Kannada News Next

automobile

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 440 : ಬಿಡುಗಡೆಗೆ ಸಿದ್ಧವಾಗಿದೆ ಹೊಸ ಅಡ್ವೆಂಚರ್ ಬೈಕ್: ಬೆಲೆ ಎಷ್ಟು ? ಏನಿದ ಫೀಚರ್ಸ್

ಹಿಮಾಲಯನ್ 440‌ ಹಲವು ವೈಶಿಷ್ಟ್ಯತೆಗಳನ್ನು ಹೊಂದಿದೆ. ಅದ್ರಲ್ಲೂ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿದ್ದು, ಶಕ್ತಿಶಾಲಿ ಆವೃತ್ತಿಯಾಗಿ ಕಾಣಿಸಿಕೊಳ್ಳಲಿದೆ.

By Arun Gundmi | ಅರುಣ್‌ ಗುಂಡ್ಮಿ Editor-in-Chief
Photo: Image Credit : royal enfield himalayan 440

ಭಾರತದ ಆಟೋಮೊಬೈಲ್‌ ಕ್ಷೇತ್ರದಲ್ಲಿ 'ರಾಯಲ್ ಎನ್‌ಫೀಲ್ಡ್' (Royal Enfield) ಬೈಕ್‌ಗಳ ಬಗ್ಗೆ ಜನರಿಗೆ ಅತೀ ಹೆಚ್ಚು ಕ್ರೇಜ್‌ ಇದೆ. ಅದ್ರಲ್ಲೂ ಅಡ್ವೇಂಚರ್‌ ರೈಡರ್ಸ್‌ಗಳಿಗೆ(Adventure Riders) ಈಗಾಗಲೇ ಹಲವು ಮಾದರಿಯ ಬೈಕ್‌ಗಳನ್ನು ಈಗಾಗಲೇ ಮಾರುಕಟ್ಟೆಗೆ ಪರಿಚಯಿಸಿದೆ. ಇದೀಗ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ತನ್ನ ಬಹುನಿರೀಕ್ಷಿತ 'ಹಿಮಾಲಯನ್ 440' (Himalayan 440) ಬಿಡುಗಡೆಗೆ ಸಜ್ಜಾಗಿದೆ.

ಹಿಮಾಲಯನ್ 440‌ ಹಲವು ವೈಶಿಷ್ಟ್ಯತೆಗಳನ್ನು ಹೊಂದಿದೆ. ಅದ್ರಲ್ಲೂ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿದ್ದು, ಶಕ್ತಿಶಾಲಿ ಆವೃತ್ತಿಯಾಗಿ ಕಾಣಿಸಿಕೊಳ್ಳಲಿದೆ. ಗೂಗಲ್‌ ಟ್ರೆಂಡ್ಸ್‌ನಲ್ಲಿಯೂ ಈ ಬೈಕ್‌ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಹಾಗಾದ್ರೆ ಈ ಬೈಕ್‌ನಲ್ಲಿ ಅಂತಹ ಫೀಚರ್ಸ್‌ ಏನಿದೆ ಅನ್ನೋ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ ನೋಡಿ.

ಹಿಮಾಲಯನ್ 440 ಹೈಲೈಟ್ಸ್ (Key Highlights)

  • ಎಂಜಿನ್ ಸಾಮರ್ಥ್ಯ: 443cc, ಏರ್/ಆಯಿಲ್-ಕೂಲ್ಡ್ ಎಂಜಿನ್. ನಿರೀಕ್ಷಿತ ಬೆಲೆ: ₹2.50 ಲಕ್ಷ (ಎಕ್ಸ್-ಶೋರೂಂ).

  • ಬಿಡುಗಡೆ ಯಾವಾಗ ? ಸೆಪ್ಟೆಂಬರ್ 2026 (ನಿರೀಕ್ಷಿತ).

  • ವಿಶೇಷತೆ: ಆಫ್-ರೋಡ್ ರೈಡಿಂಗ್‌ಗಾಗಿ 21-ಇಂಚಿನ ಫ್ರಂಟ್ ವೀಲ್.

