ನಿಮ್ಮ ಕೈಯಿಂದ ಪದೇ ಪದೇ ಈ ವಸ್ತುಗಳು ಜಾರಿ ಬೀಳ್ತಿದ್ಯಾ? ಇದಕ್ಕೆ ವಾಸ್ತು ಶಾಸ್ತ್ರದಲ್ಲಿ ಹೇಳಿರುವುದೇನು?

ಉಪ್ಪು, ಹಾಲು, ಪೂಜಾ ಸಾಮಗ್ರಿ ಮುಂತಾದವುಗಳು ಕೈಯಿಂದ ಪದೇ ಪದೇ ಬೀಳುವುದು ಶುಭವೋ ಅಥವಾ ಅಶುಭವೋ? ವಾಸ್ತು ಶಾಸ್ತ್ರದ ಸಲಹೆಗಳೇನು?

By Archana V Bhat | ಅರ್ಚನಾ ವಿ ಭಟ್‌

1 min read

WhatsAppPost
Vastu tips
Vastu tips

ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತದ ಮೇಲೆ ಅಪಾರ ನಂಬಿಕೆಯಿದೆ. ಇದರಲ್ಲಿ ವಿವಿಧ ವಸ್ತು, ವಿಷಯಗಳಿಗೆ ಸಂಬಂಧಿಸಿದ ಅನೇಕ ಸಂಗತಿಗಳನ್ನು ವಿಸ್ತಾರವಾಗಿ ವಿವರಿಸಲಾಗಿದೆ. ಮನೆ ಕಟ್ಟುವುದರಿಂದ ಹಿಡಿದು, ಮನೆಯಲ್ಲಿ ಯಾವ ವಸ್ತುಗಳು ಎಲ್ಲಿರಬೇಕು ಎನ್ನುವ ವಿಷಯಗಳನ್ನು ಇಲ್ಲಿ ಹೇಳಲಾಗಿದೆ. ಸಾಮಾನ್ಯವಾಗಿ ಮನೆಯಲ್ಲಿ ಕೆಲಸ ಮಾಡುವಾಗ ನಮ್ಮ ಕೈಯಿಂದ ಕೆಲವು ವಸ್ತುಗಳು ಜಾರಿ ಬೀಳುತ್ತವೆ. ಕೆಲವೊಮ್ಮೆ ಅದು ಪದೇ ಪದೇ ಸಂಭವಿಸುತ್ತದೆ. ಉಪ್ಪು, ಹಾಲು, ಪೂಜಾ ಸಾಮಗ್ರಿಗಳು ಕೈಯಿಂದ ಪದೇ ಪದೇ ಬೀಳುವುದು ಶುಭವೋ ಅಥವಾ ಅಶುಭವೋ ಎಂದು ವಾಸ್ತುವಿನಲ್ಲಿ ಹೇಳಲಾಗಿದೆ. ಹಾಗೆ ವಸ್ತುಗಳು ಬೀಳುವುದು ಭವಿಷ್ಯದಲ್ಲಿ ನಡೆಯಬಹುದಾದ ಯಾವ ಘಟನೆಗಳ ಸಂಕೇತ ಎಂದೂ ಹೇಳಲಾಗಿದೆ. ಹಾಗಾದರೆ ಯಾವ ವಸ್ತುಗಳು ಬಿದ್ದರೆ ಏನು ಅರ್ಥ ಎಂದು ನೋಡೋಣ.

