Kannada News Next

astrology

2026 ವರ್ಷಾಂತ್ಯದ ರಾಶಿ ಭವಿಷ್ಯ: ಶನಿ ಮಹಾತ್ಮನ ಕಣ್ಣು ಈ 6 ರಾಶಿಗಳ ಮೇಲೆ!

ನ್ಯಾಯದೇವ ಮತ್ತು ಕರ್ಮಫಲದಾತ ಎಂದೇ ಕರೆಯಲ್ಪಡುವ ಶನಿ ದೇವನು ಕೆಲವು ರಾಶಿಗಳ ಮೇಲೆ ತನ್ನ ತೀವ್ರ ಪ್ರಭಾವ ಬೀರಲಿದ್ದಾನೆ.

By Meghana Pranuth | ಮೇಘನಾ ಪ್ರಣೂತ್‌
shani prabhava

2026ರ ವರ್ಷಾಂತ್ಯದ ನಾಲ್ಕು ತಿಂಗಳುಗಳು (ಸೆಪ್ಟೆಂಬರ್‌ನಿಂದ ಡಿಸೆಂಬರ್) ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅತ್ಯಂತ ಮಹತ್ವದ ಬದಲಾವಣೆಗಳಿಗೆ ಸಾಕ್ಷಿಯಾಗಲಿವೆ. ನ್ಯಾಯದೇವ ಮತ್ತು ಕರ್ಮಫಲದಾತ ಎಂದೇ ಕರೆಯಲ್ಪಡುವ ಶನಿ ದೇವನು ಕೆಲವು ರಾಶಿಗಳ ಮೇಲೆ ತನ್ನ ತೀವ್ರ ಪ್ರಭಾವ ಬೀರಲಿದ್ದಾನೆ. ಈ ಅವಧಿಯಲ್ಲಿ 6 ರಾಶಿಗಳ ಜಾತಕದವರಿಗೆ ಮಾನಸಿಕ, ಆರ್ಥಿಕ ಮತ್ತು ವೈಯಕ್ತಿಕ ಜೀವನದಲ್ಲಿ ಕಠಿಣ ಪರೀಕ್ಷೆಯ ಸಮಯ ಎದುರಾಗಲಿದೆ.

 ಶನಿಯ ಪ್ರಭಾವಕ್ಕೆ ಒಳಗಾಗುವ 6 ಪ್ರಮುಖ ರಾಶಿಗಳು

ಮೇಷ ರಾಶಿ:

ಮೇಷ ರಾಶಿ

ಶನಿಯ ಧೃಷ್ಟಿಯಿಂದಾಗಿ ಆರ್ಥಿಕ ಮುಗ್ಗಟ್ಟು ಮತ್ತು ಕುಟುಂಬದಲ್ಲಿ ಮನಸ್ತಾಪಗಳು ಹೆಚ್ಚಾಗಬಹುದು. ಹಣಕಾಸಿನ ಹೂಡಿಕೆ ಮಾಡುವಾಗ ಜಾಗರೂಕರಾಗಿರಿ ಮತ್ತು ಕೋಪವನ್ನು ಹಂತ-ಹಂತವಾಗಿ ನಿಯಂತ್ರಿಸಿ.

ಮಿಥುನ ರಾಶಿ:

ಮಿಥುನ ರಾಶಿ

ವೃತ್ತಿ ಜೀವನದಲ್ಲಿ ಸವಾಲುಗಳು ಹಾಗೂ ಸಹೋದ್ಯೋಗಿಗಳಿಂದ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಕಚೇರಿಯಲ್ಲಿ ಅನಗತ್ಯ ಚರ್ಚೆಗಳಿಂದ ದೂರವಿರಿ, ಉದ್ಯೋಗ ಬದಲಾಯಿಸುವ ನಿರ್ಧಾರವನ್ನು ಸದ್ಯಕ್ಕೆ ಮುಂದೂಡಿ.

