Kannada News Next

automobile

3 ಕಾರುಗಳನ್ನು ಆಟೋಮೆಟಿಕ್‌ ಸಿಎನ್‌ಜಿ ಯಲ್ಲಿ ಲಾಂಚ್‌ ಮಾಡಿದ ಮಾರುತಿ ! ಬೆಲೆ, ಮೈಲೇಜ್‌ಗೆ ಫಿದಾ ಆದ ಗ್ರಾಹಕರು!

ಮಾರುತಿ ಸುಜುಕಿ ತನ್ನ ಅತ್ಯಂತ ಜನಪ್ರಿಯ ಕಾರುಗಳಾದ ಸ್ವಿಫ್ಟ್, ಡಿಜೈರ್ ಮತ್ತು ಬಲೆನೊಗಳನ್ನು ಆಟೋಮೆಟಿಕ್‌ ಸಿಎನ್‌ಜಿ (CNG AMT) ಯೊಂದಿಗೆ ಬಿಡುಗಡೆ ಮಾಡಿದೆ.

By Archana V Bhat
maruti suzuki cng amt cars

ಭಾರತದ ಜನಪ್ರಿಯ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ತನ್ನ ಹೊಸ ಆಟೋ ಗ್ರೀನ್‌ ಮಿಷನ್‌ ಅನ್ನು ಇನ್ನಷ್ಟು ವಿಸ್ತರಿಸುವತ್ತ ಮಹತ್ವದ ಹೆಜ್ಜೆ ಇರಿಸಿದೆ. ಮಾರುತಿ ಸುಜುಕಿ ಇದೀಗ ಆಟೋ ಗ್ರೀನ್‌ ಮಿಷನ್‌ ಅಡಿಯಲ್ಲಿ ಭಾರತದ ಆಟೋಮೊಬೈಲ್‌ ಮಾರುಕಟ್ಟೆಗೆ ಸ್ವಿಫ್ಟ್‌, ಡಿಜೈರ್‌ ಮತ್ತು ಬಲೆನೊಗಳ ಆಟೋಮೆಟಿಕ್‌ ಸಿಎನ್‌ಜಿ (CNG AMT) ರೂಪಾಂತರವನ್ನು ಬಿಡುಗಡೆ ಮಾಡಿದೆ. ಇಲ್ಲಿಯವರೆಗೆ ಈ ಗಾಡಿಗಳು ಮ್ಯಾನುವಲ್‌ ಗೇರ್‌ಬಾಕ್ಸ್‌ ಸಿಎನ್‌ಜಿ ಆಯ್ಕೆಯನ್ನು ಮಾತ್ರ ಹೊಂದಿತ್ತು. ಆದರೆ ಈಗ ಆಟೋಮೆಟಿಕ್‌ ರೂಪಾಂತರದಲ್ಲೂ ಲಭ್ಯವಿರಲಿದೆ. ಇದರು ತನ್ನ ಗ್ರಾಹಕರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುವುದರ ಜೊತೆಗೆ ಹೆಚ್ಚಿನ ಮೈಲೇಜ್‌ ಅನ್ನು ಸಹ ನೀಡಿದೆ. ಈ ಬಿಡುಗಡೆ ಮಾಡಿರುವ ಈ ಮೂರು ಕಾರುಗಳ ಬೆಲೆ, ಮೈಲೇಜ್‌ ಮತ್ತು ವೈಶಿಷ್ಟ್ಯಗಳನ್ನು ನೋಡೋಣ.

ಬೆಲೆ ಎಷ್ಟು?

