Royal Enfield EV: ಒಂದು ಚಾರ್ಜ್‌ 154 ಕಿಮೀ ಮೈಲೇಜ್! ರಸ್ತೆಗಿಳಿದ ರಾಯಲ್ ಎನ್‌ಫೀಲ್ಡ್ ಇವಿ, ಬೆಲೆ ಎಷ್ಟು ಗೊತ್ತಾ?

BaaS (Battery-as-a-Service) ಮಾದರಿಯನ್ನು ಆರಿಸಿಕೊಂಡರೆ ಆರಂಭಿಕ ಖರೀದಿ ದರ ಬರೋಬ್ಬರಿ 80 ಸಾವಿರ ರೂಪಾಯಿ ಕಡಿಮೆಯಾಗಲಿದೆ! ಆದರೆ, ಬ್ಯಾಟರಿ ಬಳಕೆಗೆ ಪ್ರತ್ಯೇಕವಾಗಿ ಮಾಸಿಕ ಚಂದಾದಾರಿಕೆ (Subscription fee) ಪಾವತಿಸಬೇಕಾಗುತ್ತದೆ 

ಬುಲೆಟ್‌ ಪ್ರಿಯರು ಹಲವು ಸಮಯಗಳಿಂದ ಕಾಯುತ್ತಿದ್ದ ರಾಯಲ್‌ ಎಲ್‌ಫೀಲ್ಡ್‌ ಇವಿ ಬೈಕ್‌ ಕೊನೆಗೂ ರಸ್ತೆಗೆ ಇಳಿದಿದೆ. ರಾಯಲ್ ಎನ್‌ಫೀಲ್ಡ್ (Royal Enfield) ತನ್ನ ಬಹುನಿರೀಕ್ಷಿತ ಹೊಸ ಎಲೆಕ್ಟ್ರಿಕ್ ಬೈಕ್ ‘ಫ್ಲೈಯಿಂಗ್ ಫ್ಲೀ ಸಿ6’ (Flying Flea C6) ಭಾರತದಲ್ಲಿಯೇ ಮೊದಲ ಬಾರಿಗೆ ಬೆಂಗಳೂರಲ್ಲಿ ಅಧಿಕೃತವಾಗಿ ವಿತರಣೆ ಆರಂಭಿಸಿದೆ.

ಭಾರತದ ಗ್ರಾಹಕರ ಮನಗೆದ್ದಿರುವ ರಾಯಲ್‌ ಎನ್‌ಫೀಲ್ಡ್‌ ಇದೀಗ ಇವಿ ಆವೃತ್ತಿಯಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ (BTM Layout) ಕಂಪನಿಯು ತನ್ನ ಪ್ರಮುಖ ಕೇಂದ್ರೀಯ ಸೇವಾ ಹಬ್ ಅನ್ನು ಸ್ಥಾಪಿಸಿದ್ದು, ಗ್ರಾಹಕರಿಗೆ ಬೈಕ್‌ ವಿತರಿಸುತ್ತಿದೆ. ಇವಿ ಬೈಕ್‌ನ ವಿಶೇಷತೆ ಏನು ? ಬೆಲೆ ಎಷ್ಟು ಅನ್ನೋ ಸಂಫೂರ್ಣ ಮಾಹಿತಿ ಇಲ್ಲಿದೆ.

ರಾಯಲ್ ಎನ್‌ಫೀಲ್ಡ್ ಈ ಇವಿ ಬೈಕ್ ಅನ್ನು ಪ್ರೀಮಿಯಂ ಅರ್ಬನ್ ಮೊಬಿಲಿಟಿ ಶ್ರೇಣಿಯಲ್ಲಿ ಬಿಡುಗಡೆ ಮಾಡಿದ್ದು, ಗ್ರಾಹಕರಿಗೆ ಎರಡು ಆಯ್ಕೆಗಳನ್ನು ನೀಡಿದೆ.

