ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣ ಇನ್ಮುಂದೆ ನಗದುಮುಕ್ತ..! ಏಪ್ರಿಲ್​ 10ರಿಂದ ಯುಪಿಐ ಪಾವತಿಗೆ ಮಾತ್ರ ಅವಕಾಶ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಪಾರದರ್ಶಕ ಆಡಳಿತ ವ್ಯವಸ್ಥೆಗಾಗಿ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಇನ್ಮುಂದೆ ಹೆದ್ದಾರಿಗಳಲ್ಲಿ (Toll Payment) ನಗದುಮುಕ್ತ ವ್ಯವಹಾರ ನಡೆಯಲಿದೆ ಎಂದು ಘೋಷಣೆ ಮಾಡಿದೆ. ಈ ಮಹತ್ವದ ಕ್ರಮವು ಏಪ್ರಿಲ್​ 10ರಿಂದಲೇ ಜಾರಿಗೆ ಬರುತ್ತಿದ್ದು, ಏಪ್ರಿಲ್​ 10ರ ಬಳಿಕ ರಾಷ್ಟ್ರೀಯ ಹೆದ್ದಾರಿಗಳ ಟೋಲ್​ ಪ್ಲಾಜಾಗಳಲ್ಲಿ ಹಣ ಸ್ವೀಕರಿಸುವ ಕ್ರಮ ಇರುವುದಿಲ್ಲ ಎಂದು ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.

ಈಗಾಗಲೇ ಫಾಸ್ಟ್​ಟ್ಯಾಗ್​ ವ್ಯವಸ್ಥೆಯ ಮೂಲಕ ಭಾಗಶಃ ನಗದುಮುಕ್ತ ವ್ಯವಹಾರಗಳನ್ನೇ ಟೋಲ್​ ಪ್ಲಾಜಾಗಳಲ್ಲಿ ನಡೆಸಲಾಗುತ್ತಿತ್ತು. ಆದರೆ ಫಾಸ್ಟ್​ಟ್ಯಾಗ್​ ಇಲ್ಲದವರಿಗೆ ಹೆದ್ದಾರಿ ಟೋಲ್​ಪ್ಲಾಜಾಗಳಲ್ಲಿ ಹಣ ಪಾವತಿಗೆ ಅವಕಾಶ ನೀಡಲಾಗಿತ್ತು. ಆದರೆ ಇನ್ಮೇಲೆ ಫಾಸ್ಟ್​ಟ್ಯಾಗ್​ ಇಲ್ಲದವರಿಗೆ ಟೋಲ್​ ಪ್ಲಾಜಾಗಳಲ್ಲಿ ಕೇವಲ ಯುಪಿಐ ಮೂಲಕ ಮಾತ್ರ ಹಣ ಪಾವತಿಗೆ ಅವಕಾಶ ನೀಡಲಾಗಿದೆ. ಸಾಮಾನ್ಯ ದರಕ್ಕಿಂದ 25 ಪರ್ಸೆಂಟ್​ ಹೆಚ್ಚಿನ ದಂಡ ಪಾವತಿಸಿ ಹೆದ್ದಾರಿಗಳಲ್ಲಿ ಪ್ರವೇಶ ಮಾಡಬಹುದಾಗಿದೆ.

ಇದನ್ನೂ ಓದಿ: ಭಾರತದಲ್ಲಿ ಲಭ್ಯವಿರುವ 5 ವಿಶ್ವಾಸರ್ಹ ಎಲೆಕ್ಟ್ರಿಕ್‌ ಸ್ಕೂಟರ್‌ಗಳು: ಟಿವಿಎಸ್‌ ಐಕ್ಯೂಬ್‌ ನಿಂದ ಸುಜುಕಿ ಇ–ಆಕ್ಸೆಸ್‌ ವರೆಗೆ

ಫಾಸ್ಟ್​ ಟ್ಯಾಗ್​ ಅಥವಾ ಯುಪಿಐ ಪಾವತಿ ಎರಡನ್ನೂ ಮಾಡಲು ನಿರಾಕರಿಸುವ ವಾಹನಗಳನ್ನು ನಿರ್ಬಂಧಿಸಲು ಟೋಲ್​ಗಳಲ್ಲಿ ಅವಕಾಶ ನೀಡಲಾಗಿದೆ. ಈ ಮೊದಲು ಸರ್ಕಾರದ ಯಾವುದೆ ಗುರುತಿನ ಚೀಟಿಗಳನ್ನು ತೋರಿಸಿ ಖಾಸಗಿ ವಾಹನಗಳಲ್ಲಿ ಟೋಲ್​ ವಿನಾಯಿತಿ ಪಡೆಯಲು ಅವಕಾಶ ನೀಡಲಾಗಿತ್ತು. ಆದರೆ ಎಕ್ಸೆಂಪ್ಟೆಡ್ ಫಾಸ್ಟ್‌ಟ್ಯಾಗ್ ಹೊಂದಿರುವ ವಾಹನಗಳಿಗೆ ಮಾತ್ರ ಇನ್ಮುಂದೆ ಟೋಲ್​ ವಿನಾಯಿತಿ ಸಿಗಲಿದೆ. ಇದನ್ನು ಹೊರತುಪಡಿಸಿ ಯಾವುದೇ ಸರ್ಕಾರಿ ಗುರುತಿನ ಚೀಟಿಗಳು ಟೋಲ್​ಮುಕ್ತ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.

Exit mobile version