ಸಿಂಹ ರಾಶಿಯಲ್ಲಿ ಬುಧ–ಕೇತು ಸೇರಿ ಜಡತ್ವ ಯೋಗ : ಈ 4 ರಾಶಿಯವರಿಗೆ ಕಷ್ಟವೋ ಕಷ್ಟ..!
ಸಿಂಹ ರಾಶಿಯಲ್ಲಿ ಈಗಾಗಲೇ ಸಂಚರಿಸುತ್ತಿರುವ ಕೇತುವಿನೊಂದಿಗೆ ಬುಧ ಸೇರಿ ಜಡತ್ವ ಯೋಗ ರೂಪಿಸಿದ್ದಾನೆ. ಇದರಿಂದ ನಾಲ್ಕು ರಾಶಿಯವರು ಅತ್ಯಂತ ಕಷ್ಟದ ದಿನಗಳನ್ನು ಎದುರಿಸಬೇಕಾಗಿದೆ.
ಜ್ಯೋತಿಷ್ಯ ಶಾಸ್ತ್ರವು ಭಾರತದ ಅತ್ಯಂತ ಪುರಾತನ ಶಾಸ್ತ್ರವಾಗಿದೆ. ಗ್ರಹ-ನಕ್ಷತ್ರಗಳ ಚಲನೆಯ ಆಧಾರದ ಮೇಲೆ ಭವಿಷ್ಯದ ಆಗುಹೋಗುಗಳ ಬಗ್ಗೆ ಹೇಳಲಾಗುತ್ತದೆ. ಪ್ರತಿಯೊಂದು ಗ್ರಹಗಳು ನಿರ್ದಿಷ್ಟ ಸಮಯದಲ್ಲಿ ಪ್ರತಿಯೊಂದು ರಾಶಿಗಳಲ್ಲಿಯೂ ಸಂಚರಿಸುತ್ತವೆ. ಹೀಗೆ ಸಂಚರಿಸುವ ಗ್ರಹಗಳು ದ್ವಾದಶ ರಾಶಿಯ ಮೇಲೆ ಶುಭ ಹಾಗೂ ಅಶುಭ ಪರಿಣಾಮಗಳನ್ನು ಉಂಟುಮಾಡುತ್ತವೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧನನ್ನು ಬುದ್ಧಿಶಕ್ತಿ, ಮಾತು, ತರ್ಕ ಮತ್ತು ವ್ಯವಹಾರದ ಸೂಚಕವೆಂದು ಹೇಳಲಾಗುತ್ತದೆ. ಬುಧನನ್ನು ಗ್ರಹಗಳ ರಾಜಕುಮಾರನೆಂದು ಕರೆಯಲಾಗುತ್ತದೆ. ಅದೇ ರೀತಿ ಕೇತುವನ್ನು ಮೋಕ್ಷ, ನಿರ್ಲಿಪ್ತತೆ, ಭ್ರಮೆ ಮತ್ತು ಸೂಕ್ಷ್ಮ ದೃಷ್ಟಿಯ ಸೂಚಕವಾಗಿದೆ. ಆಗಸ್ಟ್ 22 ರಂದು ಬುಧನು ಸಿಂಹ ರಾಶಿಗೆ ಪ್ರವೇಶಿಸಿದ್ದಾನೆ. ಸಿಂಹ ರಾಶಿಯಲ್ಲಿ ಈಗಾಗಲೇ ಕೇತು ಸಂಚರಿಸುತ್ತಿದ್ದಾನೆ. ಬುಧ ಮತ್ತು ಕೇತುವಿನ ಸಂಯೋಗದಿಂದ ಜಡತ್ವ ಯೋಗ ರೂಪುಗೊಂಡಿದೆ. ಈ ಯೋಗದ ಪರಿಣಾಮದಿಂದ 4 ರಾಶಿಗಳ ಜೀವನದ ಮೇಲೆ ವ್ಯತಿರಕ್ತ ಪರಿಣಾಮ ಬೀರಲಿದೆ. ಈ ಸಮಯದಲ್ಲಿ ಅವರು ಅತ್ಯಂತ ಎಚ್ಚರಿಕೆಯ ಹೆಜ್ಜೆಗಳನ್ನು ಇಡುವುದು ಮುಖ್ಯವಾಗಿದೆ. ಆ ನಾಲ್ಕು ರಾಶಿಗಳು ಯಾವುವು ಎಂದು ನೋಡೋಣ.
