ಆಧಾರ್ ಕಾರ್ಡ್‌ನಲ್ಲಿ ಹೆಸರು ಬದಲಾವಣೆ ಇನ್ನು ಸುಲಭವಲ್ಲ : UIDAIನಿಂದ ಹೊಸ SOP ಬಿಡುಗಡೆ, ಏನಿದು ಹೊಸ ರೂಲ್ಸ್ ?
ಇನ್ಮುಂದೆ ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಹೆಸರನ್ನು ಬದಲಾಯಿಸೊದಕ್ಕೆ ಅಥವಾ ತಿದ್ದುಪಡಿ ಮಾಡೋದಕ್ಕೆ ಅಷ್ಟು ಸುಲಭವಿಲ್ಲ. ಯಾಕಂದ್ರೆ ಯುಐಡಿಎಐ ಹೊಸ (SOP) ಬಿಡುಗಡೆ ಮಾಡಿದೆ.
By Arun Gundmi | ಅರುಣ್ ಗುಂಡ್ಮಿ · Editor-in-Chief
2 min read
ನವದೆಹಲಿ : ಭಾರತದಲ್ಲಿ ಜನಿಸಿದ ಪ್ರತಿಯೊಬ್ಬರೂ ಕೂಡ ಆಧಾರ್ ಕಾರ್ಡ್ (aadhar card) ಹೊಂದುವುದನ್ನು ಕಡ್ಡಾಯಗೊಳಿಸಲಾಗಿದೆ. ಇಷ್ಟು ದಿನ ಆಧಾರ್ ಕಾರ್ಡ್‌ನಲ್ಲಿರುವ ತಮ್ಮ ಹೆಸರನ್ನು ಸುಲಭವಾಗಿ ಬದಲಾವಣೆ ಮಾಡಬಹುದಾಗಿತ್ತು. ಆದರೆ ಇನ್ಮುಂದೆ ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಹೆಸರನ್ನು ಬದಲಾಯಿಸೊದಕ್ಕೆ ಅಥವಾ ತಿದ್ದುಪಡಿ ಮಾಡೋದಕ್ಕೆ ಅಷ್ಟು ಸುಲಭವಿಲ್ಲ. ಯಾಕಂದ್ರೆ ಯುಐಡಿಎಐ ಹೊಸ ಕಾರ್ಯಾಚರಣೆಯ ವಿಧಾನ (SOP) ಬಿಡುಗಡೆ ಮಾಡಿದೆ. ಹೊಸ ರೂಲ್ಸ್‌ನಲ್ಲಿ ಏನಿದೆ ಅನ್ನೋ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಆಧಾರ್ ಕಾರ್ಡ್‌ನಲ್ಲಿ ಹೆಸರ ಬದಲಾಯಿಸೊದಕ್ಕೆ ಹೊಸ ರೂಲ್ಸ್
ಆಧಾರ್ ಕಾರ್ಡ್ ಅನ್ನು ಭಾರತ ಪೌರತ್ವದ ದಾಖಲೆಯಾಗಿ ಬಳಕೆ ಮಾಡಲಾಗುತ್ತಿದೆ. ವಿವಿದ ಉದ್ದೇಶಗಳಿಗಾಗಿ ಪ್ರಮುಖ ಗುರುತಿನ ದಾಖಲೆ ಎನಿಸಿಕೊಂಡಿದೆ. ಹಿಂದೆಲ್ಲಾ ಆಧಾರ್ ಕಾರ್ಡ್‌ನಲ್ಲಿ ಹೆಸರು, ವಿಳಾಸ ಬದಲಾವಣೆಯನ್ನು ಸುಲಭವಾಗಿ ಮಾಡಬಹುದಿತ್ತು. ಆದರೆ ಇನ್ಮುಂದೆ ಅಷ್ಟು ಸುಲಭವಾಗಿ ಆಧಾರ್ ಕಾರ್ಡ್‌ನಲ್ಲಿರುವ ಹೆಸರನ್ನು ಬದಲಾವಣೆ ಮಾಡೋದಕ್ಕೆ ಸಾಧ್ಯವಿಲ್ಲ.
ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) ಆಧಾರ್ ಕಾರ್ಡ್ ನಲ್ಲಿ ಹೆಸರನ್ನು ನವೀಕರಣ ಮಾಡಲು ಹೊಸ ಎಸ್‌ಒಪಿಯೊಂದನ್ನು ಬಿಡುಗಡೆ ಮಾಡಿದೆ. ಇನ್ಮುಂದೆ ಹೆಸರು ಬದಲಾವಣೆ ಮಾಡೋದಕ್ಕೆ ಕಡ್ಡಾಯವಾಗಿ ನಿರ್ಧಿಷ್ಟ ದಾಖಲೆಗಳನ್ನು ಸಲ್ಲಿಸಲೇ ಬೇಕಾಗಿದೆ. ಆಧಾರ್ ಕಾರ್ಡ್‌ನಲ್ಲಿರುವ ಹೆಸರನ್ನು ಯಾವ ರೀತಿಯಲ್ಲಿ ಬದಲಾವಣೆ ಮಾಡಬಹುದು ಅನ್ನೋದನ್ನು UIDAI ವೆಬ್‌ಸೈಟ್‌ನಲ್ಲಿ "Standard Operating Procedure (SOP) for Name Update in Aadhaar" ಶೀರ್ಷಿಕೆಯಲ್ಲಿ ನೀಡಲಾಗಿದೆ.
ಆಧಾರ್ ಹೊಸ ಎಸ್‌ಒಪಿ ( SOP) ಎಂದರೇನು ?
ಎಸ್ಓಪಿಯನ್ನು ಪ್ರಾಮಾಣಿಕ ಕಾರ್ಯಾಚರಣೆ ವಿಧಾನ (Standard Operating Procedure) ಎನ್ನಲಾಗುತ್ತದೆ. ಎಸ್‌ಒಪಿ ವಿವಿಧ ಸಂದರ್ಭಗಳಲ್ಲಿ ನೀವು ಅನುಸರಿಸಬೇಕಾದ ಕಾರ್ಯ, ಅಗತ್ಯವಿರುವ ದಾಖಲೆ ಹಾಗೂ ಸಂಬಂಧಿಸಿರುವ ನಿಬಂಧನೆಗಳು ಯಾವುವು ಅನ್ನೋದನ್ನು ವಿವರಿಸುತ್ತದೆ. ಆಧಾರ್ ಕಾರ್ಡ್‌ನಲ್ಲಿ ಹೆಸರನ್ನು ನವೀಕರಿಸೋದಕ್ಕೆ ಯುಐಡಿಎಐ ಇದೇ ರೀತಿಯಲ್ಲಿ ಎಸ್‌ಓಪಿಯನ್ನು ಬಿಡುಗಡೆ ಮಾಡಿದೆ.
ಹೊಸ ಎಸ್‌ಒಪಿಯಲ್ಲಿ ಆಧಾರ್ ಕಾರ್ಡ್ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಯಾವ ತಿದ್ದುಪಡಿ ಮಾಡುತ್ತೇವೋ, ಅದಕ್ಕೆ ಅಗತ್ಯವಿರುವ, ಪೂರಕವಾಗಿರುವ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಯುಐಎಡಿಐನಲ್ಲಿ ನೀವು ಯಾವ ದಾಖಲೆಗಳನ್ನು ಸಲ್ಲಿಸಬೇಕು ಅನ್ನುವ ಕುರಿತ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
ದತ್ತಾಂಶ ದೋಷಕ್ಕೆ ಪ್ರತ್ಯೇಕ ಅಫಿಡವಿಟ್
ದತ್ತಾಂಶದಲ್ಲಿ ನಮೂದನೆಯ ದೋಷದಿಂದ ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಹೆಸರು ತಪ್ಪಾಗಿದ್ದರೆ, ಅದಕ್ಕೆ ಅಫಿಡವಿಟ್ ಸಲ್ಲಿಕೆ ಮಾಡುವುದು ಕಡ್ಡಾಯವಾಗಿದೆ. ನಿಮ್ಮ ಹೆಸರು ಹಾಗೂ ಸಲ್ಲಿಕೆ ಮಾಡುತ್ತಿರುವ ದಾಖಲೆಯಲ್ಲಿ ಸರಿಯಾಗಿದ್ದರೆ ಮಾತ್ರವೇ ಬದಲಾವಣೆಗೆ ಅವಕಾಶ ಇರಲಿದೆ.
