ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 24ನೇ ಕಂತಿನ ಹಣ ಬಿಡುಗಡೆಗೆ ರೈತರು ಕಾಯುತ್ತಿದ್ದಾರೆ. ಕೇಂದ್ರ ಸರಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 24ನೇ ಕಂತು ಬಿಡುಗಡೆ ಆಗುವ ಅಧಿಕೃತ ದಿನಾಂಕವನ್ನು ಇನ್ನೂ ಘೋಷಿಸಿಲ್ಲ. ಈ ನಡುವಲ್ಲೇ ಯೋಜನೆಯಲ್ಲಿ ಕೆಲವೊಂದು ಪ್ರಮುಖ ಬದಲಾವಣೆಗಳನ್ನು ಮಾಡಿದೆ.
ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಈಗಾಗಲೇ ನೋಂದಣಿ ಮಾಡಿಸಿರುವ ರೈತರು ತಮ್ಮ ಮನೆಯಲ್ಲಿಯೇ ಕುಳಿತು ತಮ್ಮ ಅಪೂರ್ಣವಾಗಿರುವ ಮಾಹಿತಿಯನ್ನು ಪೂರ್ಣಗೊಳಿಸಬಹುದು. ತಮ್ಮ ಮೊಬೈಲ್ ಸಂಖ್ಯೆಗಳನ್ನು ಬದಲಾಯಿಸೋದಕ್ಕೆ ರೈತರು ತಕ್ಷಣವೇ ಗಮನಹರಿಸಬೇಕಾಗಿದೆ.
ರೈತರು ಈ ಯೋಜನೆಯಡಿ ಬದಲಾವಣೆ ಮಾಡಿಸುವುದಕ್ಕೆ ನೀವು ಯಾವುದೇ ಸರಕಾರಿ ಕಚೇರಿಗೆ ಅಲೆಯ ಬೇಕಾಗಿಲ್ಲ. ಬದಲಾಗಿ ಪಿಎಂ ಕಿಸಾನ್ ಯೋಜನೆಯ ಪೋರ್ಟಲ್‌ಗೆ ಭೇಟಿ ನೀಡಿ. ಅದರಲ್ಲಿ ಸಂಬಂಧಿಸಿರುವ ಆಯ್ಕೆಯನ್ನು ಸೆಲಕ್ಟ್ ಮಾಡಿ. ನಂತರದಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿಕೊಳ್ಳಿ. (search) ಕ್ಯಾಪ್ಚಾ (CAPTCHA) ಕೋಡ್ ಅನ್ನು ಬಳಸಿ ಮಾಹಿತಿ ಪೂರ್ಣಗೊಳಿಸಿ.
ಹೊಸ ಮೊಬೈಲ್ ಸಂಖ್ಯೆಯನ್ನು ನವೀಕರಿಸಿ
ಪಿಎಂ ಕಿಸಾನ್ ಯೋಜನೆಯ ಅಡಿಯಲ್ಲಿ ಒಂದೊಮ್ಮೆ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಬದಲಾಯಿಸಲು ಯೋಚಿಸುತ್ತಾ ಇದರೆ, ಇದಕ್ಕೂ ಅವಕಾಶ ಕಲ್ಪಿಸಲಾಗಿದೆ. ಆಧಾರ್ ಕಾರ್ಡ್‌ಗೆ ಹೊಸ ಮೊಬೈಲ್ ಸಂಖ್ಯೆಯನ್ನು ಅಪ್ಡೇಟ್ಸ್ ಮಾಡಿದಾಗ, ಅದನ್ನು ಬದಲಾಯಿಸುವುದಕ್ಕೆ ಇದೀಗ ಪಿಎಂ ಕಿಸಾನ್ ಯೋಜನೆಯ ಅಡಿಯಲ್ಲಿ ಅವಕಾಶವಿದೆ.