ನೀವು BaaS (Battery-as-a-Service) ಮಾದರಿಯನ್ನು ಆರಿಸಿಕೊಂಡರೆ ಆರಂಭಿಕ ಖರೀದಿ ದರ ಬರೋಬ್ಬರಿ 80 ಸಾವಿರ ರೂಪಾಯಿ ಕಡಿಮೆಯಾಗಲಿದೆ! ಆದರೆ, ಬ್ಯಾಟರಿ ಬಳಕೆಗೆ ಪ್ರತ್ಯೇಕವಾಗಿ ಮಾಸಿಕ ಚಂದಾದಾರಿಕೆ (Subscription fee) ಪಾವತಿಸಬೇಕಾಗುತ್ತದೆ

ರಾಯಲ್‌ ಎನ್‌ಫೀಲ್ಡ್‌ ಇವಿ ಬೈಕ್‌ : ಬ್ಯಾಟರಿ ಸಾಮರ್ಥ್ಯ ಮತ್ತು ಮೈಲೇಜ್ (Range)

Also Read : ಲೈಸೆನ್ಸ್ ಬೇಡ, ರಿಜಿಸ್ಟ್ರೇಷನ್ ಬೇಡ: ಕಡಿಮೆ ಬೆಲೆಯ 5 ಇ-ಸ್ಕೂಟರ್‌ಗಳು

ರಾಯಲ್‌ ಎನ್‌ಫೀಲ್ಡ್‌ ಇವಿ ಬೈಕ್‌ : ಹೈಟೆಕ್ ಫೀಚರ್‌ಗಳ ಧಮಾಕಾ

ಹಳೇ ಕಾಲದ ಗಿರ್ಡರ್ ಫೋರ್ಕ್ (Girder Fork) ಸಸ್ಪೆನ್ಷನ್ ಹೊಂದಿರುವ ಈ ಬೈಕ್ ಲುಕ್‌ನಲ್ಲಿ ಕ್ಲಾಸಿಕ್ ಆಗಿದ್ದರೂ, ಫೀಚರ್‌ಗಳಲ್ಲಿ ಸಖತ್ ಹೈಟೆಕ್ ಆಗಿದೆ:

Also Read : ಕಾರು ಖರೀದಿಸುವವರಿಗೆ ಗುಡ್ ನ್ಯೂಸ್! ಮಹೀಂದ್ರಾ EV ಮೇಲೆ ಭರ್ಜರಿ ಡಿಸ್ಕೌಂಟ್

ರಾಯಲ್‌ ಎನ್‌ಫೀಲ್ಡ್‌ ಇವಿ ಬೈಕ್‌ ಬುಕಿಂಗ್ ಮಾಡುವುದು ಹೇಗೆ ?

ಬೆಂಗಳೂರಿನಲ್ಲಿ ಕಂಪನಿಯು ತನ್ನ ಪ್ರಥಮ ಪ್ರತ್ಯೇಕ ‘ಫ್ಲೈಯಿಂಗ್ ಫ್ಲೀ ಗ್ಯಾಲರಿ’ ಶೋರೂಮ್ ಅನ್ನು ತೆರೆದಿದ್ದು, ಬುಕಿಂಗ್ ಈಗಾಗಲೇ ಚಾಲ್ತಿಯಲ್ಲಿದೆ. ಆಸಕ್ತ ಗ್ರಾಹಕರು ಅಧಿಕೃತ ವೆಬ್‌ಸೈಟ್ ಅಥವಾ ಬೆಂಗಳೂರಿನ ಗ್ಯಾಲರಿಗೆ ಭೇಟಿ ನೀಡಿ ಟೆಸ್ಟ್ ರೈಡ್ ಪಡೆದು ಕಾಯ್ದಿರಿಸಬಹುದಾಗಿದೆ. ಸದ್ಯಕ್ಕೆ ಇದು ಸ್ಟಾರ್ಮ್ ಬ್ಲ್ಯಾಕ್ ಮತ್ತು ಫ್ಲೀ ಗ್ರೀನ್ ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ.

royal enfield flying flea c6 electric bike launched price range bengaluru

Exit mobile version