BPL Card New Rules : ಕರ್ನಾಟಕದಲ್ಲಿ ನಿಲ್ಲದ ಬಿಪಿಎಲ್‌ ಕಾರ್ಡ್ ಸಮರ‌ : 4.32 ಲಕ್ಷ ಬಿಪಿಎಲ್‌ ಕಾರ್ಡ್ – ಎಪಿಎಲ್‌ಗೆ

ಕರ್ನಾಟಕದಲ್ಲಿ ಸುಮಾರು 7.76 ಲಕ್ಷ ಅನರ್ಹ ಬಿಪಿಎಲ್‌ ಕಾರ್ಡುದಾರರು ಪತ್ತೆಯಾಗಿದ್ದು, ಈಗಾಗಲೇ 4.32 ಲಕ್ಷ ಅನರ್ಹ ಬಿಪಿಎಲ್‌ ಕಾರ್ಡ್‌ಗಳನ್ನು ಎಪಿಎಲ್‌ ಕಾರ್ಡುಗಳನ್ನಾಗಿ ಪರಿವರ್ತಿಸಲಾಗಿದೆ. ತುರ್ತು ವೈದ್ಯಕೀಯ ಸೇವೆಗಾಗಿ ಕೋರಿ ಬಿಪಿಎಲ್‌ ಅರ್ಜಿ ಸಲ್ಲಿಸಿದವರಿಗೆ ಕೇವಲ 15 ದಿನಗಳಲ್ಲಿಯೇ ತುರ್ತು ಕಾರ್ಡ್‌ಗಳನ್ನಿ ವಿತರಣೆ ಮಾಡಲಾಗುತ್ತೆ

ಬೆಂಗಳೂರು : ಕರ್ನಾಟಕದಲ್ಲಿ ಬಿಪಿಎಲ್‌ ಕಾರ್ಡ್‌ ವಿರುದ್ದದ ಸರಕಾರದ ಸಮರ ಮುಂದುವರಿದೆ. ಬಿಪಿಎಲ್‌ ಕಾರ್ಡ್‌ದಾರರ ಆದಾಯದ ಮಿತಿಯನ್ನು ಹೆಚ್ಚಳ ಮಾಡುವ ಕುರಿತು ಚಿಂತನೆ ನಡೆಸಿದೆ. ಈ ಕುರಿತು ಶೀಘ್ರದಲ್ಲಿಯೇ ನಿರ್ಧಾರ ಕೈಗೊಳ್ಳಲಾಗುತ್ತದೆ.

ಕರ್ನಾಟಕದಲ್ಲಿ ಸುಮಾರು 7.76 ಲಕ್ಷ ಅನರ್ಹ ಬಿಪಿಎಲ್‌ ಕಾರ್ಡುದಾರರು ಪತ್ತೆಯಾಗಿದ್ದು, ಈಗಾಗಲೇ 4.32 ಲಕ್ಷ ಅನರ್ಹ ಬಿಪಿಎಲ್‌ ಕಾರ್ಡ್‌ಗಳನ್ನು ಎಪಿಎಲ್‌ ಕಾರ್ಡುಗಳನ್ನಾಗಿ ಪರಿವರ್ತಿಸಲಾಗಿದೆ. ತುರ್ತು ವೈದ್ಯಕೀಯ ಸೇವೆಗಾಗಿ ಕೋರಿ ಬಿಪಿಎಲ್‌ ಅರ್ಜಿ ಸಲ್ಲಿಸಿದವರಿಗೆ ಕೇವಲ 15 ದಿನಗಳಲ್ಲಿಯೇ ತುರ್ತು ಕಾರ್ಡ್‌ಗಳನ್ನಿ ವಿತರಣೆ ಮಾಡಲಾಗುತ್ತೆ ಎಂದು ಆಹಾರ ಸಚಿವ ಕೆಎಚ್‌ ಮುನಿಯಪ್ಪ ತಿಳಿಸಿದ್ದಾರೆ.

