ಕೇಂದ್ರ ಸರ್ಕಾರದಿಂದ ‘ಅಗತ್ಯ ವಸ್ತುಗಳ ಕಾಯ್ದೆ’ ಜಾರಿ : ಕಾಳಸಂತೆಯಲ್ಲಿ ಸಿಲಿಂಡರ್​ ಮಾರುವವರೇ ಎಚ್ಚರ

ದೇಶದಲ್ಲಿ ಇಂಧನ ಅಭಾವ ತಡೆಗಟ್ಟಲು ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಕಾಯ್ದೆ-1955 ಜಾರಿಗೆ ತಂದಿದೆ.

ಇಸ್ರೇಲ್​ ಹಾಗೂ ಇರಾನ್​ ನಡುವೆ ಯುದ್ಧದ ಭೀತಿ ಹೆಚ್ಚುತ್ತಲೇ ಇದೆ. ಇದು ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಭಾರತದಲ್ಲಿ ಎಲ್​ಪಿಜಿ ಸಿಲಿಂಡರ್​ಗಳ ಅಭಾವ ಉಂಟಾಗುವ ಸಾಧ್ಯತೆಇರುವುದರಿಂದ ಕಾಳಸಂತೆಗಳಲ್ಲಿ ಸಿಲಿಂಡರ್​ ಮಾರಾಟ ತಡೆಗೆ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ.

ಹೌದು..!ದೇಶದಲ್ಲಿ ಇಂಧನ ಅಭಾವ ತಡೆಗಟ್ಟಲು ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಕಾಯ್ದೆ-1955 ಜಾರಿಗೆ ತಂದಿದೆ. ಯುದ್ಧದ ಸಂದರ್ಭವನ್ನು ಬಳಸಿಕೊಂಡು ಎಲ್‌ಪಿಜಿ ಸಿಲಿಂಡರ್‌ಗಳನ್ನು ಅಕ್ರಮವಾಗಿ ದಾಸ್ತಾನು ಮಾಡುವುದು ಅಥವಾ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದನ್ನು ತಡೆಯುವುದು ಈ ಕಾಯ್ದೆಯ ಪ್ರಮುಖ ಉದ್ದೇಶವಾಗಿದೆ. ಅಲ್ಲದೇ ಒಂದು ವೇಳೆ ಎಲ್​ಪಿಜಿ ಇಂಧನ ಪೂರೈಕೆಯಲ್ಲಿ ಅಭಾವ ಉಂಟಾದಲ್ಲಿ ಮಾರುಕಟ್ಟೆಯಲ್ಲಿ ಸಿಲಿಂಡರ್​ಗಳ ಬೆಲೆ ಏರಿಕೆ ಮಾಡದಂತೆ ಈ ಕಾಯ್ದೆಯು ಕಾಪಾಡುತ್ತದೆ.

ಇದನ್ನೂ ಓದಿ: ವೈದ್ಯಾಧಿಕಾರಿಗಳೊಂದಿಗಿನ ಸರ್ಕಾರದ ಸಂಧಾನ ಸಭೆ ಸಕ್ಸಸ್​ : ಅರ್ನಿದಿಷ್ಟಾವಧಿ ಮುಷ್ಕರ ವಾಪಸ್​

ಈ ಕಾಯ್ದೆ ಜಾರಿಯಾದ ಬಳಿಕ ಎಲ್ಪಿಜಿ ಸಿಲಿಂಡರ್​ಗಳ ಕೃತಕ ಅಭಾವ ಸೃಷ್ಠಿಸುವುದು ಅಪರಾಧಕ್ಕೆ ಸಮ. ಯಾರಾದರೂ ಪೂರೈಕೆಯಲ್ಲಿ ವ್ಯತ್ಯಯ ಉಂಟುಮಾಡಿದಲ್ಲಿ ಅಂತವರ ವಿರುದ್ಧ ಕಠಿಣ ಕ್ರಮ ಜಾರಿಯಾಗಲಿದೆ.

Exit mobile version