ಮಾರುತಿ ಸುಜುಕಿ ಸ್ವಿಫ್ಟ್‌ ಸಿಎನ್‌ಜಿ ಆಟೋಮೆಟಿಕ್‌ – ₹7.92 ಲಕ್ಷದಿಂದ ಪ್ರಾರಂಭ (ಎಕ್ಸ್‌ ಶೋ ರೂಂ ಬೆಲೆ)

ಮಾರುತಿ ಸುಜುಕಿ ಬಲೆನೊ ಸಿಎನ್‌ಜಿ ಆಟೋಮ್ಯಾಟಿಕ್ – ₹8.32 ಲಕ್ಷದಿಂದ ಪ್ರಾರಂಭ (ಎಕ್ಸ್‌ ಶೋ ರೂಂ ಬೆಲೆ)

ಮಾರುತಿ ಸುಜುಕಿ ಡಿಜೈರ್ ಸಿಎನ್‌ಜಿ ಆಟೋಮ್ಯಾಟಿಕ್ – ₹8.53 ಲಕ್ಷದಿಂದ ಪ್ರಾರಂಭ (ಎಕ್ಸ್‌ ಶೋ ರೂಂ ಬೆಲೆ)

ಮೈಲೇಜ್‌ ಎಷ್ಟು ?

ಮಾರುತಿ ಬಲೆನೊ CNG AMT - 34.47 ಕಿ.ಮೀ/ಕೆಜಿ ಮೈಲೇಜ್

ಮಾರುತಿ ಸ್ವಿಫ್ಟ್ CNG AMT - 35.34 ಕಿ.ಮೀ/ಕೆಜಿ ಮೈಲೇಜ್

ಮಾರುತಿ ಡಿಜೈರ್ CNG AMT - 36.47 ಕಿಮೀ/ಕೆಜಿ ಮೈಲೇಜ್

* ಈಗ ಬಿಡುಗಡೆಯಾಗಿರುವ ಈ ಮೂರು ಕಾರುಗಳಲ್ಲಿ ಮಾರುತಿ ಡಿಜೈರ್‌ CNG AMT ಅತ್ಯಧಿಕ ಮೈಲೇಜ್‌ ನೀಡುತ್ತದೆ ಎನ್ನಲಾಗಿದೆ.

ವೈಶಿಷ್ಟ್ಯ

ಹೊಸದಾಗಿ ಸಿಎನ್‌ಜಿ ಆಟೋಮೆಟಿಕ್‌ ರೂಪಾಂತರದಲ್ಲಿ ಬಿಡುಗಡೆಯಾಗಿರುವ ಮಾರುತಿಯ ಮೂರು ಕಾರುಗಳಲ್ಲಿ ಯಾವುದೇ ಕ್ಲಚ್‌ ತೊಂದರೆ ಇರುವುದಿಲ್ಲ. ಟ್ರಾಫಿಕ್‌ನಲ್ಲಿ ಪದೇ ಪದೇ ಗೇರ್‌ ಮತ್ತು ಕ್ಲಚ್ ಬದಲಾಯಿಸುವ ತೊಂದರೆಗೆ ಮುಕ್ತಿ ಸಿಗಲಿದೆ. ಕಾರಿನ ಸಿನ್‌ಜಿಗೆ ಐಜಿಎಸ್‌ ತಂತ್ರಜ್ಞಾನ ಸೇರಿಸಿರುವುದರಿಂದ ಇದು ಇಂಧನ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಹೆಚ್ಚು ಮೈಲೇಜ್‌ ನೀಡುತ್ತದೆ. ಸ್ವಿಫ್ಟ್ ಮತ್ತು ಡಿಜೈರ್ ಕಾರುಗಳನ್ನು ಮಾರುತಿ ಸುಜುಕಿ ಅರೆನಾ ಡೀಲರ್‌ಶಿಪ್‌ಗಳ ಮೂಲಕ ಮಾರಾಟ ಮಾಡಿದರೆ ಬಲೆನೊ ಕಾರುಗಳನ್ನು ನೆಕ್ಸಾ ಡೀಲರ್‌ಶಿಪ್‌ಗಳ ಮೂಲಕ ಮಾರಾಟ ಮಾಡಲಾಗುತ್ತದೆ.