ಜಡತ್ವ ಯೋಗ ಎಂದರೇನು?
ಹೆಸರೇ ಸೂಚಿಸುವಂತೆ ಜಡತ್ವ ಯೋಗವೆಂದರೆ ನಿಶ್ಚಲ ಅಥವಾ ಸ್ಥಿರ ಎನ್ನಲಾಗಿದೆ. ಇದು ವ್ಯಕ್ತಿಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಗೊಂದಲ, ತಪ್ಪು ಆಲೋಚನೆಗಳು, ಮಾತಿನಲ್ಲಿ ಎಡವಿ ಬೀಳುವುದು, ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಅಸಮರ್ಥತೆ, ಅಧ್ಯಯನದಲ್ಲಿ ಗೊಂದಲ, ಸ್ಮರಣ ಶಕ್ತಿಯ ಕುಂಠಿತಗೊಳ್ಳುವುದು, ವ್ಯಾಪಾರದಲ್ಲಿ ನಷ್ಟ ಇತ್ಯಾದಿ ಜೀವನದ ಅಗತ್ಯಗಳ ಮೇಲೆ ಪರಿಣಾಮ ಬೀರುತ್ತದೆ.
ಕಷ್ಟದ ದಿನಗಳನ್ನು ಎದುರಿಸಲಿರುವ 4 ರಾಶಿಗಳು
ವೃಷಭ ರಾಶಿ
ವೃಷಭ ರಾಶಿಯವರಿಗೆ ಈ ಸಮಯದಲ್ಲಿ ಕುಟುಂಬ ಮತ್ತು ಮಾನಸಿಕ ಶಾಂತಿಗೆ ಸಂಬಂಧಿಸಿದಂತೆ ಕೆಲವು ತೊಂದರೆಗಳು ಎದುರಾಗಬಹುದು. ಆಸ್ತಿ ಖರೀದಿ ಅಥವಾ ಮಾರಾಟಕ್ಕೆ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ಕೆಲಸದಲ್ಲಿ ಸಣ್ಣಪುಟ್ಟ ವಿಷಯಗಳಿಗೂ ಒತ್ತಡ ಉಂಟಾಗಬಹುದು.
ಕಟಕ ರಾಶಿ
ಕಟಕ ರಾಶಿಯವರು ಈ ಸಮಯದಲ್ಲಿ ಹಣ ಮತ್ತು ಮಾತು ಎರಡರಲ್ಲೂ ವಿಶೇಷ ಎಚ್ಚರಿಕೆ ವಹಿಸಬೇಕು. ಕೆಲವು ಸಂಗತಿಗಳು ಸಂಬಂಧಗಳನ್ನು ಕೆಡಿಸಬಹುದು. ಕೆಲಸದಲ್ಲಿ ಸಣ್ಣ ತಪ್ಪು ಸಮಸ್ಯೆಗಳಿಗೆ ಕಾರಣವಾಗಬಹುದು. ಹಣಕಾಸಿನ ವ್ಯವಹಾರ ನಡೆಸುವಾಗ ಎಲ್ಲಾ ದಾಖಲೆಗಳನ್ನು ಸುರಕ್ಷಿತವಾಗಿರಿಸಿಕೊಳ್ಳಿ.