ರಾಜ್ಯ ಸರಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ಬಿಪಿಎಲ್‌ ಕಾರ್ಡ್‌ ಕಡ್ಡಾಯಗೊಳಿಸಲಾಗಿದೆ. ಈ ಹಿಂದೆ ಆದಾಯ ತೆರಿಗೆ ಪಾವತಿದಾರರು, ಸರಕಾರಿ ನೌಕರರು ಕೂಡ ಬಿಪಿಎಲ್‌ ಕಾರ್ಡ್‌ ಬಳಕೆ ಮಾಡುತ್ತಿದ್ದರು. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಬಿಪಿಎಲ್‌ ಕಾರ್ಡ್‌ ಪರಿಷ್ಕರಣೆಗೆ ಮುಂದಾಗಿದೆ. ಬಿಪಿಎಲ್‌ ಕಾರ್ಡ್‌ಗೆ ಹೊಸ ರೂಲ್ಸ್‌ ಜಾರಿಯಾಗುತ್ತಲೇ ಲಕ್ಷಾಂತರ ಕಾರ್ಡುಗಳು ರದ್ದಾಗಿದ್ದವು.

ಇದೀಗ ಆದಾಯ ಮಿತಿಯನ್ನು ಮೀರಿದವರೂ ಕೂಡ ಬಿಪಿಎಲ್‌ ಕಾರ್ಡ್‌ ಬಳಕೆ ಮಾಡುತ್ತಿದ್ರೆ, ಅಂತಹವರು ಎಪಿಎಲ್‌ ಕಾರ್ಡ್‌ದಾರರಾಗಿ ಪರಿವರ್ತನೆ ಆಗೋದಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಲವರು ಈಗಾಗಲೇ ಸ್ವಯಂ ಪ್ರೇರಿತರಾಗಿ ತಮ್ಮ ಕಾರ್ಡುಗಳನ್ನು ಎಪಿಎಲ್‌ ಆಗಿ ಪರಿವರ್ತಿಸಿಕೊಂಡಿದ್ದಾರೆ. ಉಳಿದವರಿಗೂ ಕರ್ನಾಟಕ ಸರಕಾರ ಅವಕಾಶ ಕಲ್ಪಿಸಿದೆ. ಆದರೆ ಹೊಸದಾಗಿ ಬಿಪಿಎಲ್‌ ಕಾರ್ಡ್‌ ಪಡೆದುಕೊಳ್ಳುವವರಿಗೆ ಹಲವು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ.

ಒಂದೆಡೆ ಬಿಪಿಎಲ್‌ ಕಾರ್ಡ್‌ ರದ್ದಾಗುತ್ತಿದ್ರೆ, ಮತ್ತೊಂದೆಡೆಯಲ್ಲಿ ರಾಜ್ಯ ಸರಕಾರ ಬಿಪಿಎಲ್‌ ಕಾರ್ಡುದಾರರ ಆದಾಯದ ಮಿತಿಯನ್ನು ಹೆಚ್ಚಳ ಮಾಡಲು ಮುಂದಾಗಿದೆ. ಹೀಗಾಗಿ ಸರಕಾರ ಬಿಪಿಎಲ್‌ ಕಾರ್ಡ್‌ದಾರರ ಮಿತಿಯನ್ನು ಎಷ್ಟಕ್ಕೆ ಹೆಚ್ಚಳ ಮಾಡಲಿದೆ ಅನ್ನೋದು ಇನ್ನೂ ನಿರ್ಧಾರವಾಗಿಲ್ಲ.

karnataka bpl card latest news

Bengaluru: The Karnataka government’s crackdown on ineligible BPL (Below Poverty Line) cards continues. The government is currently considering a proposal to increase the income limit for BPL cardholders, and a final decision regarding this will be taken soon.

Key Highlights:

Exit mobile version