Kannada News Next

astrology

ಕುಂಭ, ಮೀನ ಮತ್ತು ಮೇಷ ರಾಶಿಯವರಿಗೆ ಶನಿಯ ಸಾಡೇ ಸಾತಿಯಿಂದ ಮುಕ್ತಿ ಯಾವಾಗ?

ಕುಂಭ, ಮೀನ ಮತ್ತು ಮೇಷ ರಾಶಿಯವರು ಸಾಡೇ ಸಾತಿಯ ಪ್ರಭಾವದಲ್ಲಿದ್ದಾರೆ. ಮೂವರೂ ಸಾಡೇ ಸಾತಿಯಲ್ಲಿದ್ದರೂ ಪರಿಣಾಮ ಎಲ್ಲರಿಗೂ ಒಂದೇ ರೀತಿಯಾಗಿರುವುದಿಲ್ಲ.

By Archana V Bhat
Shani Sade Sati

ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯ ಸಾಡೇ ಸಾತಿಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಶನಿಯು ಜನ್ಮ ನಕ್ಷತ್ರದಿಂದ 12, 1 ಮತ್ತು 2 ನೇ ಮನೆಗಳಲ್ಲಿ ಸಾಗಿದಾಗ ಅದನ್ನು ಸಾಡೇ ಸಾತಿ ಅವಧಿ ಎಂದು ಪರಿಗಣಿಸಲಾಗುತ್ತದೆ. ಇದರ ಪರಿಣಾಮ ಏಳೂವರೆ ವರ್ಷಗಳ ಕಾಲ ಇರುತ್ತದೆ. ಸದ್ಯ ಕುಂಭ, ಮೀನ ಮತ್ತು ಮೇಷ ರಾಶಿಯವರು ಸಾಡೇ ಸಾತಿಯ ಪ್ರಭಾವದಲ್ಲಿದ್ದಾರೆ. ಮೂವರೂ ಸಾಡೇ ಸಾತಿಯಲ್ಲಿದ್ದರೂ ಪರಿಣಾಮ ಎಲ್ಲರಿಗೂ ಒಂದೇ ರೀತಿಯಾಗಿರುವುದಿಲ್ಲ. ಕೆಲವರು ಅಂತಿಮ ಹಂತದಲ್ಲಿದ್ದರೆ ಇತರರು ಆರಂಭ ಅಥವಾ ಮಧ್ಯ ಭಾಗದಲ್ಲಿ ಇರಬಹುದು. ಹಾಗಾಗಿ ಈ ಮೂರು ರಾಶಿಯವರಿಗೆ ಸಾಡೇ ಸಾತಿಗೆ ಮುಕ್ತಾಯ ಎಂದು ನೋಡೋಣ.

ಸಾಡೇ ಸಾತಿಯಲ್ಲಿ ಮೂರು ರಾಶಿಯಗಳ ಸ್ಥಾನ ಹೇಗಿದೆ?

ಕುಂಭ ರಾಶಿಯವರಿಗೆ ಸಾಡೇ ಸಾತಿಯು ಅಂತಿಮ ಹಂತವು ನಡೆಯುತ್ತಿದೆ. 2027–2028 ರಲ್ಲಿ ಅಂದರೆ ಮುಂದಿನ ವರ್ಷದ ವೇಳೆಗೆ ಸಂಪೂರ್ಣ ಪರಿಹಾರ ಸಿಗಲಿದೆ. ಮೀನ ರಾಶಿಯವರಿಗೆ ಇದು ಮಧ್ಯ ಕಾಲಘಟ್ಟದಲ್ಲಿದೆ. ಹಾಗಾಗಿ ಇವರು 2029–2030 ಕಾಯಬೇಕಾಗಿದೆ. ಇನ್ನು ಮೇಷ ರಾಶಿಯವರು ಆರಂಭದ ಕಾಲದಲ್ಲಿದ್ದಾರೆ. ಹಾಗಾಗಿ ಇವರು ದೀರ್ಘ ಅವಧಿಯವರೆಗೆ ಅಂದರೆ ಸುಮಾರು 2032 ರ ಕೊನೆಯವರೆಗೆ ಕಾಯಬೇಕಾಗಿದೆ. ಸಾಡೇ ಸಾತಿಯು ಕೇವಲ ತೊಂದರೆಯನ್ನಷ್ಟೇ ನೀಡುವುದಿಲ್ಲ. ಶನಿಯು ಕರ್ಮಫಲ ಧಾತನೂ ಆಗಿದ್ದಾನೆ. ಹಾಗಾಗಿ ಯಾರು ಕಠಿಣ ಶ್ರಮ, ಶಿಸ್ತು ಮತ್ತು ಸಂಯಮದಿಂದ ಕೆಲಸಗಳನ್ನು ಮಾಡುತ್ತಾರೋ ಅವರಿಗೆ ಶುಭ ಫಲಗಳನ್ನು ನೀಡುತ್ತಾನೆ.

ಕುಂಭ ರಾಶಿ

ಕುಂಭ ರಾಶಿಯವರು ಸಾಡೇ ಸಾತಿಯ ಅಂತಿಮ ಹಂತದಲ್ಲಿದ್ದಾರೆ. ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ 2027 ಕ್ಕೆಲ್ಲಾ ಸಾಡೇ ಸಾತಿಯಿಂದ ಮುಕ್ತಿ ದೊರೆಯುತ್ತದೆ.

ಮೀನ ರಾಶಿ

ಮೀನ ರಾಶಿಯವರು ಪ್ರಸ್ತುತ ಸಾಡೇ ಸಾತಿಯ ಮಧ್ಯ ಹಂತದಲ್ಲಿದ್ದಾರೆ. ಇದರಿಂದ ಇವರ ಕೆಲಸಗಳು ವಿಳಂಬದಿಂದ ಸಾಗುತ್ತವೆ. ಜವಾಬ್ದಾರಿಗಳು ಹೆಚ್ಚಾಗಲಿದೆ. ಒತ್ತಡ ಉಂಟಾಗಬಹುದು. ಜೂನ್‌, 2027 ರಲ್ಲಿ ಶನಿಯು ಮೇಷ ರಾಶಿಗೆ ಚಲಿಸಿದಾಗ ಪರಿಹಾರ ಪ್ರಾರಂಭವಾಗುತ್ತದೆ. ಮುಂದೆ 2028 ರ ಫೆಬ್ರವರಿಯಲ್ಲಿ ಅಂತಿಮ ಹಂತಕ್ಕೆ ಸಾಗುತ್ತದೆ.

ಮೇಷ ರಾಶಿ

ಈ ರಾಶಿಯವರಿಗೆ ಸಾಡೇ ಸಾತಿಯ ಪ್ರಥಮ ಹಂತದಲ್ಲಿದೆ. ಆದ್ದರಿಂದ ಇವರು ಬಹಳ ಸಮಯದವರೆಗೆ ಕಾಯಬೇಕಾಗಿದೆ. ಇವರಿಗೆ ಸಾಡೇ ಸಾತಿಯು 2032 ರ ಸುಮಾರಿಗೆ ಕೊನೆಗೊಳ್ಳುವ ನಿರೀಕ್ಷೆಯಿದೆ.