ಸಿಂಹ ರಾಶಿ
ಸಿಂಹ ರಾಶಿಯಲ್ಲಿ ಬುಧ ಮತ್ತು ಕೇತುವಿನ ಸಂಯೋಗದಿಂದಾಗಿ, ಈ ರಾಶಿಯಲ್ಲಿ ಜನಿಸಿದವರು ಇದರ ಪರಿಣಾಮಗಳನ್ನು ಹೆಚ್ಚು ಬಲವಾಗಿ ಅನುಭವಿಸಬಹುದು. ಈ ಸಮಯದಲ್ಲಿ ನೀವು ಗೊಂದಲಕ್ಕೊಳಗಾಗಿದ್ದರೆ, ಯಾವುದೇ ಪ್ರಮುಖ ನಿರ್ಧಾರಗಳನ್ನು ತಕ್ಷಣ ತೆಗೆದುಕೊಳ್ಳಬೇಡಿ. ನಿಮ್ಮ ಕೆಲಸ ಅಥವಾ ವೃತ್ತಿಜೀವನದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಾಗ ಬುದ್ಧಿವಂತಿಕೆಯಿಂದ ಪದಗಳನ್ನು ಆರಿಸಿಕೊಳ್ಳಿ. ಅಂದರೆ ಬಹಳ ಎಚ್ಚರಿಕೆಯಿಂದ ಮಾತನಾಡಿ.
ಕುಂಭ ರಾಶಿ
ಜಡತ್ವ ಯೋಗವು ಕುಂಭ ರಾಶಿಯವರಿಗೆ ಕುಟುಂಬ ಸಂಬಂಧಗಳು, ಉದ್ಯಮ ಪಾಲುದಾರಿಕೆ ಮುಂತಾದ ವಿಷಯಗಳಲ್ಲಿ ಎಚ್ಚರಿಕೆವಹಿಸಲು ಸಲಹೆ ನೀಡುತ್ತದೆ. ನಿಮ್ಮ ಸಂಗಾತಿಯೊಂದಿಗೆ ತಪ್ಪು ತಿಳುವಳಿಕೆಯುಂಟಾಗಬಹುದು. ನಿಮ್ಮ ಬ್ಯುಸಿನೆಸ್ ಪಾಲುದಾರರೊಂದಿಗೆ ಹಣಕಾಸಿನ ಬಗ್ಗೆ ಅಥವಾ ಪ್ರಮುಖ ನಿರ್ಧಾರಗಳಿಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು.
ಜಡತ್ವ ಯೋಗಕ್ಕೆ ಪರಿಹಾರಗಳು
ಗಣೇಶನನ್ನು ಪೂಜಿಸಿ, ಗರಿಕೆಯನ್ನು ಅರ್ಪಿಸಿ.
'ಓಂ ಗಂ ಗಣಪತಯೇ ನಮಃ' ಎಂದು ಜಪಿಸಿ.
ಪಕ್ಷಿಗಳಿಗೆ ಹೆಸರುಕಾಳು ಅಥವಾ ರಾಗಿ ಕಾಳುಗಳನ್ನು ನೀಡಿ.
Topics
ಸಂಬಂಧಿತ ಸುದ್ದಿಗಳು
astrology
ರಕ್ಷಾ ಬಂಧನ 2026: ಸಹೋದರಿಯರಿಗೆ ತಪ್ಪಿಯೂ ಈ 6 ವಸ್ತುಗಳನ್ನು ಗಿಫ್ಟ್ ನೀಡಬೇಡಿ;
astrology
ರಕ್ಷಾ ಬಂಧನ 2026: ತ್ರಿಗ್ರಹಿ ರಾಜಯೋಗದಿಂದ ಐದು ರಾಶಿಗಳ ಭಾಗ್ಯವೇ ಬದಲಾಗಲಿದೆ
astrology
ಆಗಸ್ಟ್ 28 ರಂದು ಭಾಗಶಃ ಚಂದ್ರಗ್ರಹಣ: ದ್ವಾದಶ ರಾಶಿಗಳ ಮೇಲಾಗುವ ಪ್ರಭಾವ ಹೀಗಿದೆ
astrology