ಉಪ್ಪು

ನೀವು ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ಪದೇ ಪದೇ ಉಪ್ಪಿನ ಡಬ್ಬ ಕೈಯಿಂದ ಜಾರಿ ಬೀಳುತ್ತಿದ್ದರೆ ಅದನ್ನು ಅಶುಭವೆಂದು ವಾಸ್ತು ಶಾಸ್ತ್ರದಲ್ಲಿ ಪರಿಗಣಿಸಲಾಗಿದೆ. ವಾಸ್ತು ಪ್ರಕಾರ ಉಪ್ಪು ಶುಕ್ರ ಮತ್ತು ಚಂದ್ರ ಗ್ರಹಗಳೊಂದಿಗೆ ಸಂಬಂಧವನ್ನು ಹೊಂದಿದೆ. ಕೈಯಿಂದ ಪದೇ ಪದೇ ಉಪ್ಪು ಬೀಳಿಸುವುದು ಆರ್ಥಿಕ ತೊಂದರೆ, ಮಾನಸಿಕ ಒತ್ತಡ, ಕುಟುಂಬದಲ್ಲಿ ಕಲಹವನ್ನು ಸೂಚಿಸುತ್ತದೆ. ಜೊತೆಗೆ ಇದು ವಾಸ್ತು ದೋಷಗಳಿಗೂ ಕಾರಣವಾಗಬಹುದು.

ಹಾಲು

ವಾಸ್ತು ಪ್ರಕಾರ ಹಾಲು ಚಂದ್ರನಿಗೆ ಸಂಬಂಧಿಸಿದೆ. ಇದು ಮನಸ್ಸು ಮತ್ತು ಶಾಂತಿಯ ಸಂಕೇತ. ಶುಭ ಸಂದರ್ಭದಲ್ಲಿ ಹಾಲು ಕಾಯಿಸಿ ಉಕ್ಕಿಸುವುದು ಶುಭದ ಸಂಕೇತವೆಂದು ಪರಿಗಣಿಸಲಾಗಿದೆ. ಆದರೆ ಕೈಯಿಂದ ಹಾಲು ಚೆಲ್ಲಿದರೆ ಅದನ್ನು ಅಶುಭವೆಂದು ಪರಿಗಣಿಸಲಾಗಿದೆ. ಇದು ಆರ್ಥಿಕ ನಷ್ಟದ ಸಂಕೇತ ಹಾಗೂ ಮಾನಸಿಕ ಒತ್ತಡಕ್ಕೆ ಕಾರಣ.

ಎಣ್ಣೆ

ವಾಸ್ತು ಶಾಸ್ತ್ರದಲ್ಲಿ ಎಣ್ಣೆ ತುಂಬಿರುವ ಬಾಟಲಿ ಕೈಜಾರಿ ಬೀಳುವುದನ್ನು ಅಶುಭವೆಂದು ಪರಿಗಣಿಸಲಾಗಿದೆ. ಅಡುಗೆ ಮಾಡುವಾಗ ಅಥವಾ ದೇವರಿಗೆ ದೀಪ ಹಚ್ಚುವಾಗ ಎಣ್ಣೆ ಕೈಜಾರಿ ಚೆಲ್ಲಿದರೆ ಅದು ವ್ಯಕ್ತಿಯು ಕೆಲಸದಲ್ಲಿ ಆರ್ಥಿಕ ನಷ್ಟ ಮತ್ತು ಜೀವನದಲ್ಲಿ ಹಲವಾರು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಸೂಚಿಸುತ್ತದೆ.

ಪೂಜಾ ತಟ್ಟೆ

ವಾಸ್ತು ಪ್ರಕಾರ ಪೂಜೆಗೆಂದು ಕೈಯಲ್ಲಿ ಹಿಡಿದ ಪೂಜಾ ತಟ್ಟೆಯು ಬೀಳುವುದನ್ನು ಆಶುಭವೆಂದು ಪರಿಗಣಿಸಲಾಗಿದೆ. ಇದು ಜೀವನದಲ್ಲಿ ಏಕಾಗ್ರತೆ ಮತ್ತು ಕೊರತೆಯನ್ನು ಸೂಚಿಸುತ್ತದೆ. ಪೂಜೆಗೂ ಮೊದಲು ಅಂದವಾಗಿ ಜೋಡಿಸಿಟ್ಟ ಪೂಜಾ ತಟ್ಟೆ ಬೀಳುವುದು ಕೆಲಸ ಮತ್ತು ಕುಟುಂಬದಲ್ಲಿನ ಅಡೆತಡೆಗಳ ಸಂಕೇತವೆಂದು ಪರಿಗಣಿಸಲಾಗಿದೆ.

Topics

ಸಂಬಂಧಿತ ಸುದ್ದಿಗಳು