Kannada News Next

automobile

2027 Kawasaki Vulcan S ಭಾರತದಲ್ಲಿ ಬಿಡುಗಡೆ ! ಸಿಕ್ಕಾಪಟ್ಟೆ ಸ್ಟೈಲಿಶ್‌ ಆಗಿ ಕಾಣಿಸುವ ಬೈಕ್‌ನ ಬೆಲೆ ಎಷ್ಟು?

649 ಸಿಸಿ ಎಂಜಿನ್‌, 235 ಕೆಜಿ ತೂಕದ ಕವಾಸಕಿ ಕ್ರೂಸರ್ ಮೋಟಾರ್‌ಸೈಕಲ್‌ 2027 ವಲ್ಕನ್‌ ಎಸ್‌ ಭಾರತದಲ್ಲಿ ಬಿಡುಗಡೆ. ಇದರ ವೈಶಿಷ್ಟ್ಯ, ಬೆಲೆ ಹೇಗಿದೆ ನೋಡಿ...

By Archana V Bhat
Kawasaki 2027 vulcan S

ಆಟೋಮೊಬೈಲ್‌ ವಲಯದಲ್ಲಿ ತನ್ನದೇ ಛಾಪು ಮೂಡಿಸಿರುವ ಕವಾಸಕಿ ಇಂಡಿಯಾ ತನ್ನ ಜನಪ್ರಿಯ ಕ್ರೂಸರ್‌ ಮೋಟಾರ್‌ಸೈಕಲ್‌ 2027 ವಲ್ಕನ್‌ ಎಸ್‌ (Vulcan S) ಅನ್ನು ಭಾರತದ ಆಟೋ ಮಾರುಕಟ್ಟೆಗೆ ಪರಿಚಯಿಸಿದೆ. ಕಂಪನಿಯು ಇದರ ಆರಂಭಿಕ ಬೆಲೆಯನ್ನು ₹8.23 ಲಕ್ಷ (ಎಕ್ಸ್‌ ಶೋ ರೂಂ ಬೆಲೆ) ಎಂದು ನಿಗದಿಪಡಿಸಿದೆ. ಇದು 2026ರಲ್ಲಿ ಬಿಡುಗಡೆಯಾಗಿದ್ದ ಬೈಕ್‌ಗಿಂತ ಕೇವಲ 10,000 ರೂ ಹೆಚ್ಚಾಗಿದೆ. ಬೆಲೆಯಲ್ಲಿ ಸ್ವಲ್ಪ ಹೆಚ್ಚಿಗೆಯಾಗಿರುವುದರ ಜೊತೆಗೆ ಕೆಲವು ಮಹತ್ವದ ಬದಲಾವಣೆಯನ್ನು ಕಂಡಿದೆ. ಟಾರ್ಕ್‌, ಹೊಸ ಬಣ್ಣಗಳ ಆಯ್ಕೆ, ಡಿಸ್ಕ್‌ ಬ್ರೆಕ್‌ಗಳ ಗಾತ್ರದಲ್ಲಿ ಈ ಬದಲಾವಣೆಗಳನ್ನು ಕಾಣಬಹುದು. ಕಂಪನಿಯ ಪ್ರಕಾರ ಈ ಕ್ರೂಸರ್‌ ಬೈಕ್‌ನ ವಿತರಣೆಯು ಸೆಪ್ಟೆಂಬರ್‌ 2026ರ ಮಧ್ಯದಿಂದ ಪ್ರಾರಂಭವಾಗಲಿದೆ.

ಹೇಗಿದೆ ಹೊಸ ಕವಾಸಕಿ ವಲ್ಕನ್ ಎಸ್ 2027 ಕ್ರೂಸರ್ ಬೈಕ್?

* 2027 ಆವೃತ್ತಿಯ ಕವಾಸಕಿ ವಲ್ಕನ್ ಎಸ್ ಕ್ರೂಸರ್ ಬೈಕ್ 649 ಸಿಸಿ ಬೈಕ್‌ ಆಗಿದೆ. ಇದು ಲಿಕ್ವಿಡ್‌ ಕೂಲ್ಡ್‌, ಪ್ಯಾರಲಲ್ –ಟ್ವಿನ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ.

