ಕೇವಲ 2 ಲಕ್ಷಕ್ಕೆ ಸಿಗಲಿದೆ ರಾಯಲ್ ಎನ್‌ಫೀಲ್ಡ್‌ ಎಲೆಕ್ಟ್ರಿಕ್ ಬೈಕ್‌ : ‘ಫ್ಲೈಯಿಂಗ್ ಫ್ಲೀ C6’ ಪೀಚರ್ಸ್‌ ಏನು ಗೊತ್ತಾ ?

ಭಾರತದ ಪ್ರಖ್ಯಾತ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಯಾದ ರಾಯಲ್ ಎನ್‌ಫೀಲ್ಡ್, ಬಹುಕಾಲದ ನಿರೀಕ್ಷೆಯ ನಂತರ ಎಲೆಕ್ಟ್ರಿಕ್ ಬೈಕ್‌ (EV) ಅನ್ನು ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆಗೊಳಿಸಿದ್ದು, ಮೊದಲ ಎಲೆಕ್ಟ್ರಿಕ್ ಬೈಕ್ 'ಫ್ಲೈಯಿಂಗ್ ಫ್ಲೀ C6' ಗ್ರಾಹಕರ ಗಮನ ಸೆಳೆದಿದೆ.

ರಾಯಲ್ ಎನ್‌ಫೀಲ್ಡ್ ಖರೀದಿ ಮಾಡಬೇಕು ಅನ್ನೋದು ಬಹುತೇಕರ ಕನಸು. ಇದೀಗ ರಾಯಲ್ ಎನ್‌ಫೀಲ್ಡ್,ಸವಾರರಿಗೆ ಇದೀಗ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಭಾರತದ ಪ್ರಖ್ಯಾತ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಯಾದ ರಾಯಲ್ ಎನ್‌ಫೀಲ್ಡ್, ಬಹುಕಾಲದ ನಿರೀಕ್ಷೆಯ ನಂತರ ಎಲೆಕ್ಟ್ರಿಕ್ ಬೈಕ್‌ (EV) ಅನ್ನು ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆಗೊಳಿಸಿದ್ದು, ಮೊದಲ ಎಲೆಕ್ಟ್ರಿಕ್ ಬೈಕ್ ‘ಫ್ಲೈಯಿಂಗ್ ಫ್ಲೀ C6’ ಗ್ರಾಹಕರ ಗಮನ ಸೆಳೆದಿದೆ.

ಬ್ಯಾಟರಿ-ಆಸ್-ಎ-ಸರ್ವೀಸ್ (BaaS) ಸೌಲಭ್ಯ

ಗ್ರಾಹಕರಿಗೆ ಹೊರೆಯಾಗದಂತೆ ಕಂಪನಿಯು ವಿಶೇಷವಾದ ‘ಬ್ಯಾಟರಿ-ಆಸ್-ಎ-ಸರ್ವೀಸ್’ (BaaS) ಆಯ್ಕೆಯನ್ನು ನೀಡಿದೆ. ಈ ಸೌಲಭ್ಯವನ್ನು ಆರಿಸಿಕೊಂಡರೆ ಬೈಕ್‌ನ ಬೆಲೆ ಕೇವಲ ₹1.99 ಲಕ್ಷಕ್ಕೆ ಇಳಿಕೆಯಾಗಲಿದೆ. ಇದು ಎಲೆಕ್ಟ್ರಿಕ್ ಬೈಕ್ ಖರೀದಿಸಲು ಆಸಕ್ತಿ ಇರುವವರಿಗೆ ಅತ್ಯುತ್ತಮ ಆರ್ಥಿಕ ಆಯ್ಕೆಯಾಗಿದೆ.

ಎಪ್ರಿಲ್‌ 10ರಿಂದ ರಾಯಲ್ ಎನ್‌ಫೀಲ್ಡ್ ಇವಿ ಬೈಕ್‌ ಬುಕ್ಕಿಂಗ್‌

ಈ ಹೊಸ ಎಲೆಕ್ಟ್ರಿಕ್ ಬೈಕ್‌ನ ಬುಕಿಂಗ್ ಪ್ರಕ್ರಿಯೆಯು ಏಪ್ರಿಲ್ 10 ರಿಂದ ಬೆಂಗಳೂರಿನಲ್ಲಿ ಪ್ರಾರಂಭವಾಗಲಿದೆ. ಮೊದಲ ಹಂತದಲ್ಲಿ ಬೆಂಗಳೂರಿನ ಗ್ರಾಹಕರಿಗೆ ಆದ್ಯತೆ ನೀಡಲಾಗುತ್ತಿದ್ದು, ಮೇ ತಿಂಗಳ ಅಂತ್ಯದಿಂದ ಬೈಕ್ ವಿತರಣೆಯು ಆರಂಭವಾಗಲಿದೆ ಎಂದು ಕಂಪನಿ ತಿಳಿಸಿದೆ.

ಫ್ಲೈಯಿಂಗ್ ಫ್ಲೀ C6: ಪ್ರಮುಖ ವೈಶಿಷ್ಟ್ಯಗಳು

Also Read ; ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣ ಇನ್ಮುಂದೆ ನಗದುಮುಕ್ತ..! ಏಪ್ರಿಲ್​ 10ರಿಂದ ಯುಪಿಐ ಪಾವತಿಗೆ ಮಾತ್ರ ಅವಕಾಶ

‘ಫ್ಲೈಯಿಂಗ್ ಫ್ಲೀ’ ಎಂಬ ಹೆಸರು ರಾಯಲ್ ಎನ್‌ಫೀಲ್ಡ್‌ನ ಇತಿಹಾಸಕ್ಕೆ ಸಂಬಂಧಿಸಿದ್ದಾಗಿದೆ. 1940 ರ ದಶಕದಲ್ಲಿ ಎರಡನೇ ಮಹಾಯುದ್ಧದ ಸಮಯದಲ್ಲಿ ಸೈನಿಕರಿಗಾಗಿ ಸಿದ್ಧಪಡಿಸಲಾಗಿದ್ದ ಹಗುರವಾದ ಬೈಕ್‌ಗಳಿಂದ ಸ್ಫೂರ್ತಿ ಪಡೆದು ಈ ಹೊಸ ಬ್ರ್ಯಾಂಡ್ ಅನ್ನು ರೂಪಿಸಲಾಗಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಹಾವಳಿ ಹೆಚ್ಚಿದ್ದರೂ, ಎಲೆಕ್ಟ್ರಿಕ್ ಮೋಟಾರ್ ಸೈಕಲ್ ವಿಭಾಗ ಇನ್ನೂ ಆರಂಭಿಕ ಹಂತದಲ್ಲಿದೆ. ರಾಯಲ್ ಎನ್‌ಫೀಲ್ಡ್‌ನ ಈ ಪ್ರವೇಶವು ಓಲಾ ಎಲೆಕ್ಟ್ರಿಕ್ (ರೋಡ್‌ಸ್ಟರ್), ಅಲ್ಟ್ರಾವೈಲೆಟ್ ಮತ್ತು ಮ್ಯಾಟರ್ ಮೋಟಾರ್ಸ್‌ನಂತಹ ಕಂಪನಿಗಳಿಗೆ ಪ್ರಬಲ ಪೈಪೋಟಿ ನೀಡಲಿದೆ.

royal enfield flying flea c6 electric bike launch price specifications

Exit mobile version