ಮಾರುಕಟ್ಟೆಗೆ ಬಂದ ಬಜೆಟ್ ಫ್ರೆಂಡ್ಲೀ ಎಲೆಕ್ಟ್ರಿಕ್ ಸ್ಕೂಟರ್ : ಏಥರ್ ಕೊನಾರ್ಕ್ ಬೆಲೆ, ವೈಶಿಷ್ಟ್ಯ ಏನು?
ದೀರ್ಘಾವಧಿಯ ಸರ್ವಿಸ್ ಇಂಟರ್ವಲ್ ಮತ್ತು ಸುಲಭ ಚಾರ್ಜಿಂಗ್ ವ್ಯವಸ್ಥೆಯಿರುವ ಏಥರ್ ಕೊನಾರ್ಕ್‌ನ ವೈಶಿಷ್ಟ್ಯ, ಬೆಲೆ ಮತ್ತು ಲಭ್ಯತೆ...
By Archana V Bhat | ಅರ್ಚನಾ ವಿ ಭಟ್
1 min read
ದೇಶದ ದೈತ್ಯ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಕಂಪನಿ ಬಹುನಿರೀಕ್ಷಿತ ಏಥರ್ ಕೊನಾರ್ಕ್ ಇ–ಸ್ಕೂಟರ್ ಬಿಡುಗಡೆ ಮಾಡಿದೆ. ಬಜೆಟ್ ಸ್ನೇಹಿ ಈ ಎಲೆಕ್ಟ್ರಿಕ್ ಸ್ಕೂಟರ್ ನಿತ್ಯದ ನಗರ ಸಂಚಾರಕ್ಕಾಗಿಯೇ ವಿನ್ಯಾಸಗೊಳಿಸಲಾಗಿದೆ. ಇ–ಸ್ಕೂಟರ್ ಖರೀದಿಸಬೇಕೆಂಬ ಆಸೆ ಇರುವವರಿಗೆ ಈಗ ಬಿಡುಗಡೆಯಾಗಿರುವ ಏಥರ್ ಕೊನಾರ್ಕ್ ಬಹಳ ಸೂಕ್ತವಾಗಿದೆ. ಕಂಪನಿ ಈ ಹೊಸ ಬಜೆಟ್ ಫ್ರೆಂಡ್ಲೀ ಸ್ಕೂಟರ್ ಅನ್ನು 99,999 ರೂ. ಗಳ ಆರಂಭಿಕ ಬೆಲೆಯಲ್ಲಿ ಪರಿಚಯಿಸಿದೆ. ದೀರ್ಘಾವಧಿಯ ಸರ್ವಿಸ್ ಇಂಟರ್ವಲ್ ಮತ್ತು ಸುಲಭ ಚಾರ್ಜಿಂಗ್ ವ್ಯವಸ್ಥೆಯಿರುವ ಏಥರ್ ಕೊನಾರ್ಕ್‌ನ ವೈಶಿಷ್ಟ್ಯ, ಬೆಲೆ ಮತ್ತು ಲಭ್ಯತೆ ಬಗ್ಗೆ ತಿಳಿಯೋಣ.
ಏಥರ್ ಕೊನಾರ್ಕ್ ವೈಶಿಷ್ಟ್ಯ
ಏಥರ್ ಕೊನಾರ್ಕ್ ಹೊಸ ಪೀಳಿಗೆಯ EL ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾದ ಮೊದಲ ಉತ್ಪಾದನಾ ಸ್ಕೂಟರ್. ಸ್ಟೀಲ್ ಯೂನಿಬಾಡಿ, 14-ಇಂಚಿನ ಫ್ರಂಟ್ ವೀಲ್, 7-ಇಂಚಿನ ಡ್ಯಾಶ್‌ಬೋರ್ಡ್ ಹಾಗೂ ಸುಧಾರಿತ ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಮ್ (AeBS) ಇದೆ. ಇದು ದೀರ್ಘಾವಧಿಯ ಸರ್ವಿಸ್ ಇಂಟರ್ವಲ್ ಮತ್ತು ಸುಲಭ ಚಾರ್ಜಿಂಗ್ ವ್ಯವಸ್ಥೆಯನ್ನೂ ಹೊಂದಿದೆ. ಮನೆಯಲ್ಲಿ ಚಾರ್ಜಿಂಗ್ ಮಾಡುವ ಸಮಯವನ್ನು ಶೇ. 50 ರಷ್ಟು ಕಡಿತಗೊಳಿಸಲು 450W ಪೋರ್ಟಬಲ್ ಚಾರ್ಜರ್ ನೀಡಲಾಗಿದೆ.