ವಯಸ್ಸರು 'ಅನೆಕ್ಸರ್-ಬಿ' (Annexure-B) ಮತ್ತು ಅಪ್ರಾಪ್ತರಿಗೆ 'ಅನೆಕ್ಸರ್-ಸಿ' (Annexure-C) ಬಳಸಿ ಅಫಿಡವಿಟ್ ಸಲ್ಲಿಕೆ ಮಾಡಬೇಕಾಗುತ್ತದೆ. ಅಫಿಡವಿಟ್ ಜೊತೆಗೆ ನಿಗದಿತ ಗುರುತು ಅಥವಾ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಕೆ ಮಾಡುವುದು ಇನ್ಮುಂದೆ ಕಡ್ಡಾಯವಾಗಿ ಇರಲಿದೆ.
ವಿವಾಹ ಅಥವಾ ವಿಚ್ಚೇದನದ ಬಳಿಕ ಸರ್‌ನೇಮ್ ಬದಲಾವಣೆ
ಸಾಮಾನ್ಯವಾಗಿ ಮಹಿಳೆಯರು ಮದುವೆಯಾದ ನಂತರ ಅಥವಾ ವಿಚ್ಚೇಧನದ ಬಳಿಕ ತಮ್ಮ ಹೆಸರಿನಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾರೆ. ಆದರೆ ಇಂತಹ ಸಂದರ್ಭದಲ್ಲಿ ತಮ್ಮ ಸರ್ ನೇಮ್ ಬದಲಾವಣೆ ಮಾಡಬೇಕಾದ್ರೆ ಅನೆಕ್ಸರ್-ಡಿ (Annexure-D) ಮಾದರಿಯಲ್ಲಿ ಅಫಿಡವಿಟ್ ಸಲ್ಲಿಕೆ ಮಾಡಬೇಕು. ಜೊತೆಗೆ ಅಗತ್ಯ ದಾಖಲೆ ಸಲ್ಲಿಸಬೇಕಾಗಿದೆ.
ಅಡ್ಡ ಹೆಸರು ಅಥವಾ ಅಲಿಯಾಸ್ ತೆಗೆದು ಹಾಕೋದಕ್ಕೆ ಪ್ರತ್ಯೇಕ ಅವಕಾಶ
ಒಂದೊಮ್ಮೆ ನಿಮ್ಮ ಹೆಸರಿನ ಜೊತೆಗೆ ಅಲಿಯಾಸ್ (ಉದಾಹರಣೆಗೆ 'alias' ಅಥವಾ 'urf') ಅಂತಾ ಇದ್ದರೆ, ಅಥವಾ ಒಂದು ಇನಿಷಿಯಲ್ (initial) ಇದ್ದು, ಅದನ್ನು ಬದಲಾಯಿಸಬೇಕಾದ್ರೆ ವಯಸ್ಕರಿಗೆ 'ಅನೆಕ್ಸರ್-ಇ' (Annexure-E) ಮತ್ತು ಅಪ್ರಾಪ್ತರಿಗೆ 'ಅನೆಕ್ಸರ್-ಎಫ್' (Annexure-F) ಬಳಸಿ ಅಫಿಡವಿಟ್ ಸಲ್ಲಿಕೆ ಮಾಡಬೇಕಾಗುತ್ತದೆ. ಇದರ ಜೊತೆಗೆ ನಿಗದಿತ ಗುರುತು ಅಥವಾ ಸಂಬಂಧದ ದಾಖಲೆಗಳನ್ನು ಸಲ್ಲಿಸಬೇಕಾಗಿದೆ.
ಹೆಸರು ಬದಲಾವಣೆಗೆ ಗಜೆಟ್ ಅಧಿಸೂಚನೆ ಕಡ್ಡಾಯ
ವಯಸ್ಕರು ಇನ್ಮುಂದೆ ತಮ್ಮ ಗುರುತನ್ನು ಬದಲಾವಣೆ ಮಾಡಬೇಕಾದ್ರೆ ಗಜೆಟ್ ಅಧಿಸೂಚನೆ ಕಡ್ಡಾಯವಾಗಿದೆ. ಯುಐಡಿಎಐ ( UIDAI) ಮಾರ್ಗಸೂಚಿಯಪ್ರಕಾರ, ಮೊದಲ ಹೆಸರು ಅಥವಾ ಪೂರ್ಣ ಹೆಸರನ್ನು ಬದಲಾಯಿಸಲು ಗೆಜೆಟ್ ಅಧಿಸೂಚನೆ ಇಲ್ಲಾ, ಹಳೆಯ ಹೆಸರನ್ನು ಹೊಂದಿರುವ ಗುರುತಿನ ದಾಖಲೆಯನ್ನು ಸಲ್ಲಿಸುವುದು ಅಗತ್ಯ. ಇಷ್ಟೇ ಅಲ್ಲದೇ ಹುದ್ದೆ ಅಥವಾ ಬಿರುದುಗಳನ್ನು ತೆಗೆದು ಹಾಕುವುದಕ್ಕೆ ಅವಕಾಶವೂ ಇದೆ.