ಪಿಎಂ ಕಿಸಾನ್ ಯೋಜನೆಯಡಿ ಮೊಬೈಲ್ ಸಂಖ್ಯೆಯನ್ನು ನವೀಕರಿಸುವುದಕ್ಕೆ ಪೋರ್ಟಲ್‌ನಲ್ಲಿ ಇರುವ ‘Update Mobile Number’ (ಮೊಬೈಲ್ ಸಂಖ್ಯೆ ನವೀಕರಿಸಿ) ಆಯ್ಕೆಯನ್ನು ಸೆಲೆಕ್ಟ್ ಮಾಡಿ. ಅಲ್ಲಿ ನಿಮ್ಮ ಆಧಾರ್ ಸಂಖ್ಯೆ ಅಥವಾ ನೋಂದಣಿ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸುವ ಮೂಲಕ ನಿಮ್ಮ ದಾಖಲೆಯನ್ನು ಪತ್ತೆಹಚ್ಚಬೇಕು. ನಂತರ ಅಗತ್ಯ ದಾಖಲೆಗಳ ವಿವರಗಳನ್ನು ನಮೂದಿಸಿ.
ಅರ್ಹತೆ ಇಲ್ಲದ ಫಲಾನುಭವಿಗಳಿಗೆ ಹಣ ಮರುಪಾವತಿ
ಒಂದೊಮ್ಮೆ ವ್ಯಕ್ತಿಯೋರ್ವ ಪಿಎಂ-ಕಿಸಾನ್ (PM-Kisan) ಯೋಜನೆಗೆ ಅರ್ಹ ಅಲ್ಲಾ ಅನ್ನೋದು ಗೊತ್ತಿದ್ದು ಕೂಡ ತನ್ನ ಖಾತೆಗೆ ಕಂತಿನ ಹಣ ಪಡೆಯುವುದನ್ನು ಮುಂದುವರಿಸಿದ್ರೆ, ಅಂತಹ ಹಣವನ್ನು ಮರುಪಾವತಿ ಮಾಡುವುದಕ್ಕೆ ಪೋರ್ಟಲ್‌ನಲ್ಲಿ ಆನ್‌ಲೈನ್ ಸೌಲಭ್ಯವಿದೆ. ನಿಮ್ಮ ನೋಂದಣಿ ಸಂಖ್ಯೆ ಅಥವಾ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ (captcha) ಕೋಡ್ ಅನ್ನು ನಮೂದಿಸಿ, ನಂತರ ‘Get OTP’ ಆಯ್ಕೆಯನ್ನು ಆರಿಸಿ. ಯೋಜನೆಯ ವೆಬ್‌ಸೈಟ್‌ನಲ್ಲಿ ನೀಡಿರುವ ಸೂಚನೆಯನ್ನು ಆಧರಿಸಿ ಮರುಪಾವತಿ ಮಾಡಬಹುದು.
ಪಿಎಂ-ಕಿಸಾನ್ ಯೋಜನೆಗೆ ಸಂಬಂಧಪಟ್ಟ ಸಮಸ್ಯೆಗಳು ಬಗೆ ಹರಿಯದೇ ಉಳಿದಿದ್ದರೆ, ರೈತರು ನೇರವಾಗಿ ಅಧಿಕಾರಿಗಳನ್ನು ಸಂಪರ್ಕಿಸಬಹುದು. ವೆಬ್‌ಸೈಟ್‌ನಲ್ಲಿ Find your POC (Point of Contact) ಎಂಬ ಆಯ್ಕೆ ಲಭ್ಯವಿದೆ. ಒಂದೊಮ್ಮೆ ರಾಜ್ಯಮಟ್ಟದ ಅಧಿಕಾರಿಗಳ ಮಾಹಿತಿಯನ್ನು ಪಡೆಯಲು State Nodal Contact Details ಪಡೆಯಲು ಅವಕಾಶವಿದೆ.
ಇನ್ನು ಜಿಲ್ಲಾಮಟ್ಟದಲ್ಲಿ ಪರಿಹಾರ ಮಾಡಬಹುದಾಗಿರುವ ಸಮಸ್ಯೆ ಆಗಿದ್ದರೆ ನೀವು Find District Nodal ಆಯ್ಕೆಯನ್ನು ಬಳಕೆ ಮಾಡಬಹುದು. ರಾಜ್ಯ, ಜಿಲ್ಲೆಯ ಆಯ್ಕೆ ಮಾಡುವ ಮೂಲಕ ರೈತರು ಸಂಬಂಧಪಟ್ಟ ಅಧಿಕಾರಿಯ ಹೆಸರು, ದೂರವಾಣಿ ಸಂಖ್ಯೆ ಮತ್ತು ಇ ಮೇಲ್ ವಿಳಾಸವನ್ನು ಪಡೆಯಬಹುದಾಗಿದೆ.