ಬೆಲೆ ಮತ್ತು ಲಭ್ಯತೆ
ಕೋನಾರ್ಕ್ 'S' ಲೈನ್‌ಅಪ್ ಸದ್ಯ 100 ಕಿ.ಮೀ, 125 ಕಿ.ಮೀ ಮತ್ತು 161 ಕಿ.ಮೀ IDC ರೇಂಜ್ ಹೊಂದಿರುವ 3 ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಇವುಗಳ ಆರಂಭಿಕ ಬೆಲೆ ಕ್ರಮವಾಗಿ ₹99,999, ₹1,21,999 ಮತ್ತು ₹1,44,999 ಆಗಿದೆ. ಆಯ್ದ ನಗರಗಳಲ್ಲಿ ₹2,499 ಟೋಕನ್ ಹಣ ಪಾವತಿಸಿ ಸ್ಕೂಟರ್ ಬುಕ್ ಮಾಡಬಹುದಾಗಿದೆ. ಸೆಪ್ಟೆಂಬರ್ ಮಧ್ಯಭಾಗದಿಂದ ಹಂತ–ಹಂತವಾಗಿ ಡೆಲಿವರಿ ಆರಂಭವಾಗಲಿದೆ. ಮೊದಲಿಗೆ 125 ಕಿ.ಮೀ ಮತ್ತು 161 ಕಿ.ಮೀ 'S' ವೇರಿಯೆಂಟ್‌ಗಳನ್ನು ಗ್ರಾಹಕರಿಗೆ ನೀಡಲಾಗುತ್ತದೆ. ನಂತರ 200 ಕಿ.ಮೀ S ಮತ್ತು Z ಸರಣಿಯ ಸ್ಕೂಟರ್‌ಗಳು FY28 ರಲ್ಲಿ ರಸ್ತೆಗೆ ಇಳಿಯಲಿವೆ.
ಯಾರ ಜೊತೆ ಸ್ಪರ್ಧೆ
ಕಂಪನಿ ಇದರ ಬೆಲೆಯನ್ನು ರಿಟ್ಜಾಗಿಂತ ಕಡಿಮೆ ಇರಿಸಿರುವ ಕಾರಣ ಮಾರುಕಟ್ಟೆಯಲ್ಲಿ ಟಿವಿಎಸ್ ಐಕ್ಯೂಬ್ ಮತ್ತು ಬಜಾಜ್ ಚೇತಕ್ C2501 ನೊಂದಿಗೆ ಸ್ಪರ್ಧಿಸಲಿದೆ.
Topics
ಸಂಬಂಧಿತ ಸುದ್ದಿಗಳು
automobile
Mahindra XUV 3XO CNG : ಮಹೀಂದ್ರಾ ಎಕ್ಸ್ಯುವಿ 3XO ಸಿಎನ್ಜಿ ಕೇವಲ 9.99 ಲಕ್ಷಕ್ಕೆ ಭಾರತದಲ್ಲಿ ಬಿಡುಗಡೆ
automobile
165 ಕಿಮೀ ರೇಂಜ್, 1 ಲಕ್ಷಕ್ಕೂ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ ಪ್ರಾರಂಭ ! 6 ಬಣ್ಣಗಳ ಆಯ್ಕೆ, ದೊಡ್ಡದಾದ ಡಿಕ್ಕಿ ಇದರ ವೈಶಿಷ್ಟ್ಯ!
automobile
tata aeris car : ಕೇವಲ 5.90 ಲಕ್ಷಕ್ಕೆ ಟಾಟಾ ಏರಿಸ್ , ಫೀಚರ್ಸ್ ಕೇಳಿದ್ರೆ ಫಿದಾ ಆಗೋದು ಪಕ್ಕಾ
automobile