ನಿಮ್ಮ ಹೆಸರಿನ ಮುಂದೆ ಡಾ., ಶ್ರೀಮತಿ, ಕರ್ನಲ್ ಅಥವಾ ಇನ್ನು ಯಾವುದೇ ರೀತಿಯ ಹೆಸರು, ಬಿರುದು ಅಥವಾ ಶ್ರೇಣಿಗಳು ಇದ್ದರೆ ಅವುಗಳನ್ನು ತೆಗೆದು ಹಾಕುವುದಕ್ಕೆ ಹೊಸದಾಗಿ ಬಿಡುಗಡೆ ಆಗಿರುವ ಎಸ್‌ಒಪಿಯಲ್ಲಿ ಅವಕಾಶ ಇದೆ. ಇಂತಹ ಸಂದರ್ಭಗಳಲ್ಲಿ ನೀವು ನಿಗದಿತ ಗುರುತಿನ ದಾಖಲೆಗಳ ಆಧಾರದ ಮೇಲೆ ಪ್ರತಿಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ.
ಒಂದೊಮ್ಮೆ ನಿಮ್ಮ ಹೆಸರನ್ನು ಬದಲಾಯಿಸಬೇಕು ಅಂತಾ ಅಂದು ಕೊಂಡಿದ್ರೆ ಯಾವುದೇ ಕಾರಣಕ್ಕೂ ಹಳೆಯ ಅಫಿಡವಿಟ್ ಗಳನ್ನು ಬಳಸಿಕೊಂಡು ಅರ್ಜಿಗಳನ್ನು ಸಲ್ಲಿಸಲೇ ಬೇಡಿ. ಯುಐಡಿಎಐ ( UIDAI) ಬಿಡುಗಡೆ ಮಾಡಿರುವ ಎಸ್‌ಒಪಿ ಅಡಿಯಲ್ಲಿಯೇ ಹೆಸರು ನವೀಕರಣಕ್ಕಾಗಿ ಆಧಾರ್ ಕೇಂದ್ರಕ್ಕೆ ಭೇಟಿ ನೀಡುವುದು ಕಡ್ಡಾಯವಾಗಿದೆ. ಹೊಸ ಎಸ್‌ಒಪಿ ಪ್ರಕಾರ ನಿಮ್ಮ ಹೆಸರನ್ನು ಬದಲಾವಣೆ ಮಾಡೋದಕ್ಕೆ ಎರಡು ಬಾರಿ ಅವಕಾಶ ಇರಲಿದೆ.
Topics
ಸಂಬಂಧಿತ ಸುದ್ದಿಗಳು
business
ಭಾರತದಲ್ಲಿ ಡಿಜಿಟಲ್ ಪಾವತಿ ಕ್ರಾಂತಿ : ಕೇವಲ 6 ತಿಂಗಳಲ್ಲಿ ಯುಪಿಐ ವಹಿವಾಟಿನಲ್ಲಿ ಭಾರಿ ಪ್ರಗತಿ
business
Gold Price 2027 : ಚಿನ್ನಪ್ರಿಯರಿಗೆ ಶಾಕಿಂಗ್ ನ್ಯೂಸ್: 2027ರಲ್ಲಿ 2 ಲಕ್ಷದ ಗಡಿದಾಟುತ್ತೆ ಚಿನ್ನದ ದರ, ಬಾಬಾ ವಂಗಾ ಭವಿಷ್ಯವಾಣಿ
business
New BPL Card : ಹೊಸ ಬಿಪಿಎಲ್ ಕಾರ್ಡ್ಗೆ ಕಾಯುತ್ತಿರುವವರಿಗೆ ಗುಡ್ನ್ಯೂಸ್ : ಅರ್ಜಿ ಸಲ್ಲಿಕೆ ಯಾವಾಗ ? ಇಲ್ಲಿದೆ ಮಾಹಿತಿ
business