ಸಿಂಹ ರಾಶಿ:

ಸಿಂಹ ರಾಶಿ (Leo).jpg

ಆಸ್ತಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ನಷ್ಟ ಹಾಗೂ ಅನಿರೀಕ್ಷಿತ ಖರ್ಚುಗಳು ಎದುರಾಗಬಹುದು. ದೊಡ್ಡ ಮಟ್ಟದ ಸಾಲ ಮಾಡುವುದನ್ನು ಸಂಪೂರ್ಣವಾಗಿ ತಪ್ಪಿಸಿ.

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿ

ಆರೋಗ್ಯ ಸಮಸ್ಯೆಗಳು ಮತ್ತು ಪ್ರಯಾಣದ ವೇಳೆ ತೊಂದರೆಗಳು ಕಾಣಿಸಿಕೊಳ್ಳಬಹುದು. ಚಾಲನೆ ಮಾಡುವಾಗ ಎಚ್ಚರ ವಹಿಸಿ, ಸಣ್ಣ ಆರೋಗ್ಯ ಸಮಸ್ಯೆಯನ್ನೂ ನಿರ್ಲಕ್ಷಿಸಬೇಡಿ.

ಮಕರ ರಾಶಿ:

ಮಕರ ರಾಶಿ

ಶನಿಯ ಪ್ರಭಾವದಿಂದ ಪ್ರತಿಯೊಂದು ಕೆಲಸದಲ್ಲೂ ವಿಳಂಬ ಮತ್ತು ಅಡೆತಡೆಗಳು ಎದುರಾಗುತ್ತವೆ. ನಿರಾಸೆಗೊಳ್ಳದೆ ಕಠಿಣ ಪರಿಶ್ರಮವನ್ನು ಮುಂದುವರಿಸಿ, ಶ್ರಮಕ್ಕೆ ತಕ್ಕ ಫಲ ತಡವಾಗಿ ಸಿಗಲಿದೆ. 

ಕುಂಭ ರಾಶಿ:

ಕುಂಭ ರಾಶಿ

ಮಾನಸಿಕ ನೆಮ್ಮದಿ ಕೊರತೆ ಮತ್ತು ಆತ್ಮೀಯರ ಜೊತೆ ಸಂಬಂಧದಲ್ಲಿ ಬಿರುಕು ಮೂಡುವ ಸಾಧ್ಯತೆ. ಯೋಚಿಸದೆ ಯಾವುದೇ ಭಾವನಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.

 ಶನಿ ಕೋಪದಿಂದ ಬಚಾವಾಗಲು ಸರಳ ಪರಿಹಾರಗಳು

ಪ್ರತಿ ಶನಿವಾರ ಶನಿ ದೇವರಿಗೆ ಎಳ್ಳೆಣ್ಣೆ ದೀಪ ಬೆಳಗಿ. ದಿನವೂ ಅಥವಾ ಶನಿವಾರಗಳಂದು "ಹನುಮಾನ್ ಚಾಲೀಸಾ" ಹಾಗೂ "ಶನಿ ಸ್ತೋತ್ರ" ಪಠಿಸಿ. ಕಪ್ಪು ಎಳ್ಳು, ಕಪ್ಪು ಬಟ್ಟೆ ಅಥವಾ ಅನ್ನವನ್ನು ನಿರ್ಗತಿಕರಿಗೆ ದಾನ ಮಾಡಿ. ಶನಿ ದೇವನು ಯಾರನ್ನೂ ಸುಮ್ಮನೆ ಶಿಕ್ಷಿಸುವುದಿಲ್ಲ. ನಮ್ಮ ಕರ್ಮಗಳಿಗೆ ತಕ್ಕಂತೆ ಫಲ ನೀಡುತ್ತಾನೆ. ತಾಳ್ಮೆ ಮತ್ತು ಸತ್ಕರ್ಮಗಳಿಂದ ಶನಿಯ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳಬಹುದು.