ಗೃಹಲಕ್ಷ್ಮಿ ಕೋ-ಆಪರೇಟಿವ್ ಬ್ಯಾಂಕ್ ಸದಸ್ಯತ್ವ ಯಾರಿಗೆ ಸಿಗುತ್ತೆ ? ಇಂದೇ ಪಡೆಯಿರಿ ₹ 3 ಲಕ್ಷದವರೆಗೆ ಸಾಲ ಸೌಲಭ್ಯ

₹30,000 ದಿಂದ ₹3 ಲಕ್ಷದವರೆಗೆ ಸಾಲ ಸೌಲಭ್ಯ: ಸಣ್ಣ ವ್ಯಾಪಾರ, ಕರಕುಶಲ ಉದ್ಯಮ, ಟೈಲರಿಂಗ್, ಬ್ಯೂಟಿ ಪಾರ್ಲರ್ ಅಥವಾ ಹೈನುಗಾರಿಕೆ ಆರಂಭಿಸಲು ಗೃಹಲಕ್ಷ್ಮಿಯರಿಗೆ ಕನಿಷ್ಠ ₹30,000 ದಿಂದ ಗರಿಷ್ಠ ₹3,00,000 ವರೆಗೆ ಸುಲಭ ಸಾಲ (Easy Loan) ಸಿಗಲಿದೆ.

Gruha Lakshmi Bank Membership and Benefits: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಮತ್ತೊಂದು ಭರ್ಜರಿ ಗುಡ್ ನ್ಯೂಸ್ ನೀಡಿದೆ. ಗೃಹಲಕ್ಷ್ಮಿ ಯೋಜನೆಯಡಿ ₹2,000 ಹಣ ಪಡೆಯುತ್ತಿರುವ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ದೇಶದಲ್ಲೇ ಮೊದಲ ಬಾರಿಗೆ ವಿಶೇಷ “ಗೃಹಲಕ್ಷ್ಮಿ ಮಹಿಳಾ ಸಹಕಾರಿ ಬ್ಯಾಂಕ್” (Gruha Lakshmi Co-operative Bank) ಸ್ಥಾಪನೆಗೆ ಚಾಲನೆ ನೀಡಲಾಗಿದೆ. ಈ ಬ್ಯಾಂಕ್‌ನ ಸದಸ್ಯತ್ವ ಯಾರಿಗೆ ಸಿಗುತ್ತದೆ? ಯೋಜನೆ ಫಲಾನುಭವಿಗಳಿಗೆ ಏನು ಲಾಭ? ಇಲ್ಲಿದೆ ಸಂಪೂರ್ಣ ವಿವರ.

ಗೃಹಲಕ್ಷ್ಮಿ ಬ್ಯಾಂಕ್ ಸದಸ್ಯತ್ವ ಯಾರಿಗೆ ಸಿಗುತ್ತೆ ?

ಕರ್ನಾಟಕದಲ್ಲಿ ಮಹಿಳೆಯರಿಗಾಗಿಯೇ ಆರಂಭಿಸಲಾಗುತ್ತಿರುವ ಸಹಕಾರಿ ಬ್ಯಾಂಕ್.‌ ಅದ್ರಲ್ಲೂ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗಾಗಿಯೇ ಈ ಬ್ಯಾಂಕ್‌ ಅನ್ನು ವಿನ್ಯಾಸಗೊಳಿಸಲಾಗಿದೆ.

ಗೃಹಲಕ್ಷ್ಮಿ ಬ್ಯಾಂಕ್ ತಿಂಗಳಿಗೆ ₹200 ಉಳಿತಾಯ ಮಾಡಿದ್ರೆ ಸಿಗುವ ಲಾಭಗಳೇನು?

ಹೌದು, ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಹಣ ಪಡೆಯುತ್ತಿರುವ ಮಹಿಳೆಯರು ಈ ಬ್ಯಾಂಕ್‌ನಲ್ಲಿ ಖಾತೆ ತೆರೆದು ಆರ್ಥಿಕ ಲಾಭ ಪಡೆಯಬಹುದು. ಈ ಬ್ಯಾಂಕ್‌ನ ಪ್ರಮುಖ ಉಳಿತಾಯ ಸೂತ್ರ ಹೀಗಿದೆ:

ಗೃಹಲಕ್ಷ್ಮೀ ಬ್ಯಾಂಕ್‌ನಿಂದ ಜನರಿಗೆ (ಮಹಿಳೆಯರಿಗೆ) ಸಿಗುವ ಅಸಲಿ ಲಾಭಗಳೇನು?

ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಮತ್ತು ಸ್ವಂತ ಉದ್ಯೋಗ ಪ್ರಾರಂಭಿಸಲು ಈ ಬ್ಯಾಂಕ್ ಹಲವು ಸೌಲಭ್ಯಗಳನ್ನು ನೀಡುತ್ತದೆ:

Also Read : Gruhalakshmi Scheme : ಈ ಮಹಿಳೆಯರಿಗೆ ಇನ್ಮುಂದೆ ಸಿಗಲ್ಲ ಗೃಹಲಕ್ಷ್ಮಿ ಹಣ ! ಸರ್ಕಾರದ ‘ಅನರ್ಹರ’ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಇಂದೇ ಚೆಕ್ ಮಾಡಿ

₹30,000 ದಿಂದ ₹3 ಲಕ್ಷದವರೆಗೆ ಸಾಲ ಸೌಲಭ್ಯ: ಸಣ್ಣ ವ್ಯಾಪಾರ, ಕರಕುಶಲ ಉದ್ಯಮ, ಟೈಲರಿಂಗ್, ಬ್ಯೂಟಿ ಪಾರ್ಲರ್ ಅಥವಾ ಹೈನುಗಾರಿಕೆ ಆರಂಭಿಸಲು ಗೃಹಲಕ್ಷ್ಮಿಯರಿಗೆ ಕನಿಷ್ಠ ₹30,000 ದಿಂದ ಗರಿಷ್ಠ ₹3,00,000 ವರೆಗೆ ಸುಲಭ ಸಾಲ (Easy Loan) ಸಿಗಲಿದೆ.

ಖಾಸಗಿ ಶ್ಯೂರಿಟಿ ಅಗತ್ಯವಿಲ್ಲ: ಇದು ಮಹಿಳೆಯರೇ ಮಾಲೀಕರಾಗಿರುವ ಸಹಕಾರಿ ಸಂಘವಾಗಿರುವುದರಿಂದ, ಸಾಲ ಪಡೆಯಲು ಯಾವುದೇ ತೃತೀಯ ವ್ಯಕ್ತಿಯ ಗ್ಯಾರಂಟಿ ಅಥವಾ ಕಠಿಣ ದಾಖಲೆಗಳ ಶ್ಯೂರಿಟಿ ಬೇಕಾಗಿಲ್ಲ. ನಿಮ್ಮ 6 ತಿಂಗಳ ಉಳಿತಾಯದ ಇತಿಹಾಸವೇ ಇಲ್ಲಿ ಗ್ಯಾರಂಟಿ.

ಕಡಿಮೆ ಬಡ್ಡಿ ದರ ಹಾಗೂ ಸಬ್ಸಿಡಿ: ಇತರೆ ಖಾಸಗಿ ಬ್ಯಾಂಕ್‌ಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಮಹಿಳೆಯರಿಗೆ ಸಾಲ ಸಿಗಲಿದ್ದು, ಸರ್ಕಾರದ ಸಬ್ಸಿಡಿ ಯೋಜನೆಗಳೂ ಇದಕ್ಕೆ ಲಿಂಕ್ ಆಗಲಿವೆ.

ನಿರಂತರ ಆರ್ಥಿಕ ಭದ್ರತೆ: ಸಹಕಾರಿ ತತ್ವದಡಿ ನಡೆಯುವುದರಿಂದ ಭವಿಷ್ಯದಲ್ಲಿ ಸರ್ಕಾರಗಳು ಬದಲಾದರೂ ಈ ಬ್ಯಾಂಕ್ ಮತ್ತು ಮಹಿಳೆಯರ ಶೇರು ಹೂಡಿಕೆ ಸುರಕ್ಷಿತವಾಗಿರುತ್ತದೆ.

Also Read : RTI ನಿಯಮಗಳಿಗೆ ಹೈಕೋರ್ಟ್ ಮಹತ್ವದ ಟ್ವಿಸ್ಟ್! ಸರ್ಕಾರಿ ಅಧಿಕಾರಿಗಳ ಈ ವಿವರಗಳನ್ನು ಇನ್ಮುಂದೆ ಯಾರಿಗೂ ಕೊಡುವಂತಿಲ್ಲ!

ಗೃಹಲಕ್ಷ್ಮಿ ಬ್ಯಾಂಕ್ ಸದಸ್ಯತ್ವ ನೋಂದಣಿ ಪ್ರಕ್ರಿಯೆ ಹಾಗೂ ಅರ್ಜಿ ನಮೂನೆಗಾಗಿ ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕೃತ ಕಚೇರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.

gruha Lakshmi cooperative bank membership 3 lakh loan

Exit mobile version