತು ಬುಧನಿಂದ ರೂಪುಗೊಂಡ ಸಂಸಪ್ತಕ ಯೋಗವು ಸೆಪ್ಟೆಂಬರ್ 7, 2026 ರಿಂದ ಸೆಪ್ಟೆಂಬರ್ 26, 2026 ರವರೆಗೆ ಪರಿಣಾಮಕಾರಿಯಾಗಿರುತ್ತದೆ. ಅಂದರೆ ಇದರ ಪರಿಣಾಮವು ಸರಿಸುಮಾರು 19 ದಿನಗಳವರೆಗೆ ಇರುತ್ತದೆ.

ಸಂಸಪ್ತಕ ಯೋಗದಿಂದ ಯಾವ ರಾಶಿಯವರಿಗೆ ಲಾಭ?

ಮಿಥುನ ರಾಶಿ

ನಿಮ್ಮ ರಾಶಿಯ ಅಧಿಪತಿಯಾದ ಬುಧನು ಸೆಪ್ಟೆಂಬರ್‌ 7 ರಂದು ಶನಿಯೊಂದಿಗೆ ಸೇರಿ ಸಂಸಪ್ತಕ ಯೋಗವನ್ನು ರೂಪಿಸುತ್ತಾನೆ. ಇದು ನಿಮ್ಮ ನಾಲ್ಕನೇ ಮನೆಯಲ್ಲಿ ರೂಪುಗೊಳ್ಳುವುದರಿಂದ ಅದು ಸಂತೋಷದ ಮನೆಯಾಗಿದೆ. ಇದರಿಂದ ನಿಮ್ಮ ಕುಟುಂಬ ಜೀವನವು ಸಂತೋಷದಿಂದ ಇರಲಿದೆ. ಅಪೂರ್ಣವಾಗಿ ಉಳಿದುಕೊಂಡಿದ್ದ ನಿಮ್ಮ ಕೆಲಸಗಳು ಪೂರ್ಣಗೊಳ್ಳಲಿದೆ.

ಕನ್ಯಾ ರಾಶಿ

ಬುಧನು ನಿಮ್ಮ ರಾಶಿಯಲ್ಲಿಯೇ ಸಾಗುವುದರಿಂದ ಶನಿಯೊಂದಿಗೆ ನೇರವಾಗಿ ಸಂಧಿಸಿ ಸಂಸಪ್ತಕ ಯೋಗ ನಿರ್ಮಿಸುತ್ತಾನೆ. ಈ ಯೋಗವು ನಿಮ್ಮ ವೈವಾಹಿಕ ಸಂಬಂಧಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಸಂಗಾತಿಯೊಂದಿಗಿನ ಎಲ್ಲ ಭಿನ್ನಾಭಿಪ್ರಾಯಗಳು ದೂರವಾಗಲಿದೆ. ವೃತ್ತಿಯಲ್ಲಿ ಬಡ್ತಿ ಸಿಗುವ ಸಾಧ್ಯತೆಯಿದೆ.

ಮಕರ ರಾಶಿ

ನಿಮ್ಮ ರಾಶಿಯ ಅಧಿಪತಿ ಶನಿ. ಅವನು ನಿಮ್ಮ ಪರಾಕ್ರಮಿ ಮನೆಯಲ್ಲಿದ್ದರೆ, ಬುಧನು ನಿಮ್ಮ ಅದೃಷ್ಟದ ಮನೆಯಲ್ಲಿರುತ್ತಾನೆ. ಇದರಿಂದ ಸಂಸಪ್ತಕ ಯೋಗವು ನಿಮಗೆ ಅದೃಷ್ಟ ಮತ್ತು ಸಾಕಷ್ಟು ಬೆಂಬಲ ನೀಡಲಿದೆ. ಅನೇಕ ಮೂಲಗಳಿಂದ ಆರ್ಥಿಕ ಲಾಭದ ಸಾಧ್ಯತೆಯಿದೆ. ಉದ್ಯಮಿಗಳಿಗೆ ಇದು ಅನುಕೂಲರ ಸಮಯವಾಗಲಿದೆ. ಬಾಕಿ ಉಳಿದಿರುವ ಅವರ ಅನೇಕ ಕೆಲಸಗಳು ಪೂರ್ಣಗೊಳ್ಳಲಿದೆ.