* 2027ರ ಮಾದರಿಯಲ್ಲಿ ಕಂಪನಿ 2026ಕ್ಕಿಂತ ಮುಂಚೆ ಬಿಡುಗಡೆಯಾಗಿದ್ದ ಬೈಕ್‌ನಲ್ಲಿ ಕಂಡುಬರುವ ಟಾರ್ಕ್‌ ಅನ್ನು ಮರುಸ್ಥಾಪಿಸಿದೆ. ಈ ಹೊಸ ಎಂಜಿನ್‌ ಈಗ 62.4 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಜೊತೆಗೆ 59 hp ಉತ್ಪಾದಿಸುತ್ತದೆ. ಇದರ ಕಾರ್ಯಕ್ಷಮತೆ ಸುಧಾರಿಸಿರುವುದರಿಂದ ಓವರ್‌ಟೇಕಿಂಗ್‌ ಮತ್ತು ಕ್ರೂಸಿಂಗ್‌ ಅನ್ನು ಹೆಚ್ಚು ನಿಖರತೆ ಸಿಗಲಿದೆ. ಈ ಬೈಕ್‌ 6–ಸ್ಪೀಡ್‌ ಗೇರ್‌ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

* ಈ ಬೈಕ್‌ನ ಬ್ರೇಕಿಂಗ್‌ ಹಾರ್ಡ್‌ವೇರ್‌ನಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಮುಂಭಾಗದ ಡಿಸ್ಕ್ ಬ್ರೇಕ್ ಗಾತ್ರವನ್ನು 300mm ನಿಂದ 272mm ಗೆ ಇಳಿಸಲಾಗಿದೆ. ಹಿಂಭಾಗದ ಡಿಸ್ಕ್ ಬ್ರೇಕ್ ಅನ್ನು 250mm ನಿಂದ 216mm ಗೆ ಇಳಿಸಲಾಗಿದೆ. ಸುರಕ್ಷತೆಗಾಗಿ ಬೈಕ್ ಡ್ಯುಯಲ್ ಚಾನೆಲ್ ABS ಅನ್ನು ಹೊಂದಿದೆ.

* ಇನ್ನು ಸಸ್ಪೆನ್ಷನ್‌ ಸೆಟಪ್‌ ನಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಮುಂಭಾಗವು 41mm ಟೆಲಿಸ್ಕೋಪಿಕ್ ಫೋರ್ಕ್ (130mm ಟ್ರಾವಲ್‌) ಮತ್ತು ಹಿಂಭಾಗವು ಲಿಂಕೇಜ್-ಟೈಪ್ ಮೊನೊಶಾಕ್ (80mm ಟ್ರಾವಲ್‌) ಹೊಂದಿದೆ.

* ಇದರ ಸೀಟ್‌ನ ಎತ್ತರ 705ಮಿ.ಮೀ. ಆಗಿದ್ದು ಕಡಿಮೆ ಎತ್ತರವಿರುವ ಸವಾರರಿಗೂ ಆರಾಮದಾಯಕವಾಗಿದೆ. ಇದರ ಗ್ರೌಂಡ್‌ ಕ್ಲಿಯರೆನ್ಸ್‌ 130 ಮಿ.ಮೀ. ಮತ್ತು ಕರ್ಬ್‌ ತೂಕ 235 ಕೆಜಿ ಆಗಿದೆ.

* 2027 ಮಾದರಿಯ ಹೊಸ ಬೈಕ್‌ ವೇಗ, ಆರ್‌ಪಿಎಮ್‌, ಇಂಧನ ಮಟ್ಟ, ಗೇರ್‌ ಸ್ಥಾನ ಮತ್ತು ಟ್ರಿಪ್‌ ಡೇಟಾ ಮುಂತಾದವುಗಳನ್ನು ಪ್ರದರ್ಶಿಸುವ ಅನಲಾಗ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹಿಂದಿನ ಮಾದರಿ ಅಂದರೆ 2026ರ ರಂತೆಯೇ ಇದೆ.

* ಇನ್ನು ಈ ಬೈಕ್‌ ನಲ್ಲಿ TFT ಸ್ಕ್ರೀನ್, ಬ್ಲೂಟೂತ್ ಸಂಪರ್ಕ ಅಥವಾ ರೈಡ್-ಬೈ-ವೈರ್ ಥ್ರೊಟಲ್‌ನಂತಹ ಹೊಸ ತಂತ್ರಜ್ಞಾನಗಳು ಇಲ್ಲ.

* ಬಣ್ಣಗಳ ಆಯ್ಕೆಯ ಬಗ್ಗೆ ಹೇಳುವುದಾದರೆ 027 ಮಾದರಿಯನ್ನು ಹೊಸ "ಮೆಟಾಲಿಕ್ ಕಾರ್ಬನ್ ಗ್ರೇ" ಬಣ್ಣ ನೀಡಲಾಗಿದೆ. ಈ ಹೊಸ ಶೇಡ್‌ ವಲ್ಕನ್‌ ಎಸ್‌ ಸರಣಿಯಲ್ಲಿ ಕವಾಸಕಿಯ ಸಿಗ್ನೇಚರ್‌ ಗ್ರೀನ್‌ ಟಚ್‌ ಅನ್ನು ವಾಪಸ್ಸು ನೀಡಿದೆ.