ಎಂಜಿನ್ ಮತ್ತು ಪರ್ಫಾರ್ಮೆನ್ಸ್ (Engine & Performance)

ಮಾರುಕಟ್ಟೆಗೆ ಎಂಟ್ರಿ ಕೊಡಲಿರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 440 ಬೈಕ್, ಮುಂಬರುವ ಸ್ಕ್ರಾಮ್ 440 (Scram 440) ನಲ್ಲಿ ಬಳಸಲಾದ ಅದೇ 443cc ಸಿಂಗಲ್-ಸಿಲಿಂಡರ್, ಏರ್/ಆಯಿಲ್-ಕೂಲ್ಡ್ ಎಂಜಿನ್ ಅನ್ನು ಹೊಂದಿರಲಿದೆ. ಈ ಬೈಕ್‌ನ ಮತ್ತೊಂದು ವಿಶೇಷತೆಯೇ ಇಂಜಿನ್‌. ಸುಮಾರು 25.4 bhp ಪವರ್ ಮತ್ತು 34 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ನೀಡಲಾಗುತ್ತಿದ್ದು, ಇದು ಆಫ್-ರೋಡಿಂಗ್ ಹಾಗೂ ದೂರದ ಹೈವೇ ಪ್ರಯಾಣಕ್ಕೆ ಅತ್ಯುತ್ತಮವಾದ ಪವರ್ ಮತ್ತು ಟಾರ್ಕ್ ಅನ್ನು ಒದಗಿಸಲಿದೆ.

ವಿನ್ಯಾಸ ಮತ್ತು ವೈಶಿಷ್ಟ್ಯಗಳು (Design & Features)

ಹಳೆಯ ಹಿಮಾಲಯನ್ 440ನ 'ರಗಡ್' ವಿನ್ಯಾಸವನ್ನು ಇಷ್ಟಪಡುವವರಿಗಾಗಿ ಈ ಬೈಕ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

  • ವೀಲ್ಹ್‌ : ಈ ಬೈಕ್‌ ಚಕ್ರವನ್ನು ಕೂಡ ವಿಶಿಷ್ಟವಾಗಿ ವಿನ್ಯಾಸ ಮಾಡಲಾಗಿದೆ. ಮುಂಭಾಗದಲ್ಲಿ 21 ಇಂಚಿನ ದೊಡ್ಡ ಚಕ್ರ ಹೊಂದಿರಲಿದ್ದು, ಬೆಟ್ಟ ಗುಡ್ಡದ ರಸ್ತೆಗಳಲ್ಲಿ ಸಂಚಾರ ಮಾಡಲು ಹೆಚ್ಚು ಸಹಕಾರಿಯಾಗಿದೆ.

  • ಸಸ್ಪೆನ್ಷನ್: ಇದರ ಲಾಂಗ್-ಟ್ರಾವೆಲ್ ಸಸ್ಪೆನ್ಷನ್ (Long-travel suspension) ಎಂತಹ ಕೆಟ್ಟ ರಸ್ತೆಗಳಲ್ಲೂ ರೈಡರ್‌ಗೆ ಆರಾಮದಾಯಕ ಅನುಭವ ನೀಡುತ್ತದೆ.

  • ಫೀಚರ್ಸ್: ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ ಟ್ರಿಪ್ಪರ್ ನ್ಯಾವಿಗೇಷನ್, ರೈಡಿಂಗ್ ಮೋಡ್ಸ್, ಮತ್ತು ಆಫ್-ರೋಡ್‌ಗೆ ಪೂರಕವಾದ ಸ್ವಿಚೇಬಲ್ ABS (Switchable ABS) ನಂತಹ ಆಧುನಿಕ ಫೀಚರ್ಸ್‌ಗಳನ್ನು ಇದರಲ್ಲಿ ನಿರೀಕ್ಷೆ ಮಾಡಬಹುದಾಗಿದೆ.

ಹಿಮಾಲಯನ್ 450 ಮತ್ತು 440 ನಡುವಿನ ವ್ಯತ್ಯಾಸವೇನು? (Himalayan 450 vs 440)

ಮಾರುಕಟ್ಟೆಗೆ ಈಗಾಗಲೇ ಹಿಮಾಲಯನ್ 450 ಬೈಕ್ 452cc ಯ ಲಿಕ್ವಿಡ್-ಕೂಲ್ಡ್ ಎಂಜಿನ್ ಎಂಟ್ರಿ ಕೊಟ್ಟಿದ್ದು, ಇತರ ಬೈಕ್‌ಗಳಿಗೆ ಹೋಲಿಕೆ ಮಾಡಿದ್ರೆ ಕೊಂಚ ದುಬಾರಿಯಾಗಿದೆ (ಬೆಲೆ ₹3 ಲಕ್ಷಕ್ಕೂ ಅಧಿಕ). ಆದರೆ ಇದೀಗ ಹೊಸದಾಗಿ ಎಂಟ್ರಿ ಕೊಡಲಿರುವ ಹಿಮಾಲಯನ್ 440 ಬೈಕ್ ಏರ್/ಆಯಿಲ್-ಕೂಲ್ಡ್ ಎಂಜಿನ್ ಹೊಂದಿರಲಿದ್ದು, ಮೆಕ್ಯಾನಿಕಲ್ ಆಗಿ ಹೆಚ್ಚು ಸರಳವಾಗಿರಲಿದೆ. ಇದರ ನಿರ್ವಹಣಾ ವೆಚ್ಚವೂ (Maintenance cost) ಕಡಿಮೆಯಾಗುವ ನಿರೀಕ್ಷೆಯಿದೆ.

ಬೆಲೆ ಮತ್ತು ಬಿಡುಗಡೆ ಯಾವಾಗ ? (Price and Launch)

ಮಾರುಕಟ್ಟೆ ವರದಿಗಳ ಪ್ರಕಾರ, ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 440 ಬೈಕ್ 2026 ರ ಸೆಪ್ಟೆಂಬರ್ ತಿಂಗಳಿನಲ್ಲಿ ಭಾರತದಲ್ಲಿ ಬಿಡುಗಡೆ ಆಗುವ ಸಾಧ್ಯತೆಯಿದೆ. ಇನ್ನು ಬೆಲೆಯ ವಿಚಾರದಲ್ಲಿಯೂ ಈ ಬೈಕ್‌ನ ಬೆಲೆ ಅಂದಾಜು ₹2.50 ಲಕ್ಷ (ಎಕ್ಸ್-ಶೋರೂಂ)ಕ್ಕೆ ಬಿಡುಗಡೆ ಆಗಲಿದೆ. ಈ ಬೈಕ್ ಮಾರುಕಟ್ಟೆಯಲ್ಲಿ ಯೆಜ್ಡಿ ಅಡ್ವೆಂಚರ್ (Yezdi Adventure) ಮತ್ತು ಕೆಟಿಎಂ 250 ಅಡ್ವೆಂಚರ್ (KTM 250 Adventure) ಬೈಕ್‌ಗಳಿಗೆ ತೀವ್ರ ಪೈಪೋಟಿ ನೀಡಲಿದೆ.

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 440 ಯಾರಿಗೆ ಈ ಬೈಕ್ ಸೂಕ್ತ ?

ಹಿಮಾಲಯಯನ್‌ 440 ಬೈಕ್‌ ಅತ್ಯಂತ ಶಕ್ತಿಶಾಲಿ ಬೈಕ್‌ಗಳಲ್ಲಿ ಒಂದಾಗಿದೆ. ಈ ಬೈಕ್‌ ದೈನಂದಿನ ಬಳಕೆಗೆ ಹೆಚ್ಚು ಸೂಕ್ತವಾಗಿದ್ದು, ಆಪ್‌ ರೋಡ್‌ ಬೈಕ್‌ ಹುಡುಕುತ್ತಾ ಇರುವವರಿಗೆ ಹಿಮಾಲಯನ್ 440 ನಿಮಗೆ ಬೆಸ್ಟ್ ಚಾಯ್ಸ್‌ ಆಗಿರಲಿದೆ.